CHITRADURGA NEWS | 12 may 2025
ಬೇಸಿಗೆ ಕಾಲ ಬಂದ ತಕ್ಷಣ, ದೇಹವನ್ನು ತಂಪಾಗಿಸುವ ಮತ್ತು ನೀರಿನ ಕೊರತೆಯನ್ನು ಪೂರೈಸುವ ಆಹಾರಗಳ ಸೇವನೆ ಹೆಚ್ಚಾಗುತ್ತದೆ. ಅದರಲ್ಲಿ ಸೌತೆಕಾಯಿ ಅತ್ಯಂತ ಜನಪ್ರಿಯ ಮತ್ತು ಸುಲಭವಾಗಿ ಲಭ್ಯವಿರುವ ತರಕಾರಿಯಾಗಿದೆ. ಸೌತೆಕಾಯಿಗಳು ಸುಮಾರು 90 ಪ್ರತಿಶತದಷ್ಟು ನೀರನ್ನು ಹೊಂದಿರುತ್ತವೆ.
ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿಯೇ ಜನರು ಇದನ್ನು ಸಲಾಡ್‍ಗಳಲ್ಲಿ, ಲಘು ಆಹಾರವಾಗಿ ಬಹಳ ಉತ್ಸಾಹದಿಂದ ತಿನ್ನುತ್ತಾರೆ. ಆದರೆ ಸೌತೆಕಾಯಿಗಳನ್ನು ತಿಂದ ತಕ್ಷಣ ಕೆಲವು ವಸ್ತುಗಳನ್ನು ತಿನ್ನುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾದ್ರೆ ಆ ವಸ್ತುಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
ಹಾಲು ಮತ್ತು ಡೈರಿ ಉತ್ಪನ್ನಗಳು
ಸೌತೆಕಾಯಿ ಮತ್ತು ಹಾಲಿನ ಸಂಯೋಜನೆಯನ್ನು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಇವೆರಡನ್ನು ಮಿಕ್ಸ್ ಮಾಡಿ ತಿನ್ನುವುದು ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಉಬ್ಬರದ ಸಮಸ್ಯೆಗಳು ಕಾಡಬಹುದು.
ದ್ವಿದಳ ಧಾನ್ಯಗಳು
ಸೌತೆಕಾಯಿ ತಿಂದ ನಂತರ ದ್ವಿದಳ ಧಾನ್ಯಗಳನ್ನು ತಿನ್ನುವುದು ಹಾನಿಕಾರಕ. ಸೋಯಾಬೀನ್, ಕಡಲೆಕಾಯಿ ಅಥವಾ ಕಿಡ್ನಿ ಬೀನ್ಸ್‍ನಂತಹ ದ್ವಿದಳ ಧಾನ್ಯಗಳನ್ನು ಸೌತೆಕಾಯಿಗಳೊಂದಿಗೆ ತಿನ್ನುವುದು ಹೊಟ್ಟೆಯಲ್ಲಿ ಅನಿಲ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಗೆ ಕಾರಣವಾಗಬಹುದು.
ಹಣ್ಣಿನ ರಸ
ನೀವು ಸೌತೆಕಾಯಿ ತಿಂದ ನಂತರ ಕಿತ್ತಳೆ ಅಥವಾ ದ್ರಾಕ್ಷಿಹಣ್ಣಿನ ರಸದಂತಹ ಇತರ ಯಾವುದೇ ರೀತಿಯ ಹಣ್ಣಿನ ರಸವನ್ನು ಕುಡಿಯಬೇಡಿ. ಸೌತೆಕಾಯಿ ಮತ್ತು ಇತರ ಹಣ್ಣಿನ ರಸಗಳನ್ನು ಕುಡಿಯುವುದರಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಆಮ್ಲ ಮತ್ತು ಸಕ್ಕರೆ ಮಿಶ್ರಣವಾಗಬಹುದು, ಇದು ಜೀರ್ಣಾಂಗ ವ್ಯವಸ್ಥೆಗೆ ಹಾನಿಕಾರಕವಾಗಿದೆ. ಇದರಿಂಧ ಹೊಟ್ಟೆನೋವಿನ ಸಮಸ್ಯೆ ಕಾಡಬಹುದು.
ಆಲೂಗಡ್ಡೆ ಮತ್ತು ಸೌತೆಕಾಯಿಗಳನ್ನು ಮಿಕ್ಸ್ ಮಾಡಿ ತಿನ್ನಬೇಡಿ. ಆಲೂಗಡ್ಡೆಯಲ್ಲಿ ಹೆಚ್ಚಿನ ಪಿಷ್ಠವಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಅಸಮತೋಲನಗೊಳಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಗ್ಯಾಸ್, ಅಜೀರ್ಣ ಸಮಸ್ಯೆ ಕಾಡಬಹುದು.
ಮಾಂಸಾಹಾರಿ ಆಹಾರ
ಸೌತೆಕಾಯಿಗಳ ನಂತರ ಮಾಂಸಾಹಾರವನ್ನು ಸಹ ಸೇವಿಸಬಾರದು. ಮಾಂಸ ಮತ್ತು ಸೌತೆಕಾಯಿಗಳ ಸಂಯೋಜನೆಯು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ತೊಂದರೆಗೊಳಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳು ಉದ್ಭವಿಸಬಹುದು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
