
CHITRADURGA NEWS | 05 NOVEMBER 2025
ಚಿತ್ರದುರ್ಗ: ನಗರದ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕಾರ್ತಿಕ ಮಾಸದ ಅಂಗವಾಗಿ 33 ದಿನಗಳ ಕಾಲ ಮುಂಚೂಣಿಯಲ್ಲಿಲ್ಲದ, ಅಲಕ್ಷಿತ, 66 ಶರಣ, ಶರಣೆಯರ ವ್ಯಕ್ತಿತ್ವ ಕುರಿತಂತೆ ವಿಷಯ ಚಿಂತನೆ, ವಚನಪಠಣ ಹಾಗೂ ಗಾಯನವನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ.23ರ ಸಮಾರೋಪದ ಸವಿನೆನಪಿಗಾಗಿ ಎರಡು ವಿಭಾಗಗಳಲ್ಲಿ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿದೆ.
ಇದನ್ನೂ ಓದಿ: ಕುರಿ ಕಳ್ಳನ ಬಂಧನ | 9.92 ಲಕ್ಷ ಬೆಲೆ ಬಾಳುವ ಕುರಿಗಳು ವಶ

ಭಾಗ ಒಂದರಲ್ಲಿ 66 ಶರಣ, ಶರಣೆಯರ ಹೆಸರು, ಕಾಲ, ವಚನದ ಅಂಕಿತ ಹಾಗೂ ವಚನಗಳಸಂಖ್ಯೆ ಮತ್ತು ಪ್ರತಿ ವಚನಕಾರರ ಒಂದೊಂದು ವಚನದ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ.
ಭಾಗ-2ರಲ್ಲಿ 66 ವಚನಕಾರರ ಹೆಸರು ಹಾಗೂ 500 ವಚನಗಳ ಕಂಠಪಾಠ ಸ್ಪರ್ಧೆಯನ್ನು ನ.23 ಭಾನುವಾರ ಬೆಳಗ್ಗೆ 9 ಗಂಟೆಗೆ ಮುರುಘಾ ಮಠದಲ್ಲಿದ ಅಲ್ಲಮಪ್ರಭು ಸಂಶೋಧನಾ ಕೇಂದ್ರ ಹಾಗೂ ಬಸವೇಶ್ವರ ಸಭಾಂಗಣದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಒಂದನೇ ವಿಭಾಗದ ಸ್ಪರ್ಧೆಗಳಿಗೆ ಪ್ರಥಮ ಬಹುಮಾನ 2 ಸಾವಿರ, ದ್ವಿತೀಯ 1,500, ತೃತೀಯ 1 ಸಾವಿರ ಹಾಗೂ ಸಮಾಧಾನಕರ ರೂ.500. ಭಾಗ 2ರಲ್ಲಿ ಪ್ರಥಮ. 10 ಸಾವಿರ, ದ್ವಿತೀಯ ರೂ.7,500, ತೃತೀಯ ರೂ.5 ಸಾವಿರ ಹಾಗೂ ಸಮಾಧಾನಕರ ರೂ.2,500 ನಿಗಧಿ ಪಡಿಸಲಾಗಿದೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ | ಅಪೂರ್ಣ ಅರ್ಜಿ ಭರ್ತಿಗೆ ಅವಕಾಶ
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಭಾಗವಹಿಸಿದವರೆಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ನ.20 ಕೊನೆಯ ದಿನವಾಗಿದೆ. ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ. 9448295901, 9945950303, 9902929701, 9449974004, 9740037176, 9448664932.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
