ಹೊಳಲ್ಕೆರೆ
ಹೊಳಲ್ಕೆರೆಯ ನಿವೃತ್ತ ನೌಕರರ ಸಂಘದ ರಜತ ಮಹೋತ್ಸವ | ಶಾಸಕ ಎಂ.ಚಂದ್ರಪ್ಪ ಭಾಗೀ

CHITRADURGA NEWS | 04 FEBRUARY 2025
ಹೊಳಲ್ಕೆರೆ: ಪಟ್ಟಣದ ಪ್ರಸನ್ನ ಗಣಪತಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಜತ ಮಹೋತ್ಸವ, ನಿವೃತ್ತ ನೌಕರರ ದಿನಾಚರಣೆ, ಹಿರಿಯ ಅಜೀವ ಸದಸ್ಯರಿಗೆ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಶಾಸಕ ಎಂ.ಚಂದ್ರಪ್ಪ ಉದ್ಘಾಟಿಸಿದರು.
Also Read: ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ | 9 ದಿನಗಳ ಕಾಲ ಭರಮಸಾಗರದಲ್ಲಿ ಹಬ್ಬದ ಸಂಭ್ರಮ

ಈ ವೇಳೆ ಮಾತನಾಡಿದ ಶಾಸಕರು, ಸಿಕ್ಕಿರುವ ಕೆಲಸವನ್ನು ದೇವರ ಸೇವೆ ಅಂದುಕೊಂಡು ಪ್ರಾಮಾಣಿಕವಾಗಿ ನಿಭಾಯಿಸಿದಾಗ ನಿಮಗೂ ನಿಮ್ಮ ಕುಟುಂಬಕ್ಕೂ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ನೌಕರರು, ಅಧಿಕಾರಿಗಳು, ರಾಜಕಾರಣಿಗಳು ಜೀವನದಲ್ಲಿ ಅನೇಕ ಸಮಸ್ಯೆ ಸವಾಲುಗಳನ್ನು ಎದುರಿಸಿ ಮುಂದೆ ಬರಬೇಕಿದೆ. ಸರ್ಕಾರಿ ನೌಕರರು ನಿವೃತ್ತಿಯ ನಂತರ ಕುಗ್ಗಬಾರದು. ಲವಲವಿಕೆಯಿಂದ ಇರಬೇಕು. ಸರ್ಕಾರಿ ಕೆಲಸದಲ್ಲಿದ್ದಾಗ ಸಮಾಜದ ಋಣ ತೀರಿಸಿದರೆ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ನೀವುಗಳು ನನ್ನನ್ನು ಮೂರು ಸಾರಿ ಗೆಲ್ಲಿಸಿದ್ದೀರ. ನಿಮ್ಮಗಳ ಋಣ ನನ್ನ ಮೇಲಿರುವುದರಿಂದ ಜವಾಬ್ದಾರಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ನಿವೃತ್ತ ಸರ್ಕಾರಿ ನೌಕರರಿಗೆ ಭರವಸೆ ನೀಡಿದರು.
Also Read: ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆ | ನಿಯಮ ಮೀರಿದರೆ ಕ್ರಮದ ಎಚ್ಚರಿಕೆ
ವಿಶ್ರಾಂತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಮಾತನಾಡಿ, ಸಂವಿಧಾನದಡಿ ಮೂಲಭೂತ ಹಕ್ಕು ಎಷ್ಟು ಮುಖ್ಯವೋ. ಮೂಲಭೂತ ಕರ್ತವ್ಯಕ್ಕೂ ಅಷ್ಟೆ ಪ್ರಾಮುಖ್ಯತೆಯಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ನೌಕರರು ಕೆಲಸ ಮಾಡಬೇಕಿದೆ.
ಸರ್ಕಾರಿ ನೌಕರಿಯಲ್ಲಿರುವವರಿಗೆ ನಿರ್ಧಿಷ್ಟವಾದ ಚೌಕಟ್ಟಿದೆ. ನಿವೃತ್ತಿಯ ನಂತರ ಸ್ವತಂತ್ರ ಜೀವಿಯಿದ್ದಂತೆ.
ನಿಮ್ಮ ಸಂಘದಲ್ಲಿ ಗ್ರಂಥಾಲಯವನ್ನು ತೆರೆದು ಪ್ರತಿನಿತ್ಯವೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಇದರಿಂದ ಸಾಕಷ್ಟು ವಿಚಾರಗಳು ತಿಳಿಯುತ್ತದೆ. ಕುವೆಂಪು, ಜಿ.ಎಸ್.ಶಿವರುದ್ರಪ್ಪ, ದ.ರಾ.ಬೇಂದ್ರೆಯವರ ಪುಸ್ತಕ, ಕಥೆ, ಕಾದಂಬರಿಗಳ ಜೊತೆ ಇಂಗ್ಲಿಷ್ ಪತ್ರಿಕೆಗಳನ್ನು ಓದಿ ಎಂದು ನಿವೃತ್ತ ಸರ್ಕಾರಿ ನೌಕರರಿಗೆ ಹೆಚ್.ಬಿಲ್ಲಪ್ಪ ಸಲಹೆ ನೀಡಿದರು.
Also Read: ತರಳಬಾಳು ಹುಣ್ಣಿಮೆ ಮಹೋತ್ಸವ | ವಾಹನಗಳ ಪಾರ್ಕಿಂಗ್ ಮಾಡುವ ಜಾಗ ಇಲ್ಲಿವೆ ನೋಡಿ..
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಸಿ.ಗಂಗಾಧರಪ್ಪ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಹೆಚ್.ಶಿವಲಿಂಗಪ್ಪ, ಜಿಲ್ಲಾಧ್ಯಕ್ಷ ಆರ್.ರಂಗಪ್ಪರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಶಿವಮೂರ್ತಿ, ಏಕಾಂತಪ್ಪ, ಮಂಜುನಾಥ್, ಓಂಕಾರಪ್ಪ ಸೇರಿದಂತೆ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.
