
CHITRADURGA NEWS | 22 FEBRUARY 2026
ಅನೇಕರು ಫಿಟ್ ಆಗಿರಲು ಜಿಮ್‌ಗೆ ಹೋಗುವುದು ಅಥವಾ ರನ್ನಿಂಗ್ ಮಾಡುತ್ತಾರೆ. ಆದರೆ ಇವುಗಳನ್ನು ಹೊರತುಪಡಿಸಿದರೆ ಸ್ಕಿಪ್ಪಿಂಗ್ ಮಾಡುವುದು ನೀವು ಫಿಟ್ ಆಗಿರಲು ತುಂಬಾ ಸುಲಭ ಮತ್ತು ಅಗ್ಗದ ಮಾರ್ಗವಾಗಿದೆ. ಸ್ಕಿಪ್ಪಂಗ್ ಕೇವಲ ಕ್ರೀಡೆಯಲ್ಲ, ಇದು ಇಡೀ ದೇಹಕ್ಕೆ ಉತ್ತಮ ವ್ಯಾಯಾಮ. ಇದು ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದನ್ನು ಪ್ರತಿದಿನ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ
ಪ್ರತಿದಿನ ಸ್ಕಿಪ್ಪಂಗ್ ಮಾಡುವುದರಿಂದ ನಿಮ್ಮ ಹೃದಯ ಬಡಿತ ಸುಧಾರಿಸುತ್ತದೆ. ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ . ಸ್ಕಿಪ್ಪಂಗ್ ಅನ್ನು ವೇಗವಾಗಿ ಮಾಡುವುದು ನಿಮ್ಮ ಆರೋಗ್ಯ ಮತ್ತು ನಿಮ್ಮ ದೇಹ ಎರಡಕ್ಕೂ ಇನ್ನಷ್ಟು ಪ್ರಯೋಜನಕಾರಿ.
ಕ್ಯಾಲೊರಿಗಳನ್ನು ಸುಡುತ್ತವೆ
ನೀವು ಸ್ಕಿಪ್ಪಂಗ್ ಮಾಡಿದಾಗಲೆಲ್ಲಾ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ. ನೀವು ಬೊಜ್ಜಿನ ಬಗ್ಗೆ ಚಿಂತಿತರಾಗಿದ್ದರೆ, ಸ್ಕಿಪ್ಪಿಂಗ್ ಮಾಡುವುದು ಒಂದು ವರದಾನವೆಂದೆ ಹೇಳಬಹುದು. ಈ ವ್ಯಾಯಾಮವು ಕ್ಯಾಲೊರಿಗಳನ್ನು ತ್ವರಿತವಾಗಿ ಸುಡುತ್ತದೆ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 10 ನಿಮಿಷಗಳ ಕಾಲ ಸ್ಕಿಪ್ಪಂಗ್ ಮಾಡುವುದರಿಂದ ಸುಮಾರು 100 ಕ್ಯಾಲೊರಿಗಳನ್ನು ಸುಡಬಹುದು ಎಂದು ನಂಬಲಾಗಿದೆ.
ಮೂಳೆಗಳು ಬಲ ಪಡೆಯುತ್ತವೆ
ಹಗ್ಗ ಹಾರುವುದು ಹೃದಯಕ್ಕೆ ಹಾಗೂ ಮೂಳೆಗಳಿಗೆ ಪ್ರಯೋಜನಕಾರಿ ಎಂದು ಸಂಶೋಧನೆ ತೋರಿಸಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ವಯಸ್ಸಾದಂತೆ ಇದು ಮೂಳೆಗಳ ಸಾಂದ್ರತೆಯನ್ನು ಸುಧಾರಿಸುತ್ತದೆ. ಪ್ರತಿದಿನ 10-15 ನಿಮಿಷಗಳ ಕಾಲ ಸ್ಕಿಪ್ಪಂಗ್ ಮಾಡುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ.
ದೇಹದ ಸಮತೋಲನ ಮತ್ತು ಸಮನ್ವಯವನ್ನು ಸುಧಾರಿಸುತ್ತದೆ
ಸ್ಕಿಪ್ಪಂಗ್ ಮಾಡುವುದು ಸಮತೋಲನ ಮತ್ತು ಕೈ-ಕಾಲುಗಳ ಸಮನ್ವಯವನ್ನು ಸುಧಾರಿಸುತ್ತದೆ . ವಯಸ್ಸಾದಂತೆ ಸಮತೋಲನ ಹದಗೆಡುತ್ತದೆ. ಆದ್ದರಿಂದ ಇದನ್ನು ಸುಧಾರಿಸಲು ಇದು ಉತ್ತಮ ಮಾರ್ಗವಾಗಿದೆ. ಇದು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹ ಸಹಾಯ ಮಾಡುತ್ತದೆ.
ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ
ಸ್ಕಿಪ್ಪಂಗ್ ಮಾಡುವುದು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ವ್ಯಾಯಾಮವು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ನೀವು ಕೆಲವೊಮ್ಮೆ ಆತಂಕವನ್ನು ಅನುಭವಿಸಿದರೆ, ಸ್ಕಿಪ್ಪಂಗ್ ಮಾಡುವುದರಿಂದ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
