CHITRADURGA NEWS | 06 February 2026
ಚಿತ್ರದುರ್ಗ: ನಾಗರೀಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಮಹಿಳಾ ಸರ್ಕಾರಿ ನೌಕರರ ಸಂಘಟನೆ | ರಾಜ್ಯಾದ್ಯಂತ ವಿಸ್ತರಣೆ | ರೋಶಿನಿ ಗೌಡ
ಬನಶಂಕರಿ ಲೇಔಟ್, ಮಲ್ಲಯ್ಯ ಬಡಾವಣೆ ಹಾಗೂ ದಫೆದಾರ್ ನಾರಾಯಣಪ್ಪ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕುವೆಂಪು ನಗರದಲ್ಲಿ ಓವರ್‍ಹೆಡ್ ಟ್ಯಾಂಕ್ ನಿರ್ಮಿಸಿ ಸುತ್ತಲು ವಿಸ್ತರಿಸಿಕೊಂಡಿರುವ ನಗರಕ್ಕೆ ನೀರು ಪೂರೈಸಬೇಕು.
ಬನಶಂಕರಿ ಲೇಔಟ್ ಪಾರ್ಕ್ ಪಕ್ಕದಲ್ಲಿ ರುಡ್‍ಸೆಟ್ ಹತ್ತಿರ ಚರಂಡಿ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಶನಿಮಹಾತ್ಮ ದೇವಸ್ಥಾನದ ರಸ್ತೆ ಅಭಿವೃದ್ದಿಯಾಗಬೇಕು. ಇಲ್ಲಿ ಮಕ್ಕಳ ಎರಡು ಹಾಸ್ಟೆಲ್‍ಗಳಿದ್ದು, ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ ಗಂಟೆಗಳಲ್ಲಿ ಹಾವುಗಳಿವೆ. ರಾತ್ರಿ ವೇಳೆ ಜನ ಸಂಚರಿಸಲು ಕಷ್ಟವಾಗಿದೆ. ಬೀದಿ ದೀಪಗಳನ್ನು ಅಳವಡಿಸಬೇಕು.
ಚಳ್ಳಕೆರೆ ಗೇಟ್‍ನಿಂದ ಶನಿಮಹಾತ್ಮ ದೇವಸ್ಥಾನದ ರಸ್ತೆ ತನಕ ಸರ್ವಿಸ್ ರೋಡ್ ಇದ್ದು, ಇಲ್ಲಿ ತಲೆಎತ್ತಿದ್ದ ಗೂಡಂಗಡಿಗಳನ್ನು ಕಳೆದ ತಿಂಗಳು ತೆರವುಗೊಳಿಸಲಾಗಿದೆ. ಆದರೆ ರಸ್ತೆ ಅಭಿವೃದ್ದಿಯಾಗಿಲ್ಲ ಎಂದು ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿ ಅಧ್ಯಕ್ಷ ಪಿ.ಈ.ವೆಂಕಟಸ್ವಾಮಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಇದನ್ನೂ ಓದಿ: ಹೊಳಲ್ಕೆರೆ ತಾಲೂಕಿಗೆ 14 KPS ಶಾಲೆ ಮಂಜೂರು | ಡಾ.ಎಂ.ಚಂದ್ರಪ್ಪ
ಸಮಿತಿಯ ಉಪಾಧ್ಯಕ್ಷ ಎ.ತಿಪ್ಪೇಸ್ವಾಮಿ, ಕಾರ್ಯದರ್ಶಿ ವೈ.ಕೆ.ಮಹಾಸ್ವಾಮಿ, ಖಜಾಂಚಿ ಎ.ಟಿ.ರಮೇಶ್, ನಿರ್ದೇಶಕರುಗಳಾದ ಹೆಚ್.ಕನಕದಾಸ್, ಟಿ.ರುದ್ರಮುನಿ, ಜಿ.ಟಿ.ಲಕ್ಷ್ಮಿನಾರಾಯಣಸ್ವಾಮಿ, ಕೆ.ಹೆಚ್.ತಿಪ್ಪೇಶ್‍ರೆಡ್ಡಿ, ಕೆ.ಟಿ.ತಿಪ್ಪೇಸ್ವಾಮಿ, ಮಾರುತೇಶ್‍ರೆಡ್ಡಿ, ರೂಪ, ಸವಿತಾ ಬೀರಾದಾರ್ ಹಾಜರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
