ಮುಖ್ಯ ಸುದ್ದಿ
Shri Krishna Janmashtami: ಶ್ರೀಕೃಷ್ಣ ವ್ಯಕ್ತಿಯಲ್ಲ ಓರ್ವ ಶಕ್ತಿ | ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ.ರಘುಚಂದನ್

CHITRADURGA NEWS | 26 AUGUST 2024
ಚಿತ್ರದುರ್ಗ: ಶ್ರೀಕೃಷ್ಣ ಪರಮಾತ್ಮನ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.
ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ (Shri Krishna Janmashtami) ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶ್ರೀಕೃಷ್ಣ ವ್ಯಕ್ತಿಯಲ್ಲ ಓರ್ವ ಶಕ್ತಿ. ಹಾಗಾಗಿ ಶ್ರೀಕೃಷ್ಣನ ಲೀಲೆಯನ್ನು ವರ್ಣಿಸಲು ಅಸಾಧ್ಯ. ಕೃಷ್ಣನ ಜೀವನ ಚರಿತ್ರೆ ಹಾಗೂ ಮೌಲ್ಯಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.

ಯಾವುದೇ ಜಾತಿ, ಧರ್ಮದ ತಾರತಮ್ಯವಿಲ್ಲದೆ ಮುಂದಿನ ದಿನಗಳಲ್ಲಿ ಗಣೇಶ, ಈದ್ ಮಿಲಾದ್, ರಂಜಾನ್, ಕ್ರಿಸ್‍ಮಸ್ ಹಬ್ಬವನ್ನು ಆಚರಿಸುವ ಮೂಲಕ ಎಲ್ಲರೂ ಸಹೋದರತ್ವ ಸಹಬಾಳ್ವೆಯಿಂದ ಬದುಕೋಣ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ಜಾನುವಾರು ಗಣತಿಗೆ ಕೌಂಟ್‌ಡೌನ್ | ಮನೆ– ಮನೆಗೆ ಬರಲಿದ್ದಾರೆ ಗಣತಿದಾರರು
ನೂರಾರು ಮಕ್ಕಳು ಶ್ರೀಕೃಷ್ಣನ ವೇಷಭೂಷಣ ತೊಟ್ಟು ಸಂಭ್ರಮಿಸಿದರು. 1 ರಿಂದ 5 ನೇ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, 6 ರಿಂದ 10 ನೇ ತರಗತಿ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಮಡಿಕೆ ಹೊಡೆದು ಸಂಭ್ರಮಿಸಿದರು. ಶಿಕ್ಷಣ ಸಂಸ್ಥೆ ಸಂಯೋಜಕ ಆರ್.ಎಸ್.ರಾಜು, ವೀಕ್ಷಕ ನಾಗಭೂಷಣ ಶೆಟ್ಟಿ, ಸಂಯೋಜಕರಾದ ಕೊಟ್ರೇಶ್, ನೃತ್ಯ ತರಬೇತಿ ಶಿಕ್ಷಕ ಅಂಜನ್, ಶಿಕ್ಷಕಿ ವೈಷ್ಣವಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
