Connect with us

    Shri Krishna Janmashtami: ಎಸ್‌ಆರ್‌ಎಸ್‌ನಲ್ಲಿ ಜಗದೋದ್ಧಾರನ ಜನ್ಮದಿನ ಸಂಭ್ರಮ | ತೊಟ್ಟಿಲಿಗೆ ಆರತಿ ಬೆಳಗಿ ಆಚರಣೆ

    SRS

    ಮುಖ್ಯ ಸುದ್ದಿ

    Shri Krishna Janmashtami: ಎಸ್‌ಆರ್‌ಎಸ್‌ನಲ್ಲಿ ಜಗದೋದ್ಧಾರನ ಜನ್ಮದಿನ ಸಂಭ್ರಮ | ತೊಟ್ಟಿಲಿಗೆ ಆರತಿ ಬೆಳಗಿ ಆಚರಣೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 AUGUST 2024
    ಚಿತ್ರದುರ್ಗ: ನಗರದ ನಮ್ಮ ಎಸ್‌ಆರ್‌ಎಸ್‌ ಹೆರಿಟೇಜ್‌ ಶಾಲೆಯ ಬ್ಲೂ ಜೆಮ್ಸ್‌ ಚಿಣ್ಣರ ವಿಭಾಗದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು.

    ತೊಟ್ಟಿಲಿಗೆ ಆರತಿ ಬೆಳಗಿ ಮುದ್ದು ಕೃಷ್ಣನನ್ನು ತೂಗಿ ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್‌ ನಾಗವೇಣಿ ಮಾತನಾಡಿ, ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ…ಸರ್ವರಿಗೂ 2024 ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಭಗವಾನ್‌ ಕೃಷ್ಣನು ಪ್ರತಿಯೊಬ್ಬರ ಮೇಲೆ ಅತ್ಯಂತ ಹರ್ಷಚಿತ್ತದಿಂದ ಆಶೀರ್ವಾದದ ಮಳೆಗರೆಯಲಿ. ಎಲ್ಲರ ಬದುಕಿನಲ್ಲೂ ಆನಂದದ ಹೊನಲು ಹರಿಸಲಿ. ಎಂತಹದ್ದೇ ಕಷ್ಟ, ಸವಾಲುಗಳನ್ನು ಎದುರಿಸಿ ಗೆಲ್ಲುವ ಧೈರ್ಯ ತುಂಬಲಿ ಎಂದರು.

    ಕ್ಲಿಕ್ ಮಾಡಿ ಓದಿ: ಶ್ರೀಕೃಷ್ಣ ವ್ಯಕ್ತಿಯಲ್ಲ ಓರ್ವ ಶಕ್ತಿ | ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ.ರಘುಚಂದನ್‌

    ಚಿಣ್ಣರು ಕೃಷ್ಣನ 24 ಅವತಾರಗಳ ವೇಷ ಧರಿಸಿ ಭಾಗವಹಿಸಿದ್ದರು. ಎಸ್‌ಆರ್‌ಎಸ್‌ ಶಿಕ್ಷಣ ಸಮೂಹ ಸಂಸ್ಥೆ ಆಡಳಿತಾಧಿಕಾರಿ ಟಿ.ಎಸ್‌.ರವಿ, ಸಿಬಿಎಸ್‌ಇ ವಿಭಾಗದ ಪ್ರಾಂಶುಪಾಲ ಎಂ.ಎಸ್‌.ಪ್ರಭಾಕರ್‌, ಐಸಿಎಸ್‌ಇ ವಿಭಾಗದ ಪ್ರಾಂಶುಪಾಲೆ ಎಂ.ಎಸ್‌.ಅರ್ಪಿತಾ, ಬ್ಲ್ಯೂಜೆಮ್ಸ್‌ ಶೈಕ್ಷಣಿಕ ಸಂಯೋಜಕಿ ಸುಷ್ಮಾ, ಮಾರ್ಗದರ್ಶಕಿ ಡಾ.ಆಶ್ರೀತಾ ಕಿರಣ್‌ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top