CHITRADURGA NEWS | 28 OCTOBER 2024
ಹೊಳಲ್ಕೆರೆ: ತಾಲ್ಲೂಕಿನ ಇಂಗಳದಹಳ್ಳಿ ಗ್ರಾಮದಲ್ಲಿ ಕೆ.ಎಂ.ಇ.ಆರ್.ಸಿ. ಯೋಜನೆಯಡಿಯಲ್ಲಿ 8.50 ಕೋಟಿ ರೂ.ವೆಚ್ಚದಲ್ಲಿ ಈಚಘಟ್ಟ, ಕಡೂರು, ಅಂದನೂರು, ಗುಂಡೇರಿಯಲ್ಲಿ ಸೇತುವೆ(Bridge)ಗಳ ನಿರ್ಮಾಣ ಕಾಮಗಾರಿ(work)ಗೆ ಸೋಮವಾರ ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ ಸಲ್ಲಿಸಿದರು.
ಕ್ಲಿಕ್ ಮಾಡಿ ಓದಿ: Member; ಜಲ ಶಕ್ತಿ ಸಂಸದೀಯ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಗೋವಿಂದ ಕಾರಜೋಳ ನೇಮಕ
ಶಾಸಕ ಎಂ.ಚಂದ್ರಪ್ಪ ಮಾತನಾಡಿ, ನೂರಾರು ಕೆರೆ, ಗೋಕಟ್ಟೆ, ಚೆಕ್‍ಡ್ಯಾಂಗಳನ್ನು ಕಟ್ಟಿಸಿರುವುದರಿಂದ ನೀರು ನಿಂತಿದೆ. ರೈತರಿಗೆ ನೀರು ವಿದ್ಯುತ್ ಮುಖ್ಯವಾಗಿರುವುದರಿಂದ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ರೇಷ್ಮೆ ಇಲಾಖೆಗೆ ಸೇರಿದ ಹತ್ತು ಎಕರೆ ಜಾಗದಲ್ಲಿ 220 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲು 250 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದೇನೆಂದರು.
ಏಳುವರೆ ಮೀ. ಸೇತುವೆ ಬೇಡ ಒಂಬತ್ತು ಮೀ.ನಷ್ಟು ಅಗಲವಾದ ಸೇತುವೆ ನಿರ್ಮಿಸುವಂತೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಕ್ಲಿಕ್ ಮಾಡಿ ಓದಿ: AdikeRate: ಅಡಿಕೆ ಧಾರಣೆ | ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ರಾಶಿ ಬೆಲೆ ಜಿಗಿತ
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್, ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಸಿ.ಮೋಹನ್, ಸದಸ್ಯರಾದ ಗಂಗಣ್ಣ, ರಮೇಶಣ್ಣ, ರುದ್ರಪ್ಪ, ಪರಮೇಶ್ವರಪ್ಪ, ಪ್ರಕಾಶ್, ಗುತ್ತಿಗೆದಾರ ನಾರಾಯಣ ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
