Connect with us

    KPSC | ಇಂದು,ನಾಳೆ ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆ

    KPSC

    ಮುಖ್ಯ ಸುದ್ದಿ

    KPSC | ಇಂದು,ನಾಳೆ ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 14 SEPTEMBER 2024

    ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗವು(KPSC) ಇಂದು (ಸೆ.14) ಕನ್ನಡ ಭಾಷಾ ಪರೀಕ್ಷೆ ಮತ್ತು ನಾಳೆ (ಸೆ.15) ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಉದ್ದೇಶಿಸಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಸರ್ಕಾರದ ಆದೇಶದಂತೆ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕಾಲಾವಾಕಾಶ ನೀಡಲಾಗುವುದು ಎಂದು ಕೆಪಿಎಸ್‍ಸಿ ತಿಳಿಸಿದೆ.

    ಕ್ಲಿಕ್ ಮಾಡಿ ಓದಿ: Kisan Credit Card: ಸಾಲ ಸೌಲಭ್ಯಕ್ಕೆ ರೈತರಿಂದ ಅರ್ಜಿ ಆಹ್ವಾನ | ಕಡಿಮೆ ಬಡ್ಡಿ ದರ

    ಶುಕ್ರವಾರ ಆಯೋಗವು ಪ್ರಕಟನೆ ಹೊರಡಿಸಿದ್ದು, ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆ.14 ಮತ್ತು ಸೆ.15ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಉಪ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಈಗ ಪರೀಕ್ಷೆಯನ್ನು ಮುಂಡೂದಲಾಗಿದೆ ಎಂದಿದೆ.

    ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಿದ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿ ಅನ್ವಯವಾಗುವಂತೆ ಗರಿಷ್ಟ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಿದೆ.

    ಕ್ಲಿಕ್ ಮಾಡಿ ಓದಿ: Adike: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆ ರಾಶಿ ಬೆಲೆಯಲ್ಲಿ ಅಲ್ಪ ಚೇತರಿಕೆ

    ಅದರಂತೆ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಮುಕ್ತಾಯದ ನಂತರ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top