
CHITRADURGA NEWS | 19 SEPTEMBER 2025
ಚಿತ್ರದುರ್ಗ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಜಾತಿ ಸಮೀಕ್ಷೆಯಿಂದ ಯಾರು ವಂಚಿತರಾಗದೆ ಜಾತಿ ಕಾಲಂನಲ್ಲಿ ಅವರವರ ಪಂಗಡದ ಹೆಸರುಗಳನ್ನು ಕಡ್ಡಾಯವಾಗಿ ನಮೂದಿಸುವಂತೆ ಜವಳಿ ಅಭಿವೃದ್ದಿ ನಿಗಮದ ಮಾಜಿ ರಾಜ್ಯಾಧ್ಯಕ್ಷ ಗೊ.ತಿಪ್ಪೇಶಿ ಮನವಿ ಮಾಡಿದರು.
ಇದನ್ನೂ ಓದಿ: ಕುರುಬರು ನಾಯಕರಿಗೂ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ | ಈಶ್ವರಾನಂದಪುರಿ ಸ್ವಾಮೀಜಿ
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸೌಲತ್ತುಗಳನ್ನು ಪಡೆಯಬೇಕಾಗಿರುವುದರಿಂದ ತಪ್ಪದೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ಪ್ರಧಾನವಾಗಿ ದೇವಾಂಗ, ಪದ್ಮಸಾಲಿ, ಪಟ್ಟಸಾಲಿ, ತೊಗಟವೀರ, ಕುರುಹಿನಶೆಟ್ಟಿ, ಸ್ವಕುಳಸಾಲಿ ಹಠಗಾರ ಹೀಗೆ 27 ಉಪ ಪಂಗಡಗಳಾಗಿ ವಿಭಜನೆಯಾಗಿದೆ.
ಜಾತಿ ಕಾಲಂನಲ್ಲಿ ಅವರವರ ಪಂಗಡಗಳನ್ನು ನಮೂಸಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಇದರಿಂದ ಮೀಸಲಾತಿ ಪಡೆಯಲು ಅನಕೂಲವಾಗಲಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, ರಾಜ್ಯದಲ್ಲಿ 60 ಲಕ್ಷದಷ್ಟಿದ್ದೇವೆ. ಬಾಗಲಕೋಟೆ, ಬೆಂಗಳೂರು, ಗದಗ, ಬೆಂಗಳೂರಿನಲ್ಲಿ ಹೆಚ್ಚಿನ ಜನಸಂಖ್ಯೆ ಇದೆ.
ಇದನ್ನೂ ಓದಿ: ಸೆ.25 ರಿಂದ ಶರಣ ಸಂಸ್ಕೃತಿ ಉತ್ಸವ | ಆಹ್ವಾನ ಪತ್ರಿಕೆ ಬಿಡುಗಡೆ
ಕುಲಕಸುಬು ಕಾಲಂನಲ್ಲಿ ನೇಕಾರಿಕೆ ಎಂದು ಬರೆಸಬೇಕು. ಜನರ ಮಾನ ಕಾಪಾಡುವ ಪವಿತ್ರ ವೃತ್ತಿ ನೇಕಾರಿಕೆಯಲ್ಲಿ ತೊಡಗಿರುವವರು ಸಮೀಕ್ಷೆಯಿಂದ ತಪ್ಪಿಸಿಕೊಳ್ಳಬೇಡಿ ಎಂದು ಗೊ.ತಿಪ್ಪೇಶಿ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ.ಗೋವಿಂದಪ್ಪ, ಕಾರ್ಯದರ್ಶಿ ಸುರೇಶ್, ಶಿವರುದ್ರಪ್ಪ, ಉಂಬಕ್ಕ ಹಾಜರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
