
CHITRADURGA NEWS | 12 SEPTEMBER 2025
ಚಿತ್ರದುರ್ಗ: ನಗರದಲ್ಲಿ ಅ.27 ರಿಂದ ಪ್ರತಿಷ್ಠಾಪನೆಯಾಗಿರುವ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯೂ ಸೆ.13ರಂದು ಅದ್ದೂರಿಯಾಗಿ ನಡೆಯಲಿದೆ.
ಇದನ್ನೂ ಓದಿ: ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಯಾತ್ರೆ ನಾಳೆ | ಸಂಸದ ಯದುವೀರ್ ಉದ್ಘಾಟನೆ
ಶೋಭಯಾತ್ರೆ ಅಂಗವಾಗಿ ಸಮಿತಿಯವರು ನಗರದಲ್ಲಿ ವಿವಿಧ ವೃತ್ತದಲ್ಲಿರುವ ಪ್ರತಿಮೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ.

ಚಿತ್ರದುರ್ಗ ಆಳಿದ ಮದಕರಿ ನಾಯಕ ಪ್ರತಿಮೆಯ ಬಳಿ ಹಿಮಾಲಯ ಪವರ್ತ ನಿರ್ಮಾಣ ಮಾಡಿ, ಅದರ ಮೇಲೆ ಕನ್ನಡಾಂಬೆಯನ್ನು ಪ್ರತಿಷ್ಠಾಪನೆ ಮಾಡಿ, ಆಕೆಯ ಕೈಯಿಂದ ಭಾರತ ದೇಶದ ಭಾವುಟವನ್ನು ನೀಡಲಾಗಿದೆ.
ಮದಕರಿ ನಾಯಕನ ಕಾಲ ಬಳಿ ನಾಯಕ ಜನಾಂಗದ ಮಹರ್ಷಿ ವಾಲ್ಮಿಕಿಯ ಚಿತ್ರ ಹಾಕಲಾಗಿದೆ. ಇದರೊಂದಿಗೆ ಮುಂದುಗಡೆಯಲ್ಲಿ ದೇಶದ ರಕ್ಷಣೆಗೆ ಸಂಬಂಧಪಟ್ಟ ಶಸ್ತ್ರಸ್ರಗಳಾದ ರಾಕೆಟ್ ನಿರ್ಮಾಣ ಮಾಡಲಾಗಿದೆ. ಇದಾದ ನಂತರ ವಿದ್ಯುತ್ ದೀಪದಲ್ಲಿ ಗಣೇಶನ ಹಾಗೂ ನಂದಿಯ ಚಿತ್ರ. ಮದಕರಿ ನಾಯಕನ ವೃತ್ತದ ಸುತ್ತಾ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.

ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಯ ಹಿಂದೆ ಸ್ತಂಭಗಳ ಮೂಲಕ ಮಂಟಪ ನಿರ್ಮಾಣ ಮಾಡಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
ಒನಕೆ ಓಬವ್ವ ಪ್ರತಿಮೆ ಹಿಂದೆ ಮಹಿಳೆಯ ಚಿತ್ರ ಬಿಡಿಸಲಾಗಿದೆ, ವಿದ್ಯುತ್ ದೀಪದಲ್ಲಿ ಅಲಂಕಾರ ಮಾಡಲಾಗಿದೆ.
ಇದನ್ನೂ ಓದಿ: ಗಣಪತಿ ಶೋಭಾಯತ್ರೆಯಲ್ಲಿ ಡ್ರೋನ್ ಹಾರಿಸಿದರೆ ಹುಷಾರ್ | ಪೊಲೀಸರು ಡ್ರೋನ್ ಜಪ್ತಿ ಮಾಡ್ತಾರೆ
ಭಗವಾನ್ ಮಹಾವೀರ ಪ್ರತಿಮೆಗೆ ಮಂಟಪದ ಅಲಂಕಾರ ಮಾಡಲಾಗಿದೆ. ವಿದ್ಯುತ್ ದೀಪಗಳನ್ನು ಅಲಂಕಾರ ಮಾಡಲಾಗಿದೆ.
ವಾಸವಿ ವೃತ್ತದಲ್ಲಿನ ಓಂ ಚಿತ್ರಕ್ಕೂ ಸಹಾ ಅಲಂಕಾರವ ಮಾಡಲಾಗಿದೆ. ಮಂಟಪ ನಿರ್ಮಾಣ ಮಾಡಿ ಸುತ್ತಲೂ ವಿದ್ಯುತ್ ದೀಪಗಳಿಂದ ಓಂ ಚಿತ್ರ ನಿರ್ಮಾಣ ಮಾಡಲಾಗಿದೆ.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಹಿಂದೆ ತಾಂಡವಾಡುತ್ತಿರುವ ಶಿವ ಇರಿಸಲಾಗಿದೆ. ಶಿವನ ಕೈಯಲ್ಲಿ ಢಮರುಗ, ತ್ರಿಶೊಲ ನೀಡಲಾಗಿದೆ. ಪ್ರತಿಮೆಯ ಮುಂದೆ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ.

ಕನಕ ವೃತ್ತದಲ್ಲಿನ ಪ್ರತಿಮೆಯಲ್ಲಿ ಕನಕದಾಸರ ಹಿಂದೆ ಮಂಟಪ ನಿರ್ಮಾಣ ಮಾಡಿ ಅಲ್ಲಿ ವೆಂಕಟೇಶ್ವರ ಹಾಗೂ ಪದ್ಮಾವತಿ ಚಿತ್ರ ಪ್ರತಿಷ್ಠಾಪನೆ ಮಾಡಲಾಗಿದೆ. ಇದ್ದಲ್ಲದೆ ಪ್ರತಿಮೆಯ ಜಾಗದಲ್ಲಿ ವಿದ್ಯುತ್ ದೀಪಗಳಿಂದ ಆಲಂಕಾರ ಮಾಡಲಾಗಿದೆ. ಪ್ರತಿಮೆಯ ಬಳಿ ಆನೆ ಇರಿಸಲಾಗಿದೆ.
ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯಾಗಿರುವ ಮಂಟಪದಿಂದ ಹಿಡಿದು ಹೊಳಲ್ಕೆರೆ ರಸ್ತೆಯ ಕೊನೆಯವರೆಗೂ ಸಹಾ ಎಲ್ಲಾ ಅಂಗಡಿ, ಮನೆಯ ಮೇಲೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೊಭಾಯಾತ್ರೆಗೆ ಬಂದೋಬಸ್ತ್ | 151 ಕಡೆ ಸಿಸಿ ಟಿವಿ ಕ್ಯಾಮರಾ | 67 ಕ್ಯಾಮರಾಮೆನ್
ಒನಕೆ ಓಬವ್ವ ವೃತ್ತದಲ್ಲಿ ಹಾಗೂ ಗಾಂಧಿ ವೃತ್ತದಲ್ಲಿ ಕೇಸರಿ ಬಣ್ಣದ ಬಂಟಿಗ್ಸ್ ಹಾಕಲಾಗಿದೆ. ಗಣಪತಿ ಸಾಗುವ ದಾರಿಯುದ್ದಕ್ಕೂ ಸಹಾ ವಿವಿಧ ರೀತಿಯ ಅಲಂಕಾರ ಮಾಡಲಾಗಿದೆ.
ಶೋಭಾಯಾತ್ರೆಯಲ್ಲಿ ಭಾಗವಹಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
