ಮುಖ್ಯ ಸುದ್ದಿ
ಉದ್ಯೋಗ ಮಾಡುವ ಆಸೆಯೇ, ಏನು ಮಾಡಬೇಕೆಂಬ ಐಡಿಯಾ ಇಲ್ಲವೇ.. ಹಾಗಿದ್ದರೆ ಈ ಸುದ್ದಿ ಓದಿ, ನಿಮಗೊಂದು ಒಳ್ಳೆಯ ದಾರಿ ಸಿಗುತ್ತೆ..

CHITRADURGA NEWS | 06 MAY 2024
ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಿರುದ್ಯೋಗಿ ಗ್ರಾಮೀಣ ಭಾಗದ ಯುವಕ-ಯುವತಿಯರಿಗಾಗಿ ಸ್ವ ಉದ್ಯೋಗ ಮಾಡಲು ರುಡ್‍ಸೆಟ್ ಸಂಸ್ಥೆಯಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಮಠದ ಮುಂದಿನ ಕೆರೆಯ ದುರ್ವಾಸನೆಗೆ ಜನ ಹೈರಾಣ | ಸತ್ತು ತೇಲುತ್ತಿವೆ ಸಾವಿರಾರು ಮೀನುಗಳು
ಮೇ ಮತ್ತು ಜೂನ್ ತಿಂಗಳಿನಲ್ಲಿ ತರಬೇತಿಗಳು ಪ್ರಾರಂಭವಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಲು ಕೋರಿದೆ. ಈ ತರಬೇತಿಗೆ ಸಂಬಂದಪಟ್ಟ ಕೌಶಲ್ಯ ಕುರಿತು ಪ್ರಾರ್ಥಮಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ತರಬೇತಿಯು ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ.
ಅಭ್ಯರ್ಥಿಗಳ ಅರ್ಹತೆ :
- 19 ರಿಂದ 45 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
- ಕನ್ನಡ ಓದಲು ಬರೆಯಲು ಬಲ್ಲವರಾಗಿರಬೇಕು.
- ತರಬೇತಿಗೆ ಸಂಬಂಧಿಸಿದಂತೆ ಪ್ರಾಥಮಿಕ ಜ್ಞಾನ ಹೊಂದಿರಬೇಕು.
- ಉದ್ಯೋಗವನ್ನು ಮಾಡಬೇಕೆಂಬ ಆಸಕ್ತಿ ಹೊಂದಿರಬೇಕು.
ಇದನ್ನೂ ಓದಿ: ಈರುಳ್ಳಿ ಬೆಳೆಗಾರರ ಮೊಗದಲ್ಲಿ ಮಂದಹಾಸ | ರಫ್ತಿಗೆ ಕೇಂದ್ರ ಸರ್ಕಾರದ ಸಮ್ಮತಿ
ಆಸಕ್ತ ಅಭ್ಯರ್ಥಿಗಳು ತಮ್ಮ ಮೊಬೈಲ್ ನಂಬರ್, ಸ್ವವಿಳಾಸದ ಅರ್ಜಿಯೊಂದಿಗೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಜೆರಾಕ್ಸ್ ಪ್ರತಿಗಳೊಂದಿಗೆ ಮೇ.15ರ ಒಳಗಾಗಿ ರುಡ್‍ಸೆಟ್ ಸಂಸ್ಥೆಯಲ್ಲಿ ನೇರವಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618282445,9481778047, 9019299901, 8660627785
ಇದನ್ನೂ ಓದಿ: ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರಿಗೆ ಪ್ರೊ.ಶಿ.ಚೆ.ನಂದೀಮಠ ಪ್ರಶಸ್ತಿ
ತರಬೇತಿಯ ವಿಷಯಗಳು | ಎಷ್ಟು ದಿನಗಳ ಅವಧಿ |
---|---|
ಮೋಟಾರ್, ಪಂಪ್‍ಸೆಟ್ ರಿಪೇರಿ | 30 ದಿನಗಳು. |
ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವೀಸ್ | 30 ದಿನಗಳು |
ಬ್ಯೂಟಿಪಾರ್ಲರ್ ಮ್ಯಾನೇಜ್‍ಮೆಂಟ್ | 30 ದಿನಗಳು |
ಅಣಬೆ ಬೇಸಾಯ ತರಬೇತಿ | 10 ದಿನಗಳು |
ಎರೆಹುಳು ಗೊಬ್ಬರ ತಯಾರಿಕೆ | 10 ದಿನಗಳು |
ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ | 30 ದಿನಗಳು |
ಎಂಬ್ರಾಯಿಡರಿ ವರ್ಕ್ | 30 ದಿನಗಳು |
ಹೈನುಗಾರಿಕೆ ತರಬೇತಿ | 10 ದಿನಗಳು |
ಟಿವಿ ರಿಪೇರಿ | 30 ದಿನಗಳು |
