
CHITRADURGA NEWS | 07 MAY 2025
ಹೊಸದುರ್ಗ: ತಾಲೂಕಿನ ಗಡಿ ಗ್ರಾಮ ನಾಕೀಕೆರೆಯಲ್ಲಿ ಮಂಗಳವಾರ ಶ್ರೀ ಕಲ್ಲೇಶ್ವರ ಸ್ವಾಮಿ ಅಗ್ನಿಕುಂಡ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ನಾಕೀಕೆರೆ, ಸುತ್ತಮುತ್ತಲಿನ ಗ್ರಾಮಸ್ಥರು, ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ, ಹೊಸಬನ್ನಿಹಟ್ಟಿ, ಹೊಳಲ್ಕೆರೆ ತಾಲೂಕಿನ ತೊಡರನಾಳು, ಗೊಡಬನಾಳು ಸೇರಿದಂತೆ ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಿರುವ ದೇವರ ಭಕ್ತರು ಭಾಗವಹಿಸಿದ್ದರು.


ಇದನ್ನೂ ಓದಿ: ನಾಕೀಕೆರೆ ಗ್ರಾಮದಲ್ಲಿ ವಿಜೃಂಭಣೆಯ ಕೆಂಚಾಂಬಿಕಾ ದೇವಿಯ ಕಾರ್ತಿಕ ಮಹೋತ್ಸವ | ಮೂರು ಕ್ವಿಂಟಾಲ್ ಬೇಳೆಯ ಹೋಳಿಗೆ ತಯಾರಿ
ಮೇ.5 ರಂದು ಬೆಳಗ್ಗೆ 11 ಗಂಟೆಗೆ ಧ್ವಜ ಪೂಜೆಯೊಂದಿಗೆ ಅಗ್ನಿಕುಂಡ ಮಹೋತ್ಸವದ ಸಿದ್ಧತೆಗಳು ಪ್ರಾರಂಭವಾದವು. ಮೇ.6 ಮಂಗಳವಾರ ಬೆಳಗಿನ ಜಾವ 3 ಗಂಟೆಯಿಂದ ಶ್ರೀ ಕಲ್ಲೇಶ್ವರ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಆನಂತರ ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸಿ ಕೆಂಡ ಹಾಕುವ ಮೂಲಕ ಅಗ್ನಿಕುಂಡ ಸಿದ್ಧಪಡಿಸಲಾಯಿತು.
ಮಂಗಳವಾರ ಬೆಳಗ್ಗೆ ಪಲ್ಲಕ್ಕಿಯಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಗಂಗಾ ಪೂಜೆಯ ನಂತರ ನಂದಿ ಧ್ವಜ, ಚಮ್ಮಾಳ, ಗೊಂಬೆ ಕುಣಿತದೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸ್ವಾಮಿಯ ಮೆರವಣಿಗೆ ನಡೆಯಿತು.
ಇದನ್ನೂ ಓದಿ: ನಾಕೀಕೆರೆ ಕೋಡಿ ಆಲದ ಕೆಂಚಾಂಬಿಕಾ ದೇವಿ ಕಾರ್ತೀಕ ಮಹೋತ್ಸವ | ಹೋಳಿಗೆ ಅನ್ನ ಸಂತರ್ಪಣೆ
11.30 ರ ಸುಮಾರಿಗೆ ದೇವಸ್ಥಾನದ ಬಳಿ ಆಗಮಿಸಿದ ಮೆರವಣಿಗೆ, ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸುವ ಮೂಲಕ ಕೆಂಡ ತುಳಿದು ಸಂಪನ್ನಗೊಳಿಸಲಾಯಿತು.
ಅಗ್ನಿಕುಂಡ ಮಹೋತ್ಸವದ ನಂತರ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ಕುರಿ ಮೈ ತೊಳೆಯಲು ಹಳ್ಳಕ್ಕೆ ಇಳಿದಿದ್ದ ದಂಪತಿ ಸಾವು | ಕಾನಿಹಳ್ಳದಲ್ಲಿ ಘಟನೆ
ಮಂಗಳವಾರ ರಾತ್ರಿ 8 ಗಂಟೆಯಿಂದ ನಾಕೀಕೆರೆ ಗ್ರಾಮದ ಬೀದಿಗಳಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
