By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಟೌನ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಾಮಾನ್ಯ ಮಹಾಸಭೆ
    ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ₹22.11 ಲಕ್ಷ ನಿವ್ವಳ ಲಾಭ
    10 hours ago
    ಎಂ.ನಿಶ್ಚಿತ್ (ಚಿಂಟು) ಅವರ ಪದಗ್ರಹಣ ಸಮಾರಂಭ
    ಯುವಕರ ಸಂಘಟನೆಗೆ ಆದ್ಯತೆ | ಭಾರತ ಜೋಡೋ ಸಂಘಟನೆ ಮೂಲಕ ಪಕ್ಷ ಬಲವರ್ಧನೆ
    10 hours ago
    G.H. Mohan Kumar
    ಪೌರ ಕಾರ್ಮಿಕರ ಬಗ್ಗೆ ಹಗುರ ಮಾತು | ಕೃಷ್ಣಭೈರೇಗೌಡರ ಕ್ಷಮೆಗೆ ಆಗ್ರಹ
    10 hours ago
    ಅರ್ಜಿ ಅಹ್ವಾನ
    ಅರಿವು ಶೈಕ್ಷಣಿಕ ಸಾಲ | ಅರ್ಜಿ ಅಹ್ವಾನ 
    17 hours ago
    ಚಿತ್ರದುರ್ಗ ಅಂಚೆ ಕಚೇರಿ
    ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆ | ಅಂಚೆ ವಿಭಾಗದಿಂದ ಆಹ್ವಾನ
    17 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    2 weeks ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    3 weeks ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 months ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    2 months ago
  • ತಾಲೂಕು
    ತಾಲೂಕುShow More
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    3 days ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    2 days ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    3 days ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    3 months ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    3 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 06 | ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ, ಹಠಾತ್ ಆರ್ಥಿಕ ಲಾಭದ ಸೂಚನೆ
    1 day ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 05 | ಶ್ರಮಕ್ಕೆ ತಕ್ಕ ಫಲಿತಾಂಶ ಅರೋಗ್ಯದಲ್ಲಿ ಜಾಗೃತಿ ವಹಿಸಿ
    2 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 04 | ಉದ್ಯೋಗಗಳಲ್ಲಿ ಕೆಲಸದ ಒತ್ತಡ, ದೂರದ ಪ್ರಯಾಣ ಬೇಡ
    3 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 03 | ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು, ಉದ್ಯೋಗದಲ್ಲಿ ಗೊಂದಲದ ಪರಿಸ್ಥಿತಿ
    4 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 02 | ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಲಾಭ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 05 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 04 | ರಾಗಿ, ಶೇಂಗಾ ರೇಟ್…..
    3 days ago
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    4 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 02 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
    5 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 01 | ಹತ್ತಿ ರೇಟ್ ಎಷ್ಟಿದೆ?
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    1 day ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    1 day ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    6 days ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    3 weeks ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    4 weeks ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    3 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    3 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    5 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    7 months ago
  • ಹೊಸದುರ್ಗ
    ಹೊಸದುರ್ಗShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    2 months ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    3 months ago
  • Life Style
    Life StyleShow More
    white and blue conch flowers
    ಬಿಳಿ ಮತ್ತು ನೀಲಿ ಶಂಖಪುಷ್ಪ ಹೂಗಳಲ್ಲಿ ಸೇವಿಸಲು ಯಾವುದು ಉತ್ತಮ?
    22 hours ago
    coconut oil to your hair
    ಕೂದಲಿಗೆ ತೆಂಗಿನ ಎಣ್ಣೆ ಹಚ್ಚುವಾಗ ಈ ತಪ್ಪು ಮಾಡಿದರೆ ನಿಮ್ಮ ಕೂದಲಿಗೆ ಹಾನಿಯಾಗಬಹುದು
    23 hours ago
    PCOS
    ಪಿಸಿಓಎಸ್‍ನಿಂದ ಬಳಲುತ್ತಿರುವವರು ಈ ಹಣ್ಣುಗಳನ್ನು ತಿನ್ನಿ
    2 days ago
    Eucalyptus oil
    ಶೀತದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಈ ಎಣ್ಣೆಯನ್ನು ಬಳಸಿ
    2 days ago
    Iron deficiency in women
    ಮಹಿಳೆಯರು ಕಬ್ಬಿಣದ ಕೊರತೆಯನ್ನು ನೀಗಿಸಲು ಈ 5 ಆಹಾರಗಳನ್ನು ಸೇವಿಸಿ
    3 days ago
Reading: ಬಾಯಲ್ಲಿ ಸವೆದ ಪೆಪ್ಪರ್ ಮೆಂಟಿನಾಕಾರದ ಒಂದು ಚಂದ್ರ ಕಂಡರೆ | ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ವಿಶೇಷ ಲೇಖನ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಬಾಯಲ್ಲಿ ಸವೆದ ಪೆಪ್ಪರ್ ಮೆಂಟಿನಾಕಾರದ ಒಂದು ಚಂದ್ರ ಕಂಡರೆ | ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ವಿಶೇಷ ಲೇಖನ

News Desk Chitradurga News
Last updated: 9 April 2024 19:00
News Desk Chitradurga News
2 years ago
Share
TARABALU 2
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
SHARE

CHITRADURGA NEWS | 9 APRIL 2024
ಚಿತ್ರದುರ್ಗ: ಭಾರತೀಯರು ವಿಶ್ವದ ಇತರೆ ದೇಶಗಳ ಜನರಂತೆ ದೈನಂದಿನ ವ್ಯವಹಾರದಲ್ಲಿ ಇಂಗ್ಲಿಷ್ ಕ್ಯಾಲೆಂಡರನ್ನೇ ಅನುಸರಿಸುತ್ತಾರೆ. ಆದರೆ ಹಬ್ಬ ಹರಿದಿನಗಳನ್ನು ಆಚರಿಸುವಾಗ ಮಾತ್ರ ಸಾಂಪ್ರದಾಯಿಕವಾಗಿ ದೇಶೀಯ ಪಂಚಾಂಗದ ತಿಥಿ ವಾರ ನಕ್ಷತ್ರಗಳನ್ನು ನೋಡುತ್ತಾರೆ. ಅಂತಹ ಹಬ್ಬಗಳಲ್ಲಿ ಒಂದು ಪ್ರಮುಖವಾದ ಹಬ್ಬ ‘ಯುಗಾದಿ’.

ಉತ್ತರ ಭಾರತೀಯರು ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸಿದರೆ, ದಕ್ಷಿಣ ಭಾರತೀಯರು ಚಂದ್ರನ ಚಲನೆಯನ್ನು ಆಧರಿಸಿ ಚಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಫಾಲ್ಗುಣ ಮಾಸದ ಅಮಾವಾಸ್ಯೆಯ ಮರುದಿನವೇ ಬರುವ ಚೈತ್ರ ಮಾಸದ ಪಾಡ್ಯದ ದಿವಸವೇ ಯುಗಾದಿ ಹಬ್ಬ.

ನೂತನ ವರ್ಷದ ಮೊದಲ ದಿನ. ಹೊಸ ಚಿಗುರಿನಿಂದ ಗಿಡ ಮರಗಳು ಶೋಭಿಸುವಂತೆ ಜನರು ಮೈಗೆ ಎಣ್ಣೆ ನೀರು ಹಾಕಿಕೊಂಡು ಹೊಸ ಬಟ್ಟೆಯನ್ನು ಉಟ್ಟು ಸಡಗರ ಸಂಭ್ರಮಗಳಿಂದ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ವರಕವಿ ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ:

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ!

ಈ ಯುಗಾದಿ ಹಬ್ಬ ಕರ್ನಾಟಕದಲ್ಲಿ ಎಷ್ಟೊಂದು ಪ್ರಸಿದ್ಧವೆಂದರೆ ಗ್ರಾಮೀಣ ಜನರ ಬಾಯಲ್ಲಿ ಒಂದು ಪ್ರಸಿದ್ಧವಾದ ಹಾಗೂ ಅತ್ಯಂತ ಶಕ್ತಿಯುತವಾದ ನಾಣ್ಣುಡಿಯೇ ಇದೆ: ‘ಊರೆಲ್ಲಾ ಉಗಾದಿ ಮಾಡಿದರೆ, ಅಡ್ನಾಡಿ ಅಮಾಸ್ಯೆ ಮಾಡಿತ್ತಂತೆ!’ ಜನರೊಂದಿಗೆ ಹೊಂದಿಕೊಂಡು ಬಾಳುವುದನ್ನು ಬಿಟ್ಟು ತನ್ನದೇ ಆದ ವಿಚಿತ್ರ ರೀತಿಯಲ್ಲಿ ವರ್ತಿಸುವ ಸ್ವಪ್ರತಿಷ್ಠೆಯ ವ್ಯಕ್ತಿಯನ್ನು ಕಂಡು ಹಳ್ಳಿಯ ಜನರು ಆಡುವ ಮೂದಲಿಕೆಯ ಮಾತಿದು.

ಭಾರತೀಯ ದಾರ್ಶನಿಕರು ಕಾಲವನ್ನು ಎರಡು ಭಾಗವಾಗಿ ವಿಂಗಡಿಸುತ್ತಾರೆ ಒಂದು ಪರ ಮತ್ತೊಂದು ಅಪರ. “ಪರ” ಎಂದು ಕರೆಸಿಕೊಳ್ಳುವ ಕಾಲ ಅಖಂಡ. ಅದರಲ್ಲಿ ಭೂತ, ಭವಿಷ್ಯ ವರ್ತಮಾನಗಳ ಪ್ರಭೇದಗಳು ಇರುವುದಿಲ್ಲ. ಏಕೆಂದರೆ ಅದು ಅನಾದಿ ಮತ್ತು ಅನಂತ. ಅದರ ಅನುಭವ ಮನುಷ್ಯನಿಗೆ ಆಗುವುದು ಕಷ್ಟ. ಏಕೆಂದರೆ ಮನುಷ್ಯನು ಕಾಲ ಮತ್ತು ದೇಶದ ಪರಿಮಿತಿಗೆ ಒಳಪಟ್ಟವನು; ಅವುಗಳನ್ನು ಮೆಟ್ಟಿ ನಿಲ್ಲಲು ಅವನಿಂದ ಸಾಧ್ಯವಿಲ್ಲ. ಕಾಲಾತೀತ, ದೇಶಾತೀತನಾಗಿರಲು ಭಗವಂತನಿಂದ ಮಾತ್ರ ಸಾಧ್ಯ. ಇನ್ನು ಮನುಷ್ಯನ ಗ್ರಹಿಕೆಗೆ ಬರುವ ಕಾಲವನ್ನು ‘ಅಪರ’ ಎಂದು ಕರೆಯುತ್ತಾರೆ.

ಕ್ಲಿಕ್‌ ಮಾಡಿ ಓದಿ:‌ ಮನೆಯಿಂದಲೇ ಮತದಾನಕ್ಕೆ ಡೇಟ್ ಫಿಕ್ಸ್ | ಕೇವಲ ಮೂರು ದಿನ ಅವಕಾಶ

ಅದು ಭೂತ, ಭವಿಷ್ಯ, ವರ್ತಮಾನವಾಗಿ ಮನುಷ್ಯನ ಜೀವನದಲ್ಲಿ ಅನುಭವಕ್ಕೆ ಬರುತ್ತದೆ. ನಾಳೆಯ ಭವಿಷ್ಯ ಇಂದಿನ ವರ್ತಮಾನವಾಗಿ ಬಂದು ನಿನ್ನೆಯ ಭೂತಕಾಲಕ್ಕೆ ಖಾಯಂ ಆಗಿ ಸರಿದು ಹೋಗುತ್ತದೆ. ಮತ್ತೆ ನಾಳೆಯ ಭವಿಷ್ಯತ್ ಕಾಲದಲ್ಲಿ ಏನು ಕಾದಿದೆಯೋ ಎಂಬ ಆತಂಕದಲ್ಲಿಯೇ ಮತ್ತೆ ಮನುಷ್ಯ ಸದಾ ಬದುಕುತ್ತಾನೆ.

ನಾಳೆಯ ಭವಿಷ್ಯ ಇಂದಿನ ವರ್ತಮಾನದಲ್ಲಿ ಅನುಭವಕ್ಕೆ ಬಂದಾಗ ಅದು ಕೆಲವೊಮ್ಮೆ ಸುಖವಾಗಿ ಪರಿಣಮಿಸಿ ಮನುಷ್ಯನ ಮನಸ್ಸನ್ನು ಉಲ್ಲಾಸಗೊಳ್ಳುವಂತೆ ಮಾಡಬಹುದು ಅಥವಾ ಕೆಲವೊಮ್ಮೆ ದುಃಖವಾಗಿ ಪರಿಣಮಿಸಿ ಮನುಷ್ಯನ ಮನಸ್ಸನ್ನು ಘಾಸಿಗೊಳಿಸಬಹುದು. ಹಾಗೆಯೇ ವರ್ತಮಾನ ಕಾಲದಲ್ಲಿ ಸುಖದ ಅನುಭವವನ್ನು ತಂದು ಆಹ್ಲಾದವನ್ನುಂಟುಮಾಡಿ ಭೂತಕಾಲಕ್ಕೆ ಸರಿದು ಹೋದ ಕಾಲ ಸುಖದ ನೆನಪುಗಳನ್ನು ಮತ್ತೆ ಮತ್ತೆ ತಂದು ಕೊಟ್ಟು ಮನುಷ್ಯ ಸದಾ ಅದಕ್ಕಾಗಿ ಹಪ ಹಪಿಸುವಂತೆ ಮಾಡುತ್ತದೆ.

ಅಂತೆಯೇ ವರ್ತಮಾನದಲ್ಲಿ ದುಃಖದ ಕಹಿ ಅನುಭವವನ್ನುಂಟು ಮಾಡಿ ಭೂತಕಾಲಕ್ಕೆ ಸರಿದು ಹೋದ ಕಾಲ ಮತ್ತೆ ಮತ್ತೆ ನೆನಪಿಗೆ ಬರಬಹುದಾದರೂ ಮನುಷ್ಯ ಅದನ್ನು ಮರೆಯಲು ಬಯಸುತ್ತಾನೆಯೇ ಹೊರತು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅಷ್ಟೇ ಅಲ್ಲ, ಅಂತಹ ಕಹಿ ಅನುಭವ ಮತ್ತೆ ಭವಿಷ್ಯತ್ತಿನಲ್ಲಿ ಉಂಟಾಗುವುದನ್ನೂ ಸಹ ಬಯಸುವುದಿಲ್ಲ. ಆದರೆ ಕಾಲದ ಗತಿ ಮನುಷ್ಯನ ಇಷ್ಟಾನಿಷ್ಟಗಳನ್ನು ಅವಲಂಬಿಸಿರುವುದಿಲ್ಲ. ಅವನಿಗೆ ಇಷ್ಟ ಇರಲಿ ಇಲ್ಲದಿರಲಿ ಸುಖದುಃಖಗಳು ಮನುಷ್ಯನ ಜೀವನದಲ್ಲಿ ಗೋಡೆಯ ಗಡಿಯಾರದ ಲೋಲಕದಂತೆ ಸದಾ ಓಲಾಡುತ್ತಲೇ ಇರುತ್ತವೆ (Life is a pedulam oscillating between joy and sorrow).

ಕ್ಲಿಕ್‌ ಮಾಡಿ ಓದಿ:‌ ಲೋಕಸಭೆ ಚುನಾವಣೆ: ದೈನಂದಿನ ಪ್ರಚಾರದ ವೆಚ್ಚದ ಲೆಕ್ಕವಿಡಿ | ಮನೋಹರ್ ಮರಂಡಿ ಸೂಚನೆ

ಒಮ್ಮೆ ಸುಖ ಬಂದರೆ ಮತ್ತೊಮ್ಮೆ ದುಃಖ. ಅವುಗಳಲ್ಲಿ ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಆದರೆ ಜೀವನದಲ್ಲಿ ಹಾಗೆ ಆಗುವುದಿಲ್ಲ. ‘If wishes were horses, beggars would ride’ (ಮನುಷ್ಯನ ಬಯಕೆಗಳು ಕುದುರೆಗಳಾಗಿದ್ದರೆ, ಭಿಕ್ಷುಕರೂ ಅವುಗಳ ಮೇಲೆ ಸವಾರಿ ಮಾಡುತ್ತಿದ್ದರು) ಎಂಬ ಗಾದೆ ಮಾತೊಂದು ಆಂಗ್ಲಭಾಷೆಯಲ್ಲಿದೆ.

ಜೀವನದ ಗೋಡೆಯ ಗಡಿಯಾರದ ಲೋಲಕ ಸುಖದ ಕಡೆಗೆ ನಿಲ್ಲಲಿ ಎಂದು ಮನುಷ್ಯ ಹಾರೈಸುವುದು ಸಹಜ. ಹಾಗೇನಾದರೂ ಆದರೆ ಮನುಷ್ಯನಿಗೆ ಸುಖದ ತೀವ್ರತರವಾದ ಅನುಭವ ಆಗುವುದಿಲ್ಲ. ಅದರಿಂದ ಜೀವನದಲ್ಲಿ ಸ್ವಾರಸ್ಯ ಇರುವುದಿಲ್ಲ. ಲೋಲಕ ಸದಾ ಚಲಿಸುತ್ತಲೇ ಇರಬೇಕು. ಒಂದೆಡೆ ನಿಲ್ಲುವಂತಾದರೆ ಅದು ಗೋಡೆಯ ಗಡಿಯಾರ ಕೆಟ್ಟಿದೆ ಎಂಬುದರ ಸಂಕೇತ ಎಂಬುದನ್ನು ನಾವು ಮರೆಯಬಾರದು.
ಒಮ್ಮೊಮ್ಮೆ ದುಃಖ-ದುಮ್ಮಾನಗಳು, ಕಷ್ಟ-ಕೋಟಲೆಗಳು ಹಠಾತ್ತನೆ ಸುನಾಮಿ ಅಲೆಯಂತೆ ಎಲ್ಲಿಂದಲೋ ಬಂದು ಒಂದರ ಮೇಲೊಂದರಂತೆ ಸರದಿಯ ಮೇಲೆ ಬಂದೆರಗಿ ಮನುಷ್ಯನನ್ನು ಜರ್ಝರಿತಗೊಳಿಸುತ್ತವೆ.“Cowards die many a times before their death” (ಹೇಡಿಗಳಾದವರು ಸಾಯುವುದಕ್ಕೆ ಮುಂಚೆ ಅನೇಕ ಸಾರಿ ಸಾಯುತ್ತಾರೆ) ಎಂದು ಷೇಕ್ಸ್ಪಿಯರ್ ಹೇಳುತ್ತಾನೆ. ಅವುಗಳಿಂದ ಪಾರಾಗುವುದು ಕಷ್ಟಸಾಧ್ಯವಾದರೂ ಅಂತಹ ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಲು ಮನುಷ್ಯ ಸಿದ್ಧನಾಗಿರಬೇಕು.

“ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯಾ!
ಕಾದಿ ಗೆಲಿಸಯ್ಯಾ ಎನ್ನನು ಕಾದಿ ಗೆಲಿಸಯ್ಯಾ!”

ಎನ್ನುತ್ತಾರೆ ಬಸವಣ್ಣನವರು. ರಣರಂಗದಿಂದ ಸೈನಿಕರು ಹಿಮ್ಮೆಟ್ಟಿದರೆ ಅದು ರಾಜನಿಗೆ ಅವಮಾನ! ಅಂತಹ ಅವಮಾನ ಉಂಟಾಗಬಾರದೆಂದರೆ ರಾಜನಾದವನು ತನ್ನ ಸೈನಿಕರನ್ನು ಹುರಿದುಂಬಿಸಿ ತಾನೂ ಅವರೊಟ್ಟಿಗೆ ನಿಂತು ಯುದ್ಧಭೂಮಿಯಲ್ಲಿ ಶತಾಯ ಗತಾಯ ಹೋರಾಡಬೇಕು. ಹಾಗೆ ಜೀವನವೆಂಬ ರಣರಂಗದಲ್ಲಿ ಕಷ್ಟಕೋಟಲೆಗಳಿಗೆ ಹೆದರಿ ಓಡಿಹೋಗದಂತೆ ಧೈರ್ಯವಾಗಿ ನಿಂತು ಹೋರಾಡಿ ಗೆಲ್ಲುವಂತೆ ಹರಸಲು ಬಸವಣ್ಣನವರು ಭಗವಂತನನ್ನು ಬೇಡಿಕೊಂಡಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಹೆದರಿ ಹೇಡಿಯಂತೆ ಹಿಮ್ಮೆಟ್ಟಿ ಓಡುವಂತಾದರೆ ಕೆಟ್ಟ ಹೆಸರು ರಕ್ಷಕನಾದ ದೇವರೇ ನಿನಗೆ ಬರುತ್ತದೆಯೇ ಹೊರತು ನನಗಲ್ಲ ಎಂದು ಭಗವಂತನನ್ನು ಛೇಡಿಸಿ ಅವನ ಅನುಗ್ರಹಕ್ಕಾಗಿ ಹಾತೊರೆದಿದ್ದಾರೆ.

ಕಹಿ ಇದೆ ಎನ್ನುವ ಕಾರಣಕ್ಕಾಗಿಯೇ ಸಿಹಿಯ ಅನುಭವ ಸಾಧ್ಯವಾಗಿರುವುದು. ಒಂದು ಪಕ್ಷ ಕಹಿ ಇಲ್ಲದೇ ಹೋಗಿದ್ದರೆ ಸಿಹಿ ಏನೆಂದು ಅರ್ಥವೇ ಆಗುತ್ತಿರಲಿಲ್ಲ. ಹಾಗೆಯೇ ಸುಖದ ಅನುಭವ. ದುಃಖ ಯಾರಿಗೂ ಬೇಕಿಲ್ಲ, ನಿಜ, ಆದರೆ ಸುಖ ಏನೆಂದು ತಿಳಿಯುವುದಕ್ಕಾದರೂ ದುಃಖ ಬೇಕೇ ಬೇಕು. ಗೌತಮ ಬುದ್ಧ ಬುದ್ಧನಾಗಿದ್ದು, ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದಾಗ ಅಲ್ಲ; ಹೊರಗೆ ಬಂದು ಜನರ ನೋವು ಸಂಕಷ್ಟಗಳ ಸರಮಾಲೆಯನ್ನು ನೋಡಿ ಮಮ್ಮಲ ಮರುಗಿ ಅಂತರ್ಮುಖಿಯಾಗಿ ಅರಿವಿನ ಕಣ್ದೆರೆದಾಗ.

ಭವಿಷ್ಯದ ಸಂಗತಿಗಳೆಲ್ಲವೂ ಮನುಷ್ಯನಿಗೆ ತಿಳಿಯುವಂತಾಗಿದ್ದರೆ ಜೀವನದಲ್ಲಿ ಸ್ವಾರಸ್ಯವೆಂಬುದೇ ಇರುತ್ತಿರಲಿಲ್ಲ. ಭವಿಷ್ಯದಲ್ಲಿ ಏನಾಗಬಹುದೆಂದು ಇತರರ ಜೀವನಾನುಭವದಿಂದ ಮನುಷ್ಯ ಊಹಿಸಿಕೊಳ್ಳಬಹುದಾದರೂ ಅದರಿಂದ ಪಾಠ ಕಲಿತುಕೊಳ್ಳುವುದಿಲ್ಲ. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವುದು ಸರಿಯಲ್ಲ ಎಂಬ ನಾಣ್ಣುಡಿಯಂತೆ ಎಲ್ಲ ಗೊತ್ತಿದ್ದರೂ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾನೆ. ಸಂಪತ್ತಿನ ಸಂಗ್ರಹಣೆಯ ನಾಗಾಲೋಟದಲ್ಲಿ ಕೊಚ್ಚಿ ಹೋಗುತ್ತಿದ್ದಾನೆ. ಅಜ್ಞಾತ ಇಂಗ್ಲಿಷ್ ಕವಿಯೊಬ್ಬ ಹೀಗೆ ಹೇಳುತ್ತಾನೆ:

We squander health in search of wealth
We scheme, toil and save;
Then we squander wealth in search of health
All we get is the Grave!

(ಧನ-ಕನಕ-ಸಂಪತ್ತಿನ ಗಳಿಕೆಯ ಸಂಗ್ರಾಮದಲಿ
ಹಗಲಿರುಳೆನ್ನದೆ ಚಿಂತಿಸಿ ದುಡಿದು ಕೂಡಿಟ್ಟು
ಮೋಜು ಮೇಜವಾನಿಯ ಮೃಗಮರೀಚಿಕೆಯ ಬೆನ್ನಟ್ಟಿ
(ಮೃಗಮರೀಚಿಕೆಯನರಸಿ)
ಕೊಳ್ಳೆಹೋಹುದವನ ಶರೀರದಾರೋಗ್ಯವೆಲ್ಲ!

ರೋಗರುಜಿನಗಳಿಂ ನಲುಗಿ ಹಾಸಿಗೆಯ ಹಿಡಿದಾಗ
ಕಣ್ಣ ಪಿಳಿ ಪಿಳಿ ಬಿಟ್ಟು ಕಳೆದ ಆರೋಗ್ಯವಂ ನೆನಸಿ
ಮಡದಿ ಮಕ್ಕಳ ಮುಖವ ನೋಡಿ ಗೋಳಿಡುತ
ಕೊಳ್ಳೆಹೋಹುದವನ ದುಡಿದೆಲ್ಲ ಸಂಪತ್ತು ಆಸ್ಪತ್ರೆಗೆ!

ಕೊನೆಗೆ ಸಿಕ್ಕಿದ್ದಾದರೂ ಏನವನಿಗೆ? (ಸಿಕ್ಕಿದ್ದು ಏನು ಅವನಿಗೆ?
ನಾಲ್ಕು ಜನರ ಹೆಗಲ ಮೇಲೆ ಪಯಣ!
ಎಲ್ಲಿಗೆಂದು ತಿಳಿಯದ ಸ್ಮಶಾನ ಮೌನ!
ಆರಡಿ ಮೂರಡಿಯ ‘ಮನೆ’ಯಲ್ಲಿ ಚಿರಂತನ ಶಯನ!)

ಮನುಷ್ಯ ತನ್ನ ಆರೋಗ್ಯವನ್ನೂ ಲೆಕ್ಕಿಸದೆ ರಾತ್ರಿ ಹಗಲೂ ದುಡಿದು ಹೇರಳವಾಗಿ ಹಣವನ್ನು ಗಳಿಸುತ್ತಾನೆ. ಕಳೆದು ಹೋದ ಆರೋಗ್ಯವನ್ನು ಮತ್ತೆ ಪಡೆಯಲು ದುಡಿದ ಹಣವೆಲ್ಲವನ್ನೂ ಆಸ್ಪತ್ರೆಗೆ ಖರ್ಚುಮಾಡುತ್ತಾನೆ. ದುಡಿಮೆಯ ಭರಾಟೆಯಲ್ಲಿ, ಸಂಪತ್ತಿನ ಗಳಿಕೆಯಲ್ಲಿ, ಜೀವನದ ನಿಜವಾದ ಸುಖವನ್ನು ಸವಿಯದೆ ತನ್ನ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾನೆ.

‘ಧರ್ಮ-ಅರ್ಥ-ಕಾಮ-ಮೋಕ್ಷ’ ಎಂಬ ಚತುರ್ವಿಧ ಪುರುಷಾರ್ಥಗಳ ಜಾಗದಲ್ಲಿ ‘ನೌಕರಿ-ಕಾರು-ಬಂಗಲೆ-ಟೀವಿ’ ಎಂಬ ಆಧುನಿಕ ಪುರುಷಾರ್ಥಗಳ ಬೆನ್ನೇರಿ ಹೊರಟಿದ್ದಾನೆ. ಬಂಗಲೆಯಲ್ಲಿ ಬಣ್ಣದ ಟೀವಿಯೇನೋ ಇದೆ. ಆದರೆ ನೋಡಲು ಅವನಿಗೆ ಪುರುಸೊತ್ತಿಲ್ಲ. ಸುಪ್ಪತ್ತಿನ ಹಾಸಿಗೆಯೇನೋ ಇದೆ. ಆದರೆ ಮಲಗಿದರೆ ನಿದ್ರೆ ಬರುವುದಿಲ್ಲ. ನಿದ್ರೆ ಗುಳಿಗೆ ಬೇಕೇ ಬೇಕು. ಹೆಚ್ಚುಕಡಿಮೆ ನುಂಗಿದರೆ ಚಿರನಿದ್ರೆ! ಉಣ್ಣಲು ಷಡ್ರಸೋಪೇತ ಭಕ್ಷ್ಯ ಭೋಜ್ಯಗಳಿವೆ. ಆದರೆ ಸಿಹಿಯುಂಡೆ ತಿನ್ನುವಂತಿಲ್ಲ. ಸಕ್ಕರೆಯುಳ್ಳ ಕಾಫಿ ಕುಡಿಯುವಂತಿಲ್ಲ.

ದಿನವೂ ಇನ್ಸುಲಿನ್ ಚುಚ್ಚು ಮದ್ದು ತಪ್ಪಿದ್ದಲ್ಲ. ಕಾರು-ಬಂಗಲೆಯಲ್ಲಿ ಹವಾನಿಯಂತ್ರಿತ ವ್ಯವಸ್ಥೆಯೇನೋ ಇದೆ. ಆದರೂ ತಲೆ ಬಿಸಿ, ಚಡಪಡಿಕೆ! ವಾಸದ ಕೊಠಡಿ ತಣ್ಣಗಿದ್ದರೂ, ಮನಸ್ಸಿನೊಳಗೆ ಬೇಗುದಿ? ಹಾಗಾದರೆ ಹಗಲಿರುಳು ದುಡಿದದ್ದು ಏತಕ್ಕಾಗಿ, ಯಾವ ಪುರುಷಾರ್ಥಕ್ಕಾಗಿ? ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದು ಕನಕದಾಸರು ಹಂಗಿಸಿ ಹಾಡಿದರು.

ಕ್ಲಿಕ್‌ ಮಾಡಿ ಓದಿ:‌ ಮೇ 14 ರಿಂದ ಉಚ್ಚಂಗಿ ಯಲ್ಲಮ್ಮ ಜಾತ್ರಾ ಮಹೋತ್ಸವ | ದೇವಿಗೆ ಹೊಸ ಬೆಳ್ಳಿ ಮುಖಪದ್ಮ

ಇಂದಿನ ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಅಸೆಂಬ್ಲಿ-ಪಾರ್ಲಿಮೆಂಟ್ ಚುನಾವಣೆವರೆಗೆ ಈಗ ‘ಎಲ್ಲರೂ ಮಾಡುವುದು ಓಟಿಗಾಗಿ ಮತ್ತೆ ನೋಟಿಗಾಗಿ’ ಎನ್ನುವಂತಾಗಿದೆ. ಮನುಷ್ಯ ತನ್ನ ಹೊಟ್ಟೆ ಪಾಡಿಗಾಗಿ ಮಾತ್ರ ಮಾಡಿದ್ದರೆ ಎಲ್ಲವೂ ಸರಿಹೋಗುತ್ತಿತ್ತು. ಆದರೆ ಮನುಷ್ಯನ ಸ್ವಾರ್ಥಪೂರಿತ ಬಕಾಸುರನ ಹೊಟ್ಟೆಗೆ ಇತಿಮಿತಿಯೇ ಇಲ್ಲ. ಎಷ್ಟಿದ್ದರೂ ಬೇಕು. ಅದೂ ತನಗೇ ಬೇಕು, ಅದನ್ನು ಜೀರ್ಣಿಸಿಕೊಳ್ಳುವ ‘ವಾತಾಪಿ ಜೀರ್ಣೋ ಭವ’ ಶಕ್ತಿ ತನಗಿಲ್ಲ ಎಂಬ ಪರಿವೆ ಅವನಿಗಿಲ್ಲ. ಅಂದರೆ ಇದೆಲ್ಲವನ್ನೂ ಬಿಟ್ಟು ಮಠ ಸೇರಿ ಮೂಗು ಹಿಡಿದು ಧ್ಯಾನ ಮಾಡುತ್ತಾ ಸಂನ್ಯಾಸಿಯಾಗು ಎಂದು ಹೇಳುತ್ತಿಲ್ಲ.

ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚೆಂಗಳೆಯರು?
ಸತಿಪತಿಸುಖಭೋಗೋಪಭೋಗವಿಳಾಸವ ಬಿಟ್ಟನೆ ಸಿಂಧುಬಲ್ಲಾಳನು?
ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳಸಿದರೆ
ನಿಮ್ಮ ಚರಣಕ್ಕೆ ದೂರ, ಕೂಡಲಸಂಗಮದೇವಾ!”

ಲೌಕಿಕ ಜೀವನದ ಸುಖ-ಸಂತೋಷಗಳು ಧರ್ಮದ ನೆಲೆಗಟ್ಟಿನ ಮೇಲೆ ನಿಂತಿರಬೇಕು, ಮೋಕ್ಷದ ಗುರಿಯನ್ನು ಹೊಂದಿರಬೇಕು. ದುಃಖ-ದುಮ್ಮಾನಗಳಿಂದ ವಿಮುಕ್ತನಾಗಿ ಶಾಶ್ವತ ಸುಖವನ್ನು ಪಡೆಯುವ ಹಂಬಲವಿರಬೇಕು. ಬದುಕಿನಲ್ಲಿ ಕೇವಲ ಬೆಲ್ಲವೇ ಇಲ್ಲ, ಬೇವೂ ಸಾಕಷ್ಟು ಇದೆ. ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಭಾವದಿಂದ ಸ್ವೀಕರಿಸುವ ಅಗತ್ಯವಿದೆಯೆಂದೇ ಯುಗಾದಿಯ ಹಬ್ಬದಂದು ಬೇವು-ಬೆಲ್ಲವನ್ನು ಬಂಧು-ಬಾಂಧವರಿಗೆ, ಆಪ್ತೇಷ್ಟರಿಗೆ ಹಂಚುವ ಸತ್ ಸಂಪ್ರದಾಯ ಇರುವುದು.

ವರ್ಷಕ್ಕೊಮ್ಮೆ ಯುಗಾದಿಯ ಸಂಜೆಯಂದು ಎಲ್ಲರ ಕಣ್ಣುಗಳು ಪಡುವಣ ದಿಕ್ಕಿನಲ್ಲಿ ಎಳೆವೆಳೆದಿಂಗಳಾದ ಬಿದಿಗೆಯ ಚಂದ್ರನನ್ನು ನೋಡಲು ತವಕಿಸುತ್ತಿರುತ್ತವೆ. ಆದ ಕಾರಣವೇ ನಿತ್ಯ ಜೀವನದಲ್ಲಿ ತಮಗೆ ಬಹಳ ಬೇಕಾದವರು ಅಪರೂಪಕ್ಕೆ ಸಿಕ್ಕರೆ ಸಂತೋಷಪಟ್ಟು ‘ಯುಗಾದಿ ಚಂದ್ರನನ್ನು ನೋಡಿದಂತಾಯಿತು!’ ಎಂದು ಉದ್ಗರಿಸುತ್ತಾರೆ.

ಆಗಸದಲ್ಲಿ ದಿನವೂ ನಿತ್ಯ ವಿನೂತನ ಚಂದ್ರ ಕಾಣಿಸುತ್ತಿದ್ದರೂ ಬಿದಿಗೆಯ ಚಂದ್ರನನ್ನು ನೋಡುವ ಸಂತೋಷವೇ ಬೇರೆ. ಚಂದ್ರ ಕಂಡ ತಕ್ಷಣವೇ “ಹೋ..!” ಎಂದು ಕೂಗಿ ಕುಣಿದು ಕುಪ್ಪಳಿಸುವ ಮಕ್ಕಳ ಆ ಆನಂದ, ಚಂದ್ರನನ್ನು ನೋಡಿದಿರಾ ಎಂದು ಅಕ್ಕಪಕ್ಕದವರನ್ನು ವಿಚಾರಿಸುವ ಉಭಯಕುಶಲೋಪರಿ, ಚಂದ್ರದರ್ಶನವಾದ ತಕ್ಷಣವೇ ಧನ್ಯತೆಯಿಂದ ಬೀಗಿ ಗುರುಹಿರಿಯರಿಗೆ ಶ್ರದ್ಧಾಭಕ್ತಿಯಿಂದ ಬಾಗಿ ನಮಸ್ಕರಿಸುವ ಭಾವಪರವಶತೆ, ಕಣ್ಣು ಮಂಜಾಗಿ ಸರಿಯಾಗಿ ಕಾಣಿಸದ ಅಜ್ಜ-ಅಜ್ಜಿಗಳಿಗೆ ಚಂದ್ರನೆಲ್ಲಿದ್ದಾನೆಂದು ತೋರಿಸಿಕೊಡುವ ಮೊಮ್ಮಕ್ಕಳ ತವಕ ವರ್ಣಿಸಲಸದಳ.

ಆ ಮೊಮ್ಮಕ್ಕಳಿಗೇನು ಗೊತ್ತು! ಆಗಸದಲ್ಲಿ ಅವರಿಗೆ ಬಾಯಲ್ಲಿ ಸವೆದ ಪೆಪ್ಪರ್ ಮೆಂಟಿನಾಕಾರದ ಒಂದು ಚಂದ್ರ ಕಂಡರೆ, ಜೀವನದ ಮುಸ್ಸಂಜೆಯಲ್ಲಿರುವ ಆ ಹಿರಿಯರಿಗೆ ಕಾಣಿಸುವುದು ತಮ್ಮ ವಂಶದ ಕುಡಿಯಾದ ಮುದ್ದುಮುಖದ ಆ ಮೊಮ್ಮಕ್ಕಳೇ ಹತ್ತಾರು ಬಗೆಯ ಬಿದಿಗೆಯ ಚಂದ್ರ! ಮುಂದೆ ಮುಗಿಲೆತ್ತರಕ್ಕೆ ಅವರು ಬೆಳೆಯುವಂತಾಗಲಿ ಎಂಬ ಹೆಬ್ಬಯಕೆಯ ಆಶಾಗೋಪುರ!

ಕರ್ನಾಟಕದ ಮನೆಮನೆಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸುತ್ತಿರುವ ಈ ಯುಗಾದಿಯ ಶುಭ ಸಂದರ್ಭದಂದು ಎಲ್ಲರಿಗೂ ನಮ್ಮ ಶುಭಾಶಯಗಳು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChandraJagadguruSpecial ArticleSwamijiTaralbaluಚಂದ್ರಜಗದ್ಗುರುತರಳಬಾಳುವಿಶೇಷ ಲೇಖನಸ್ವಾಮೀಜಿ
Share This Article
Facebook Email Print
Previous Article ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮನೆಯಿಂದಲೇ ಮತದಾನಕ್ಕೆ ಡೇಟ್ ಫಿಕ್ಸ್ | ಕೇವಲ ಮೂರು ದಿನ ಅವಕಾಶ
Next Article ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ | ರಿಸಲ್ಟ್‌ ನೋಡುವುದೇಗೆ ? ಇಲ್ಲಿದೆ ಸಂಪೂರ್ಣ ವಿವರ
Leave a Comment

Leave a Reply Cancel reply

Your email address will not be published. Required fields are marked *

ಟೌನ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಾಮಾನ್ಯ ಮಹಾಸಭೆ
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ₹22.11 ಲಕ್ಷ ನಿವ್ವಳ ಲಾಭ
ಮುಖ್ಯ ಸುದ್ದಿ
ಎಂ.ನಿಶ್ಚಿತ್ (ಚಿಂಟು) ಅವರ ಪದಗ್ರಹಣ ಸಮಾರಂಭ
ಯುವಕರ ಸಂಘಟನೆಗೆ ಆದ್ಯತೆ | ಭಾರತ ಜೋಡೋ ಸಂಘಟನೆ ಮೂಲಕ ಪಕ್ಷ ಬಲವರ್ಧನೆ
ಮುಖ್ಯ ಸುದ್ದಿ
G.H. Mohan Kumar
ಪೌರ ಕಾರ್ಮಿಕರ ಬಗ್ಗೆ ಹಗುರ ಮಾತು | ಕೃಷ್ಣಭೈರೇಗೌಡರ ಕ್ಷಮೆಗೆ ಆಗ್ರಹ
ಮುಖ್ಯ ಸುದ್ದಿ
ಅರ್ಜಿ ಅಹ್ವಾನ
ಅರಿವು ಶೈಕ್ಷಣಿಕ ಸಾಲ | ಅರ್ಜಿ ಅಹ್ವಾನ 
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Loading Comments...
Welcome Back!

Sign in to your account

Username or Email Address
Password

Lost your password?

Not a member? Sign Up