CHITRADURGA NEWS | 22 FEBRUARY 2026
- PDO ಹುದ್ದೆಗಳನ್ನು ‘ಗ್ರೂಪ್-ಬಿ’ಗೆ ಉನ್ನತೀಕರಿಸಲು ರಾಜ್ಯಮಟ್ಟದಲ್ಲಿ ಬೃಹತ್ ಹೋರಾಟ
- ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಬೃಹತ್ ಪೂರ್ವಭಾವಿ ಸಭೆ
- ಸರ್ಕಾರ ಎಲ್ಲರನ್ನೂ ಗ್ರೂಪ್ ಬಿ ಎಂದು ಪರಿಗಣಿಸಲು ಯಾವ ತೊಂದರೆಯೂ ಇಲ್ಲ
ಚಿತ್ರದುರ್ಗ: ರಾಜ್ಯದ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳನ್ನು ‘ಗ್ರೂಪ್-ಬಿ’ಗೆ ಉನ್ನತೀಕರಿಸಲು ರಾಜ್ಯಮಟ್ಟದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಿ ಗ್ರೇಡ್ ಉನ್ನತೀಕರಣ ಸಂಘದ ರಾಜ್ಯಾಧ್ಯಕ್ಷ ರಮೇಶ್ ನಡಿಗೇರಿ ತಿಳಿಸಿದರು.
ಇದನ್ನೂ ಓದಿ: JJM ಕಳಪೆ ಕಾಮಗಾರಿ | ಬಿಲ್ ಪಾವತಿ ತಡೆಗೆ ಸಂಸದ ಗೋವಿಂದ ಕಾರಜೋಳ ಸೂಚನೆ
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಓ ‘ಹುದ್ದೆಗಳ ಉನ್ನತೀಕರಣ’ ಹಾಗೂ ಎಲ್ಲಾ ಪಿಡಿಒ ಹುದ್ದೆಗಳನ್ನು ‘ಗ್ರೂಪ್-ಬಿ’ (Group-B) ಶ್ರೇಣಿಗೆ ಸೇರಿಸುವ ಹೋರಾಟದ ಮುಂದಿನ ಹಂತವಾಗಿ, ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಬೃಹತ್ ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಹಿತದೃಷ್ಟಿಯಿಂದ ಈ ಹೋರಾಟ ಅತ್ಯಂತ ನಿರ್ಣಾಯಕವಾಗಿದೆ. ಪಿಡಿಒಗಳ ಮೇಲಿರುವ ಕೆಲಸದ ಒತ್ತಡ ಮತ್ತು ಜವಾಬ್ದಾರಿಗೆ ಪೂರಕವಾಗಿ ಹುದ್ದೆಗಳನ್ನು ತಕ್ಷಣವೇ ಗ್ರೂಪ್-ಬಿ ಶ್ರೇಣಿಗೆ ಮೇಲ್ದರ್ಜೆಗೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಸ್ಥಿರತೆ ಕಂಡುಕೊಂಡ ರಾಶಿ ಅಡಿಕೆ ಬೆಲೆ
ಪಿಡಿಒಗಳು ಸರ್ಕಾರದ ನೂರಾರು ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾಯಕಯೋಗಿಗಳು. ನಮ್ಮ ದಶಕಗಳ ಬೇಡಿಕೆಯನ್ನು ಸರ್ಕಾರ ಕೂಡಲೇ ಪರಿಗಣಿಸಿ ನ್ಯಾಯ ಒದಗಿಸಬೇಕು. ಆಡಳಿತ ವಿಕೇಂದ್ರೀಕರಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಪಿಡಿಓಗಳು ಎಂದು ವಿವರಿಸಿದರು.
ರಾಜ್ಯದಲ್ಲಿ ಒಟ್ಟು 5964 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ 1500 ಜನರನ್ನು ಗ್ರೂಪ್ ಬಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ 613 ಮಂದಿಯನ್ನು ಗ್ರೂಪ್ ಬಿ ಗೆ ಉನ್ನತೀಕರಿಸಲಾಗಿದೆ. ಆದರೆ, ಜ್ಯೇಷ್ಠತಾ ಪಟ್ಟಿಯ ಗೊಂದಲದ ಕಾರಣಕ್ಕೆ ಈ ಒಂದೂವರೆ ಸಾವಿರ ಜನ ಕೂಡಾ ಪದೋನ್ನತಿ ಆಗಿಲ್ಲ. ಇದರೊಟ್ಟಿಗೆ ಬಾಇಯಿರುವ 4500 ಪಡಿಓಗಳನ್ನು ಬಿ ಗ್ರೂಪ್ ಎಂದು ಪರಿಗಣಿಸಿ ಪದೋನ್ನತಿ ನೀಡಬೇಕು ಎಂದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಪಿಡಿಓಗಳನ್ನು ಗ್ರೂಪ್ ಬಿಗೆ ಉನ್ನತೀಕರಣ ಮಾಡುವುದರಿಂದ ಸರ್ಕಾರಕ್ಕೆ ನಷ್ಟ ಆಗುವುದಿಲ್ಲ. ಈಗಾಗಲೇ ನಮ್ಮ ವೇತನ ಅದನ್ನು ದಾಟಿ ಮುಂದಕ್ಕೆ ಸಾಗಿದೆ. ಕೇವಲ ಉನ್ನತೀಕರಣ ಮಾತ್ರ ಬೇಕಾಗಿದೆ. ಇದರಿಂದ ಇಲಾಖೆಯಲ್ಲಿ ಹೊಸ ಚೈತನ್ಯ ಮೂಡಲಿದ್ದು, ಸರ್ಕಾರದ ಕೆಲಸಗಳು ಮತ್ತಷ್ಟು ವೇಗವಾಗಿ ನಡೆಯಲಿವೆ.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ, ಪಿಡಿಓ ಹುದ್ದೆಗಳು ಸೃಜನೆಯಾಗಿ 16 ವರ್ಷ ಕಳೆದಿದ್ದು, ಅಲ್ಲಿಂದ ಇಲ್ಲಿವರೆಗೆ ನಮಗೆ ಬಡ್ತಿ ಇಲ್ಲ. ಜೇಷ್ಠತಾ ಪಟ್ಟಿ ಕಾರಣಕ್ಕೆ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ, ಸರ್ಕಾರ ಎಲ್ಲರನ್ನೂ ಗ್ರೂಪ್ ಬಿ ಎಂದು ಪರಿಗಣಿಸಲು ಯಾವ ತೊಂದರೆಯೂ ಇಲ್ಲ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: ಈ 5 ಮನೆಯಲ್ಲಿ ತಯಾರಿಸಿದ ಪಾನೀಯಗಳು ನಿಮಿಷಗಳಲ್ಲಿ ಮಲಬದ್ಧತೆಯನ್ನು ನಿವಾರಿಸುತ್ತವೆಯಂತೆ
ಪಿಡಿಓ ಹುದ್ದೆಯ ನಂತರದ ಪದೋನ್ನತಿ ಸಹಾಯಕ ನಿರ್ದೇಶಕ ಸ್ಥಾನ. ಆದರೆ ಹೈಕೋರ್ಟ್ ನಂತರ ಕೆಲ ಪಿಡಿಓಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ಪ್ರಕರಣ ಇತ್ಯರ್ಥ ಆಗುವವರೆಗೆ ಬಿ ಗ್ರೂಪ್ ಮಾಡಲಿ ಎಂದರು.
ಉಪಾಧ್ಯಕ್ಷ ಉಸ್ಮಾನ್ ನದಾಫ್ ಮಾತನಾಡಿ, ಸರ್ಕಾರದ 43 ಇಲಾಖೆಗಳಲ್ಲಿ ಸಿ ವೃಂದದಲ್ಲಿ ಅತೀ ಹೆಚ್ಚು ಕಾಯ್ದೆ ಅನುಷ್ಠಾನ ಮಾಡುವವರು ಪಿಡಿಒಗಳು. ಪ್ರತಿ ವರ್ಷ ಒಬ್ಬ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎರಡು ಕೋಟಿ ವರೆಗೆ ವೆಚ್ಚ ಮಾಡುವ ಹುದ್ದೆ ಇದಾಗಿದೆ. ಜಿಲ್ಲಾ ಪಂಚಾಯಿತಿ ಅಥವಾ ಇನ್ನಿತರೆ ಸಭೆಗಳಿಗೆ ಪಿಡಿಓಗಳು ಹೋಗುವುದು ಅಥವಾ ಬಿ ಗ್ರೂಪ್ ಹಂತದ ಅಧಿಕಾರಿಗಳನ್ನು ಸಭೆಗೆ ಕರೆಯಲು ಸಿ ಗ್ರೂಪ್ ಇರುವ ಕಾರಣಕ್ಕೆ ಆಗುತ್ತಿಲ್ಲ ಎಂದರು.
ಇದನ್ನೂ ಓದಿ: ಪ್ರತಿದಿನ ಸ್ಕಿಪ್ಪಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೇ? ತಿಳಿಯಿರಿ
ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷ ಜಯಗೌಡ ಪಾಟಿಲ್, ಪಿಡಿಓಗಳಾದ ಹನುಮಂತ ಕರ್ಣಕೋಟೆ, ನಾಗರಾಜ್ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

