ಮುಖ್ಯ ಸುದ್ದಿ
ಕೋಟೆನಾಡಲ್ಲಿ ರಾಮನಾಮ ಸ್ಮರಣೆ | ರಾಮೋತ್ಸವ ದೀಪೋತ್ಸವ ಸಂಭ್ರಮ

CHITRADURGA NEWS | 22 JANUARY 2024
ಚಿತ್ರದುರ್ಗ (CHITRADURGA): ಅಯೋಧ್ಯೆಯಲ್ಲಿ ರಾಮಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೋಟೆನಾಡಿನಲ್ಲಿ ಸೋಮವಾರ ‘ರಾಮೋತ್ಸವ’ ನಡೆಯಿತು. ಮುಂಜಾನೆಯಿಂದ ರಾತ್ರಿವರೆಗೂ ಪೂಜಾ ಕಾರ್ಯ, ಸಂಭ್ರಮ ಸಾಗಿತು.
ಇದನ್ನೂ ಓದಿ: ಅಯೋಧ್ಯೆ ಭವ್ಯ ಮಂದಿರದಲ್ಲಿ ಬಾಲರಾಮ ವಿರಾಜಮಾನ
ತಳಿರು ತೋರಣ, ಕೇಸರಿ ಧ್ವಜದಿಂದ ಸಿಂಗಾರಗೊಂಡಿದ್ದ ನಗರದ ದೇವಸ್ಥಾನಗಳು ಭಕ್ತರ ಕಣ್ಮನ ಸೆಳೆದವು. ನಗರ, ಹಳ್ಳಿ ಸೇರಿದಂತೆ ಜಿಲ್ಲಾದ್ಯಂತ ರಾಮನಾಮ ಸ್ಮರಣೆ ಮೊಳಗಿತು. ಈ ಕ್ಷಣಗಳು ನಿಮ್ಮ ಮುಂದೆ..

ಚಿತ್ರದುರ್ಗದ ಜಟ್‌ಪಟ್ ನಗರ ಸಮೀಪದ ಹಿಂದೂ ರುದ್ರಭೂಮಿಯ ಈಶ್ವರ ದೇವಸ್ಥಾನದಲ್ಲಿ ಕರಸೇವಕ ಟೈಗರ್ ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಿದ ಕ್ಷಣ.
ಆನೆ ಬಾಗಿಲ ಬಳಿ ರಾಮಮಂದಿರದ ಮಾದರಿ ಇಟ್ಟು ಪೂಜೆ ಸಲ್ಲಿಸಿದ ರಾಜಸ್ಥಾನ ಯುವಕ ಮಂಡಳಿ.

ವಿದ್ಯುತ್ ದೀಪಾಲಂಕಾರದಲ್ಲಿ ಕಣ್ಮನ ಸೆಳೆದ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರವೇಶ ರಸ್ತೆ.
ರೋಟರಿ ಬಾಲಭವನದ ಬಳಿ ಟ್ಯಾಕ್ಸಿ ಚಾಲಕರಿಂದ ರಾಮನಿಗೆ ಪೂಜೆ.
ತರಳಬಾಳು ನಗರದ ಈಶ್ವರ ಬಡಾವಣೆಯಲ್ಲಿ ಬೆಳಗ್ಗೆ ರಾಮೋತ್ಸವ, ಸಂಜೆ ದೀಪೋತ್ಸವ.
ಹೊಸದುರ್ಗ ತಾಲೂಕಿನ ಕಡದಿನಕೆರೆಯಲ್ಲಿ ಶ್ರೀರಾಮ ಹಾಗು ಹನುಮಂತ ದೇವರ ಮೆರವಣಿಗೆ.
ಅಯ್ಯಪ್ಪ ಸ್ವಾಮಿಯ ದೇವಾಸ್ಥಾನದಲ್ಲಿ ಆಂಜನೇಯ ಸ್ವಾಮಿ, ಮಹಾ ವಿಷ್ಣು ದೇವತೆಗಳಿಗೆ ಹೂವಿನ ಅಲಂಕಾರ.
ದೀಪಾರಾದನೆಗೆ ಚಾಲನೆ ನೀಡಿದ ಕರ ಸೇವಕ ಸಿ.ವಿ.ವೆಂಕಟರಾಮ್ ರಾವ್.
ವಿಶ್ವಹಿಂದೂ ಪರಿಷತ್ -ಬಜರಂಗದಳದಿಂದ ಸಿಹಿ ವಿತರಣೆ.
ಅಂಭಾ ಭವಾನಿ ದೇವಸ್ಥಾನದಲ್ಲಿ ಶ್ರೀರಾಮಚಂದ್ರನಿಗೆ ವಿಶೇಷ ಪೂಜೆ.
ಹಳಿಯೂರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಸಂಭ್ರಮಿಸಿದ ಗ್ರಾಮಸ್ಥರು.
ಕುಂಬಾರ ಬೀದಿಯಲ್ಲಿ ಶ್ರೀರಾಮನಿಗೆ ಪೂಜೆ.
