ಮುಖ್ಯ ಸುದ್ದಿ
murugha math; ಶರಣ ಸಂಸ್ಕೃತಿ ಉತ್ಸವ | ಅ.5 ರಿಂದ ವಿದ್ಯುಕ್ತ ಚಾಲನೆ

CHITRADURGA NEWS | 14 SEPTEMBER 2024
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ(murugha math)ದಲ್ಲಿ ಶನಿವಾರ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಹಾಗು ಶರಣ ಸಂಸ್ಕೃತಿ(Sharan Culture Festival)-2024 ಕಾರ್ಯಕ್ರಮದ ಗೋಡೆ ಭಿತ್ತಿಚಿತ್ರ, ಶ್ರೀ ಜಯದೇವ ಶ್ರೀಗಳ ಕುರಿತ ಕಿರುಹೊತ್ತಿಗೆ ಹಾಗೂ ವಿವಿಧ ಕಾರ್ಯಕ್ರಮಗಳ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಕ್ಲಿಕ್ ಮಾಡಿ ಓದಿ: Power cut: ವಾರಾಂತ್ಯಕ್ಕೆ ಪವರ್ ಶಾಕ್ | ಎರಡು ದಿನ ವಿದ್ಯುತ್ ಸ್ಥಗಿತ
ಜಯದೇವ ಶ್ರೀಗಳ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಥಣ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ,
ಜಯದೇವ ಜಗದ್ಗುರುಗಳೆಂದರೆ ನಡೆದಾಡುವ ಸಜ್ಜನಿಕೆ ಅವರದು. ನಾಡಿನಲ್ಲಿ ಜಯದೇವ ಶ್ರೀಗಳು ಬರದೇ ಹೋಗಿದ್ದರೆ ಕರ್ನಾಟಕ ಸಾಂಸ್ಕೃತಿಕವಾಗಿ ಬಡವಾಗುತ್ತಿತ್ತು. ನಾಡಿನ ಧಾರ್ಮಿಕ ಮುಖಂಡರುಗಳಿಗೆ ಶ್ರೀಗಳು ರಥಬೀದಿ ಇದ್ದಂತೆ. ಅವರದು ಸುವರ್ಣಯುಗ. ಅಂತಹ ಪ್ರಾತಃಸ್ಮರಣೆಯ ಮಹಾನ್ ಚೇತನ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವ ಆಚರಣೆ ಒದಗಿಬಂದಿರುವುದು ನಮ್ಮ ಭಾಗ್ಯವೇ ಸರಿ ಎಂದರು.
ಗೋಡೆ ಬಿತ್ತಿಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಶ್ರೀ ಜಯದೇವ ಜಗದ್ಗುರುಗಳು 1903ರಲ್ಲಿ ಶ್ರೀಮಠದ ಪೀಠಕ್ಕೆ ಬಂದರು. ಅವರದು ಆದರ್ಶದ ಬದುಕು. ಅವರ ಚಿಂತನೆಗಳು ಜನರಿಗೆ ದಾರಿಯನ್ನು ತೋರಿಸುತ್ತಿವೆ. ಜಯದೇವ ಜಗದ್ಗುರುಗಳ ಬೆಳ್ಳಿಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣ ಗೆ ಮಾಡಲಾಗುತ್ತದೆ. ಶ್ರೀಮಠದ ವೈಭವವನ್ನು ನಾವು ಬೆಳಗಿಸಬೇಕಿದೆ. ಆದರ್ಶ ತತ್ತ್ವ ಸಿದ್ಧಾಂತಗಳನ್ನು ನಾಡಿನಾದ್ಯಂತ ಪಸರಿಸುವ ಕಾರ್ಯ ಆಗಬೇಕಿದೆ ಎಂದು ನುಡಿದರು.
ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಕಾರ್ಯಕ್ರಮದ ಕರಪತ್ರವನ್ನು, ಆರೋಗ್ಯ ಮೇಳ ಮತ್ತು ಯೋಗ ಕಾರ್ಯಕ್ರಮದ ಕರಪತ್ರವನ್ನು ಕೊಲ್ಲಾಪುರದ ಶಿವಾನಂದ ಸ್ವಾಮಿಗಳು, ಕೆಇಬಿ ಷಣ್ಮುಖಪ್ಪ, ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು.
ಕ್ಲಿಕ್ ಮಾಡಿ ಓದಿ: POCSO case: ಪೋಕ್ಸೊ ಪ್ರಕರಣ | ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಅರ್ಜಿ ವಜಾ
ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಅವರು ಮಾತನಾಡಿ, ಜಯದೇವ ಜಗದ್ಗುರುಗಳ ಹುಟ್ಟೂರಾದ ಬಿನ್ನಾಳದಲ್ಲಿ ಶಿಥಿಲಾವಸ್ಥೆಯಲ್ಲಿರುವ ಪೂಜ್ಯರು ಹುಟ್ಟಿದ ಮನೆಯ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಉತ್ಸವದ ಸಂಪೂರ್ಣ ವಿವರವನ್ನು ನೀಡಿದರು.
ವರ್ಷ, ವರ್ಷಕ್ಕೂ ವೈವಿಧ್ಯತೆಯನ್ನು ಮುಡಿಗೇರಿಸಿಕೊಂಡು, ವ್ಯಾಪ್ತಿ ವಿಸ್ತಾರಗಳನ್ನು ಹೆಚ್ಚಿಸಿಕೊಳ್ಳುತ್ತಾ, ಜನಮಾನಸಕ್ಕೆ ಶಿಕ್ಷಣ, ಮನರಂಜನೆ ಮತ್ತು ಧಾರ್ಮಿಕ ಮೌಲ್ಯಗಳನ್ನು ತಲುಪಿಸುತ್ತಾ ಬರುತ್ತಿದ್ದು, ಈ ವರ್ಷವೂ ಅದನ್ನು ಇನ್ನಷ್ಟು ಉತ್ತಮವಾಗಿ ನೆರವೇರಿಸಲು ಶ್ರೀಮಠದ `ಶರಣ ಸಂಸ್ಕೃತಿ ಉತ್ಸವ’ ಕಾರ್ಯಕಾರಿ ಸಮಿತಿ ನಿರ್ಧರಿಸಿದ್ದು, ಇದಕ್ಕೊಂದು ಮಹತ್ವದ ಕಾರಣವೂ ಇದ್ದು, ಶ್ರೀಮಠದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂತಹ ಕೆಲಸ, ಕಾರ್ಯಗಳನ್ನು ನಿರ್ವಹಿಸಿದ 24ನೇ ಪೀಠಾಧಿಪತಿಗಳಾದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಆಚರಣೆ ಅವಕಾಶ ಒದಗಿ ಬಂದಿದೆ ಎಂದರು.
ಪೂಜ್ಯರು ತಮ್ಮ ಅವಧಿಯಲ್ಲಿ ಸಮಾಜದಲ್ಲಿದ್ದ ಬಡತನ, ಶೋಷಣೆ ಇವುಗಳನ್ನು ನೋಡಿ, ಇದಕ್ಕೆ ಪರಿಹಾರ ಎಂದರೆ `ಶಿಕ್ಷಣ’ ಎಂಬುದನ್ನು ಅರಿತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಮತ್ತು ಹೊರರಾಜ್ಯಗಳ ನಗರಪ್ರದೇಶಗಳಲ್ಲಿ ಜಯದೇವ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಶ್ರೀಗಳು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ನಾಡನ್ನು ಕಟ್ಟುವ ಕಾರ್ಯದಲ್ಲಿ ಶ್ರಮಿಸಿದ್ದಾರೆ. ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ಇವರ ಜನಪರ ಕಾಳಜಿಯ ಕೊಡುಗೆಯಾಗಿದೆ ಎಂದು ತಿಳಿಸಿದರು.
ಪೂಜ್ಯರ ಜನ್ಮ ಶತಮಾನೋತ್ಸವವನ್ನು 1975ರಲ್ಲಿ ಚಿತ್ರದುರ್ಗ-ದಾವಣಗೆರೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಅಂದಿನ ಪ್ರಧಾನಮಂತ್ರಿಗಳಾದ ಶ್ರೀ ಮೊರಾರ್ಜಿ ದೇಸಾಯಿಯವರು ಭಾಗವಹಿಸಿದ್ದು, ವಿಶೇಷವಾಗಿರುತ್ತದೆ. ಈ ವರ್ಷ ಶರಣಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ಇಂತಹ ಮಹಾನ್ ಚೇತನ, ಪುಣ್ಯ ಪುರುಷರ ನೂರೈವತ್ತನೇ ಜಯಂತ್ಯುತ್ಸವ ಆಚರಿಸುವ ಸೌಭಾಗ್ಯ ದೊರಕಿರುವುದು ನಮ್ಮಗಳ ಭಾಗ್ಯ ವಿಶೇಷ ಎಂದು ಭಾವಿಸಲಾಗಿದೆ ಎಂದು ಹೇಳಿದರು.
ಪೂಜ್ಯರು ಗುರುವಾಗುವ ಬಗೆಯಿಂದ ಮೊದಲುಗೊಂಡು ಲೋಕ ಸುತ್ತಿ ಮಠ ಕಟ್ಟುವ ಮತ್ತು ಮಠ ಕಟ್ಟಿ ಶುದ್ಧ ಸಮಾಜ ಕಟ್ಟುವ ಕೆಲಸಕ್ಕೆ ಅವರದೊಂದು ಸಿದ್ಧ ಮಾದರಿ. ವಿರಾಗಿಯಾಗಿ ಪಡೆದದ್ದನ್ನು ಸಮಾಜೋಪಯೋಗಿಯಾಗಿ ಬಳಸುವವರಿಗೆ ಪ್ರಜ್ಞಾ ಪ್ರೇರಣೆಯಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: KPSC | ಇಂದು,ನಾಳೆ ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆ
ಹಳೆಯ ವೃಕ್ಷದ ಬೇರುಗಳಿಗೆ ಹೊಸ ಆಶಯಗಳ ನೀರೆರೆಯು ಮೂಲಕ ವರ್ತಮಾನದ ಬದುಕನ್ನು ಇನ್ನಷ್ಟು ಸುಂದರವಾಗಿ ಕಟ್ಟಿಕೊಳ್ಳಬಹುದೆಂಬ ಆಶಯದೊಂದಿಗೆ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವವನ್ನು ಪ್ರಧಾನವಾಗಿರಿಸಿಕೊಂಡು ಶರಣಸಂಸ್ಕೃತಿ ಉತ್ಸವ-2024ನ್ನು 5-10-2024 ರಿಂದ 13-10-2024ರವರೆಗೆ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
25-09-2024 ರಿಂದ 04-10-2024 ರವರೆಗೆ ಶರಣಸಂಸ್ಕೃತಿ ಉತ್ಸವ ಪೂರ್ವಭಾವಿಯಾಗಿ ಖ್ಯಾತ ಯೋಗ ಗುರು ಶ್ರೀ ಚೆನ್ನಬಸವಣ್ಣನವರು ಅವರಿಂದ ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಶಿವಯೋಗವನ್ನು ಏರ್ಪಡಿಸಲಾಗಿದೆ. ಚಿತ್ರದುರ್ಗ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ಹೊನಲು-ಬೆಳಕಿನ ಜಯದೇವ ಕಪ್ ಕ್ರೀಡಾಕೂಟಕ್ಕೆ ಅಕ್ಟೋಬರ್ 1ರಂದು ಮಂಗಳವಾರ ಮುಂಜಾನೆ ಶ್ರೀಮಠದಿಂದ ಬೈಕ್ ರ‍್ಯಾಲಿಯೊಂದಿಗೆ ವರ್ಣರಂಜಿತ ವಿದ್ಯುಕ್ತ ಚಾಲನೆ ನೀಡಲಾಗುವುದು.
ಜಾಥಾವು ಕನಕ ವೃತ್ತದಿಂದ ಪ್ರಾರಂಭವಾಗಿ ಬುರುಜನಹಟ್ಟಿ ವೃತ್ತ, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಪ್ರಧಾನ ಅಂಚೆ ಕಛೇರಿ, ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್, ಬಿ.ಡಿ. ರಸ್ತೆ, ಜೆ.ಎಂ.ಐ.ಟಿ. ವೃತ್ತದಿಂದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಕೊನೆಗೊಳ್ಳಲಿದೆ.
ಚಿತ್ರದುರ್ಗ ಜಿಲ್ಲೆಯ ಯುವಕ್ರೀಡಾ ಪ್ರತಿಭಾ ಶೋಧ ಹಾಗೂ ಜಿಲ್ಲೆಯ ಕ್ರೀಡಾಲೋಕವನ್ನು ವಿಸ್ತರಿಸುವ ಮತ್ತು ಉತ್ತೇಜಿಸುವ ಆಶಯದೊಂದಿಗೆ ನಡೆಯುವ ಈ ಕ್ರೀಡಾಕೂಟವು ಅಕ್ಟೋಬರ್ 1 ರಿಂದ 7 ರವರೆಗೆ ನಡೆಯಲಿದ್ದು, ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 17ವರ್ಷದೊಳಗಿನ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಬಡ್ಡಿ, ಖೋಖೋ, ಹ್ಯಾಂಡ್‌ಬಾಲ್, ಕ್ರಿಕೆಟ್, ವಾಲಿಬಾಲ್ ಕ್ರೀಡೆಗಳು ಹಾಗೂ ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ, ಮ್ಯೂಜಿಕಲ್ ಚೇರ್, ಮಡಿಕೆ ಹೊಡೆಯುವುದು, ಬಕೆಟ್ ಇನ್ ದ ಬಾಲ್, ಥ್ರೋಬಾಲ್, ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಗಳು ನಡೆಯಲಿವೆ.
ದಿನಾಂಕ 5-10-2024 ರಿಂದ 13-10-2024ರವರೆಗೆ ಪ್ರತಿನಿತ್ಯ ಬೆಳಗ್ಗೆ 7.30ಕ್ಕೆ ಸಹಜ ಶಿವಯೋಗವನ್ನು ಏರ್ಪಡಿಸಲಾಗಿದೆ. ಅಕ್ಟೋಬರ್ 5,6 ಮತ್ತು 7ರಂದು ಬೆಳಗ್ಗೆ 10.30ಕ್ಕೆ ವಚನಕಮ್ಮಟ ಗೋಷ್ಠಿಗಳು ನಡೆಯಲಿದ್ದು, ನಾಡಿನ ವಿವಿಧ ಚಿಂತಕರುಗಳು ಭಾಗವಹಿಸುವರು.
ಕ್ಲಿಕ್ ಮಾಡಿ ಓದಿ: Kisan Credit Card: ಸಾಲ ಸೌಲಭ್ಯಕ್ಕೆ ರೈತರಿಂದ ಅರ್ಜಿ ಆಹ್ವಾನ | ಕಡಿಮೆ ಬಡ್ಡಿ ದರ
ದಿನಾಂಕ 5-10-2024 ರಂದು ಅಪರಾಹ್ನ 4 ಗಂಟೆಗೆ ಶ್ರೀ ಜಯದೇವ ಕಪ್ ಪಂದ್ಯಾವಳಿ ಅಂಗವಾಗಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನವು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನೀಲಕಂಠೇಶ್ವರ ದೇವಸ್ಥಾನ, ಗಾಂಧಿ ವೃತ್ತ, ಬಿ.ಡಿ.ರಸ್ತೆ ಮೂಲಕ ಹಳೆಯ ಮಾಧ್ಯಮಿಕ ಶಾಲಾ ಆವರಣದವರೆಗೆ ನಡೆಯಲಿದೆ.
ದಿನಾಂಕ 8-10-2024ರಂದು ಕೃಷಿ ಮತ್ತು ಕೈಗಾರಿಕೆ ಮೇಳ ಮತ್ತು ಪ್ರದರ್ಶನ ಇದ್ದು, ಸಚಿವರುಗಳಾದ ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಎನ್.ಚೆಲುವರಾಯಸ್ವಾಮಿ, ಶ್ರೀ ಶರಣಬಸಪ್ಪ ದರ್ಶನಾಪೂರ, ಶ್ರೀ ಹೆಚ್.ಕೆ. ಪಾಟೀಲ್, ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳು ಭಾಗವಹಿಸುವರು.
ದಿನಾಂಕ 8, 9, 10 ರಂದು ಪ್ರತಿದಿನ ಬೆಳಗ್ಗೆ 10.30 ಗಂಟೆಗೆ ಮತ್ತು ಸಂಜೆ 6.00 ಗಂಟೆಗೆ ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ನಿಮಿತ್ತ ವಿಚಾರ ಸಂಕಿರಣಗಳು ನಡೆಯಲಿದ್ದು, ತುಮಕೂರಿನ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ನಿಡಸೂಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು, ಗದುಗಿನ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದೇವರು, ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ನಿಡುಮಾಮಿಡಿ ಮಠದ ಡಾ. ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ, ಶ್ರೀ ಜಗದೀಶ್ ಶೆಟ್ಟರ್, ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಮೊದಲಾದವರು ಪಾಲ್ಗೊಳ್ಳುವರು.
ಈ ಸಮಾರಂಭಗಳಲ್ಲಿ ಜಯದೇವ ಜಗದ್ಗುರುಗಳ ಜೀವನ ಮತ್ತು ಸಾಧನೆ, ಶೂನ್ಯಪೀಠ-ಮುರುಘಾ ಪರಂಪರೆಯಲ್ಲಿ ಜಯದೇವರು, ಜಯದೇವ ಜಗದ್ಗುರುಗಳವರ ಸಾಹಿತ್ಯ, ಸಂಸ್ಕೃತಿ ಪ್ರೀತಿ, ಜಯದೇವ ಜಗದ್ಗುರುಗಳ ಬಾಲ್ಯ ಮತ್ತು ಶಿಕ್ಷಣ, ಜಯದೇವ ಜಗದ್ಗುರುಗಳು – ಅರಮನೆ-ಗುರುಮನೆ, ಜಯದೇವ ಜಗದ್ಗುರುಗಳ ವಿದ್ವತ್ ಹಾಗೂ ಶಾಖಾಮಠಗಳು, ಜಯದೇವ ಜಗದ್ಗುರುಗಳು ಮತ್ತು ಅಡ್ಡಪಲ್ಲಕ್ಕಿ ಮತ್ತು ಜಯದೇವ ಜಗದ್ಗುರುಗಳು-ಸಮಕಾಲೀನರು ವಿಷಯ ಚಿಂತನೆಗಳು ನಡೆಯಲಿವೆ.
ದಿನಾಂಕ 8-10-2024 ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಶ್ರೀ ಜಯದೇವ ಜಗದ್ಗುರುಗಳವರ ಸಂAಸ್ಮರಣ ಗ್ರಂಥ ಚಿನ್ಮೂಲಾದ್ರಿ ಚಿದ್ರೂಪಿ ಸಂಪುಟವನ್ನು ಲೋಕಾರ್ಪಣೆ ಗೊಳಿಸುವರು.
ಕ್ಲಿಕ್ ಮಾಡಿ ಓದಿ: BJP protest: ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ | ಬಿಜೆಪಿ ಕಾರ್ಯಕರ್ತರ ಆಗ್ರಹ
ದಿನಾಂಕ 11-10-2024ರಂದು ಬಸವಕೇಂದ್ರ ಪದಾಧಿಕಾರಿಗಳ ಸಮಾವೇಶ, ಮಹಿಳಾ ಸಮಾವೇಶಗಳು ನಡೆಯಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಚಿವೆ ಶ್ರೀಮತಿ ಲಕ್ಷ್ಮಿಹೆಬ್ಬಾಳ್ಕರ್, ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಶ್ರೀಮತಿಎಂ.ಪಿ. ಲತಾ ಮಲ್ಲಿಕಾರ್ಜುನ್, ಶ್ರೀಮತಿ ಶಶಿಕಲಾಜೊಲ್ಲೆ ಅವರುಗಳು ಭಾಗವಹಿಸುವರು.
ದಿನಾಂಕ 12 ರಂದು ಶರಣಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾಮೇಳವು ನಡೆಯಲಿದ್ದು, ಕಲಾಮೇಳವು ಶ್ರೀಮಠದಿಂದ ಹೊರಟು ರಾಷ್ಟ್ರಿಯ ಹೆದ್ದಾರಿ 4, ಬಿ.ಡಿ. ರಸ್ತೆ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಮೇಲುದುರ್ಗಕ್ಕೆ ಆಗಮಿಸುವುದು. ಮೆರವಣ ಗೆಯಲ್ಲಿ ಧಾರ್ಮಿಕ, ಐತಿಹಾಸಿಕ, ಸಾಮಾಜಿಕ ಪುಣ್ಯಪುರುಷರ ಸ್ತಬ್ಧ ದೃಶ್ಯಗಳು ಹಾಗೂ ವಿವಿಧ ಜನಪದ ಕಲಾತಂಡಗಳು ಭಾಗವಹಿಸುವುವು. ಸಂಜೆ 6.30 ಗಂಟೆಗೆ ಮಕ್ಕಳ ಸಂಭ್ರಮ ಕಾರ್ಯಕ್ರಮವಿರುತ್ತದೆ.
ದಿನಾಂಕ 13 ರಂದು ಬೆಳಗ್ಗೆ ಶ್ರೀ ಮುರಿಗೆ ಶಾಂತವೀರ ಸ್ವಾಮಿಗಳವರ ಭಾವಚಿತ್ರ ಶೂನ್ಯ ಪೀಠಾರೋಹಣ, ಧರ್ಮಗುರು ಬಸವಣ್ಣನವರ ಮತ್ತು ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣ ಗೆ ಮತ್ತು ಶ್ರೀ ಜಯದೇವ ಜಂಗೀಕುಸ್ತಿ ಹಾಗೂ ಸಂಜೆ 6.00 ಗಂಟೆಗೆ ಸಮಾರೋಪ ಮತ್ತು ಸಂಗೀತ ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಕ್ಲಿಕ್ ಮಾಡಿ ಓದಿ: Restriction; ಸೆಪ್ಟೆಂಬರ್ 15 ರಂದು ಹೆದ್ದಾರಿಯ ಎಡ ಭಾಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ | ಯಾಕೆ ಗೊತ್ತಾ…
ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಡಾ. ಬಸವಪ್ರಭು ಸ್ವಾಮಿಗಳು, ಕೆ.ಎಂ.ವೀರೇಶ್, ಟಿ.ಎಸ್.ಎನ್. ಜಯಣ್ಣ, ಕಲ್ಲೇಶಯ್ಯ, ಸುರೇಶ್‌ಬಾಬು, ಡಿ.ಎಸ್. ಮಲ್ಲಿಕಾರ್ಜುನ್, ಮಹಡಿ ಶಿವಮೂರ್ತಿ, ಹೆಚ್.ಸಿ. ನಿರಂಜನಮೂರ್ತಿ, ರುದ್ರಾಣಿ ಗಂಗಾಧರ್, ಶ್ರೀಮತಿ ದೇವಿಕುಮಾರಿ ವಿಶ್ವನಾಥ್, ಮೋಕ್ಷ ರುದ್ರಸ್ವಾಮಿ, ಲತಾ ಉಮೇಶ್, ರುದ್ರಪ್ಪ, ಸಿದ್ದೇಶ್, ಕೃಷ್ಣಪ್ಪ, ಶ್ರೀನಿವಾಸ್, ಉಮೇಶ್, ಬಸವರಾಜ ಕಟ್ಟಿ, ಎನ್. ತಿಪ್ಪಣ್ಣ, ಪಿ.ವೀರೇಂದ್ರಕುಮಾರ್, ಶಶಿಧರ ಬಾಬು, ಕಣ ವೆಮಾರಮ್ಮ ತಿಪ್ಪೇಸ್ವಾಮಿ, ವಿವಿಧ ಸಮಾಜದ ಮುಖಂಡರುಗಳು ಇದ್ದರು.
