
CHITRADURGA NEWS | 30 NOVEMBER 2025
ಹೊಳಲ್ಕೆರೆ: ರಾಜಕಾರಣಿಯಾದವನಿಗೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆ, ಇಚ್ಚಾಶಕ್ತಿಯಿರಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಇದನ್ನೂ ಓದಿ: ಡಿಸೆಂಬರ್ 02 ರಂದು ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ರಾಮಪ್ಪ ಜಿಲ್ಲಾ ಪ್ರವಾಸ
ಕೆಂಚಾಪುರ ಗ್ರಾಮದಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ನೂತನ ಕೆರೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಎರಡು ವರ್ಷಗಳ ಹಿಂದೆ ರಾಮಗಿರಿ ಬಳಿ ದೊಡ್ಡ ಟ್ರಾನ್ಸ್‍ಫಾರ್ಮರ್ ಅಳವಡಿಸಿದ್ದರಿಂದ ಕರೆಂಟ್ ಸಮಸ್ಯೆಯಿಲ್ಲದಂತಾಗಿದೆ. ರೈತರು ಅಡಿಕೆ ತೋಟ ಮಾಡಿಕೊಂಡು ಸುಖವಾಗಿರಬೇಕೆಂಬುದು ನನ್ನ ಆಸೆ. ಗಂಗಸಮುದ್ರ ಬಳಿ ದೊಡ್ಡ ಡ್ಯಾಂ ಕಟ್ಟಿಸಿದ್ದೇನೆ.
ತಾಲ್ಲೂಕಿನಾದ್ಯಂತ ಕೆರೆ ಕಟ್ಟೆ, ಚೆಕ್‍ಡ್ಯಾಂಗಳನ್ನು ನಿರ್ಮಿಸಿದ್ದೇನೆ. ಎರಡು ತಿಂಗಳೊಳಗೆ ತಾಲ್ಲೂಕಿನಲ್ಲಿರುವ 37 ಕೆರೆಗಳಿಗೆ ನೀರು ತುಂಬಿಸುತ್ತೇನೆ. ಇನ್ನು ಎರಡುವರೆ ವರ್ಷಗಳ ಅಧಿಕಾರವಿದೆ. ಎಲ್ಲೆಲ್ಲಿ ಏನು ಅಭಿವೃದ್ದಿ ಕೆಲಸ ಮಾಡಬೇಕೆಂಬ ಆಲೋಚನೆ ಮಾಡುತ್ತಿದ್ದೇನೆ.
ಎಂ.ಎಂ.ಸರ್ಕಾರಿ ಪ್ರೌಢಶಾಲೆಯನ್ನು ಕೆಡವಿ 46 ರೂಂಗಳನ್ನು ಕಟ್ಟಿಸಿದ ಪರಿಣಾಮ 1650 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 50 ನುರಿತ ಶಿಕ್ಷಕರುಗಳಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುತ್ತಿದೆ.
ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳಿಗೆ ತೊಂದರೆಯಾಗಬಾರದೆಂದು ಉಚಿತ ಬಸ್‍ಗಳನ್ನು ಬಿಟ್ಟು ಡ್ರೈವರ್, ಕಂಡಕ್ಟರ್‍ಗೆ ಸಂಬಳ ನೀಡಿ ಡೀಸೆಲ್ ಕೂಡ ಹಾಕಿಸುತ್ತಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತಹ ಪುಣ್ಯಸಾರ್ಥಕ ಕೆಲಸ ಮಾಡಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘಕ್ಕೆ ಚಿತ್ರದುರ್ಗ ಜಿಲ್ಲಾಧ್ಯಕ್ಷರ, ಪದಾಧಿಕಾರಿಗಳ ಆಯ್ಕೆ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶಣ್ಣ, ಹೊಳಲ್ಕೆರೆ ಬಿಜೆಪಿ. ಮಂಡಲ ಅಧ್ಯಕ್ಷ ಕುಮಾರಣ್ಣ, ಮಲ್ಲಿಕಾರ್ಜುನ್, ನುಲೇನೂರು ಶೇಖರ್, ಷಣ್ಮುಖಪ್ಪ, ದೇವರಮನೆ ಶೇಖರಪ್ಪ, ಕುಬೇರಪ್ಪ, ಹಳ್ಳಪ್ಪ, ಜಗದೀಶ್, ಗೋವಿಂದಪ್ಪ, ಶಿವಕುಮಾರ್, ಗುತ್ತಿಗೆದಾರ ಹೆಚ್.ಜಗದೀಶ್ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
