
CHITRADURGA NEWS | 21 FEBRUARY 2024
ಚಿತ್ರದುರ್ಗ: ಮೂರು ವರ್ಷಗಳ ಹಿಂದೆಯೇ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸೆಟ್ಟೇರಿದ್ದ ರಾಜವೀರ ಮದಕರಿ ನಾಯಕರ ಕುರಿತ ಗಂಡುಗಲಿ ಮದಕರಿನಾಯಕ ಸಿನಿಮಾ ಅದ್ಯಾಕೋ ಮುಂದುವರೆಯಲಿಲ್ಲ.
ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಸಿನಿಮಾದಲ್ಲಿ ಮದಕರಿ ನಾಯಕನಾಗಿ ತೆರೆಗೆ ಬರಬೇಕಾಗಿತ್ತು. ರಾಜೇಂದ್ರಸಿಂಗ್ ಬಾಬು ಈ ಸಿನಿಮಾದ ಆಕ್ಷನ್ ಕಟ್ ಹೇಳಲು ಅಣಿಯಾಗಿದ್ದರು.
ಇದನ್ನೂ ಓದಿ: 1 ಲಕ್ಷ ನಿರುದ್ಯೋಗಿಗಳಿಗೆ ಸುವರ್ಣಾವಕಾಶ | ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ
ದೊಡ್ಡ ಬಜೆಟ್ಟಿನ ಸಿನಿಮಾ ಆಗಿದ್ದ ರಾಜವೀರ ಮದಕರಿ ನಾಯಕ ಸಿನಿಮಾ ಬಗ್ಗೆ ಎರಡು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದಾರೆ. ರಾಜವೀರ ಮದಕರಿ ನಾಯಕ ಸಿನಿಮಾ ಸಬ್ಜೆಕ್ಟ್ ಗ್ರಿಪ್ ಸಿಗಲಿಲ್ಲ. ಯಾಕೆ ಅಂದರೆ ಲೆಜಂಡರಿ ಚಿತ್ರಗಳನ್ನು ಮಾಡುವಾಗ ಆ ಹಿಡಿತ ಇರಬೇಕು. ಈ ಕಾರಣಕ್ಕೆ ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಮದಕರಿ ಚಿತ್ರದ ಬದಲಾಗಿಯೇ ಕಾಟೇರ ಮಾಡಿದ್ದು ಎಂದಿದ್ದಾರೆ.
ದರ್ಶನ್ ಅವರ ಕಾಟೇರ ಚಿತ್ರ 50 ದಿನ ಪೂರೈಸಿದ ಸಂದರ್ಭದಲ್ಲಿ ನಟ ದರ್ಶನ್ ಮಾಧ್ಯಮದವರ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಮದಕರಿ ಇದು ನನ್ನ ಡ್ರೀಮ್ ಪ್ರಾಜೆಕ್ಟ್:
ಇನ್ನೂ ಖ್ಯಾತ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಕೂಡಾ ರಾಜವೀರ ಮದಕರಿ ನಾಯಕ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ವಾಣಿವಿಲಾಸ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಮೀಕ್ಷೆ
ಇದು ನನ್ನ ಕನಸಿನ ಸಿನಿಮಾ. ಎರಡು ವರ್ಷದ ಹಿಂದೆಯೇ ಕಥೆ ಮಾಡಿಸಿಟ್ಟಿದ್ದೇನೆ. ಚಿತ್ರ ವಿಳಂಬ ಆಗಲು ದರ್ಶನ್ ಅವರು ಕಾರಣ ಹೇಳಿದ್ದಾರೆ. ಆದರೆ, ಇದೊಂದು ನನ್ನ ಡ್ರೀಮ್ ಪ್ರಾಜೆಕ್ಟ್, ಒಂದಲ್ಲ ಒಂದು ದಿನ ಮಾಡುತ್ತೇನೆ ಎನ್ನುವ ಭರವಸೆ ಉಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
