CHITRADURGA NEWS | 23 SEPTEMBER 2025
ಹೊಳಲ್ಕೆರೆ: ತಾಲ್ಲೂಕಿನ ಪಾಪೇನಹಳ್ಳಿ ಗ್ರಾಮದಲ್ಲಿ 16.56 ಕೋಟಿ ರೂ.ವೆಚ್ಚದಲ್ಲಿ ಪಾಪೇನಹಳ್ಳಿಯಿಂದ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮುಖಾಂತರ ಹಾದು ಹೋಗುವ ಟಿ.ಎಮ್ಮಿಗನೂರು ಸಿರಪ್ಪನಹಳ್ಳಿ ಮತ್ತು ಮಲಸಿಂಗನಹಳ್ಳಿ ಹೊಳಲ್ಕೆರೆ ಎನ್.ಹೆಚ್-13 ರವರೆಗೂ ನೂತನ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
ಇದನ್ನೂ ಓದಿ: ಅಡಿಕೆ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲು
ನಂತರ ಮಾತನಾಡಿದ ಶಾಸಕರು, ಸಾರ್ವಜನಿಕರ ಬದುಕನ್ನು ಹತ್ತಿರದಿಂದ ಕಂಡಿರುವ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪನವರು ಬಡವರು, ರೈತರು, ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದಾರೆಂದು ಗುಣಗಾನ ಮಾಡಿದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪನವರು ನನಗೆ ಮಾರ್ಗದರ್ಶಕರು. ಇಂತಹ ರಾಜಕಾರಣಿ ಸಿಗುವುದು ಅಪರೂಪ ಎಂದರು. ಸಿ.ಸಿ.ರಸ್ತೆಯಾಗುವ ಮುನ್ನ ಪೈಪ್‍ಲೈನ್ ಅಳವಡಿಸಿಕೊಳ್ಳಿ ನಂತರ ಭೂಮಿ ಅಗೆಯಬೇಕಾಗುತ್ತದೆ ಎಂದು ರೈತರಿಗೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಇನ್ನು ಮೂರ್ನಾಲ್ಕು ತಿಂಗಳೊಳಗೆ ತಾಲ್ಲೂಕಿನ ಎಲ್ಲಾ ಕೆರಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ತುಂಬಿಸಲಾಗುವುದು. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ ಎಂದರು.
ಇದನ್ನೂ ಓದಿ: ಶಿಕ್ಷಕರ ಸೇವಾ ಮನೋಭಾವ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ | ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಶಾಸಕ ಡಾ.ಎಂ.ಚಂದ್ರಪ್ಪ ಜಿಲ್ಲೆಯ ಎಲ್ಲಾ ಶಾಸಕರಿಗಿಂತಲೂ ಅಭಿವೃದ್ದಿ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಉತ್ತಮ ಆಡಳಿತಗಾರ, ಒಳ್ಳೆಯ ಕೆಲಸಗಾರ ಕೂಡ ಹೌದು.
ಹಿಡಿದ ಕೆಲಸವನ್ನು ಆಗುವತನಕ ಬಿಡಲ್ಲ. ನಮ್ಮದು ಪಕ್ಷ ಬೇರೆ ಬೇರೆ ಇರಬಹುದು. ಮನಸ್ಸು ಮಾತ್ರ ಒಂದೆ. ಅಭಿವೃದ್ದಿ ವಿಚಾರ ಬಂದಾಗ ಸಾಕಷ್ಟು ಚರ್ಚಿಸುತ್ತೇವೆ. ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ಭದ್ರಾ ಯೋಜನೆಯಿಂದ ತಾಲ್ಲೂಕಿಗೆ ನೀರು ಹರಿಯಲಿದೆ.
ಮೊದಲು ಹೊಸದುರ್ಗಕ್ಕೆ ನೀರು ಬರುತ್ತದೆ. ನಂತರ ಹೊಳಲ್ಕೆರೆ, ಹಿರಿಯೂರು ತಲುಪುತ್ತದೆ. ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಸಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಸಿ ಉದ್ಘಾಟಿಸಲಾಗುವುದು ಎಂದರು.
ಇದನ್ನೂ ಓದಿ: ಸಮೀಕ್ಷೆಯಲ್ಲಿ ಕಾಡುಗೊಲ್ಲ ಎಂದು ಬರಸಿ, ಮೀಸಲಾತಿ, ಸರ್ಕಾರದ ಸೌಲಭ್ಯ ಪಡೆಯಿರಿ | ಶಾಸಕ ಡಾ.ಎಂ.ಚಂದ್ರಪ್ಪ
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲಮ್ಮ, ಸದಸ್ಯರುಗಳಾದ ಗೌರಮ್ಮ, ರೀಟಾ ಅಂಜಿನಪ್ಪ, ಸದಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಣ್ಣ, ಅಜ್ಜಪ್ಪ, ಮಂಜಣ್ಣ, ರುದ್ರಪ್ಪ, ಹನುಮಂತಪ್ಪ, ವಿರುಪಾಕ್ಷಪ್ಪ, ಕೇಶವ, ದಾಸಯ್ಯನಹಟ್ಟಿ ರಮೇಶ್, ಊರಿನ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

