
CHITRADURGA NEWS | 13 SEPTEMBER 2025
ಚಿತ್ರದುರ್ಗ: ಹಾಸನ ಜಿಲ್ಲೆಯಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಟ್ರಕ್ ಹರಿದು 9 ಜನ ಮೃತಪಟ್ಟಿದ್ದಾರೆ. ಮೃತರಲ್ಲಿ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಯುವಕನೂ ಮೃತಪಟ್ಟಿದ್ದಾನೆ.
ಹೊಸದುರ್ಗ ತಾಲೂಕು ಗವಿರಂಗನಾಥಪುರ ಗ್ರಾಮದ ಇಂಜಿನಿಯರಿಂ ವಿದ್ಯಾರ್ಥಿ ಮಿಥುನ್ (20) ಮೃತ ಯುವಕ.

ನಿನ್ನೆ ಮಿಥುನ್ ಹುಟ್ಟು ಹಬ್ಬ ಇತ್ತು, ಸ್ನೇಹಿತರ ಜೊತೆಗೆ ಬರ್ತ್ ಡೇ ಆಚರಿಸಿಕೊಂಡು ಬಳಿಕ ಮೆರವಣಿಗೆಗೆ ತೆರಳಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಹೊಸದುರ್ಗ ಹಿಂದೂ ಮಹಾಸಾಗರ ಗಣಪತಿ ಸಂಘಟಕರ ವಿರುದ್ಧ ದೂರು ದಾಖಲು
ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿಯಲ್ಲಿ ನಡೆಯುತ್ತಿದ್ದ ಗಣಪತಿ ಮೆರವಣಿಗೆ ವೇಳೆ ಟ್ರಕ್ ಏಕಾಏಕಿ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಹಾಸನದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಮಿಥುನ್ ಗವಿರಂಗನಾಥಪುರದ ದೇವಸ್ಥಾನದಲ್ಲಿ ಬಿಲ್ ಕಲೆಕ್ಟರ್ ಕೆಲಸ ಮಾಡುತ್ತಿದ್ದ ನಾಗರಾಜ್ ಎಂಬುವವರ ಪುತ್ರ.
ಇದನ್ನೂ ಓದಿ: ಶೋಭಾಯಾತ್ರೆಗೆ ಭರದ ಸಿದ್ಧತೆ | ಝಗಮಗಿಸುತ್ತಿದೆ ಕೋಟೆನಾಡು ಚಿತ್ರದುರ್ಗ
ಸ್ನೇಹಿತರ ಜೊತೆಗೆ ಗಣೇಶೋತ್ಸವ ಮೆರವಣಿಗೆಗೆ ತೆರಳಿದ್ದ ಮಿಥುನ್ ಹಾಗೂ ಆತನ ಮೂರು ಜನ ಗೆಳೆಯರು ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
