
CHITRADURGA NEWS | 20 February 2026
ಚಿತ್ರದುರ್ಗ: ಚಿತ್ರದುರ್ಗ-ಶಿವಮೊಗ್ಗ ರಸ್ತೆ ರಾಷ್ಟ್ರೀಯ ಹೆದ್ದಾರಿ 13ರ ಮಾರ್ಗದಲ್ಲಿ ಫೆ.20 ರಂದು ಸಂಚಾರ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.
ಇದನ್ನೂ ಓದಿ: ನಾಯಕನಹಟ್ಟಿ ಜಾತ್ರೆ | ರಾಜಕೀಯ ಮತ್ತು ವೈಯಕ್ತಿಕ ಪ್ರಚಾರದ ಬ್ಯಾನರ್‍ಗಳಿಗೆ ಅವಕಾಶವಿಲ್ಲ | ADC ಕುಮಾರಸ್ವಾಮಿ

ಹೊಳಲ್ಕೆರೆ ತಾಲೂಕು ಅರೇಹಳ್ಳಿ ಬಳಿ ರೈಲ್ವೆ ಗೇಟ್ ಎಲ್‌ಸಿ ನಂ.162ರ ಮೇಲ್ವೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. 20 ರಂದು ಒಂದು ದಿನ ಈ ಬದಲಾವಣೆ ಆದೇಶ ಜಾರಿಯಲ್ಲಿರುತ್ತದೆ.
ಚಿತ್ರದುರ್ಗದ ಕಡೆಯಿಂದ ಬರುವ ವಾಹನಗಳು ಅರೇಹಳ್ಳಿಯಿಂದ ಮಾಳೇನಹಳ್ಳಿ, ಆರ್. ನುಲೇನೂರು ಮತ್ತು ಬಸಾಪುರ ಗೇಟ್ ನಿಂದ ಸಾಗಿ ಎನ್‌ಎಚ್ 369 ರಸ್ತೆ ಸೇರಬೇಕು.
ಶಿವಮೊಗ್ಗ, ಚನ್ನಗಿರಿ ಕಡೆಯಿಂದ ಬರುವ ಲಘು ವಾಹನಗಳು ಮಲ್ಲಾಡಿಹಳ್ಳಿ ಗೇಟ್ ಮೂಲಕ ಶಿವಪುರ, ಕುನಗಲಿ, ಮಲ್ಕಾಪುರ ಮಾರ್ಗವಾಗಿ ಎಎಚ್ 47 ರಸ್ತೆ ಸೇರಿ ಹೊಳಲ್ಕೆರೆ ಮೂಲಕ ಚಿತ್ರದುರ್ಗಕ್ಕೆ ತಲುಪಬಹುದು.
ಇದನ್ನೂ ಓದಿ: ರಾಜ್ಯ ಬಜೆಟ್ | ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಮೀಸಲಿಡುವಂತೆ DCM ಗೆ ಮನವಿ
ಮಲ್ಲಾಡಿಹಳ್ಳಿ ಕಡೆಯಿಂದ ಬರುವ ಭಾರಿ ವಾಹನಗಳು ಮಲ್ಲಾಡಿಹಳ್ಳಿ, ಶಿವಪುರ, ಹುಲೇಮಳಲಿ, ಹೊಸಳ್ಳಿ, ಕೋಟೆಹಾಳ್ ಕ್ರಾಸ್ ಮೂಲಕ ಚಿಕ್ಕಜಾಜೂರಿಗೆ ಬಂದು ನಂತರ ಹೊಳಲ್ಕೆರೆ ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳಬೇಕಿದೆ.
ಬದಲಾವಣೆಯ ಈ ಆದೇಶವನ್ನು ವಾಹನ ಚಾಲಕರು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಡಿಸಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
