Connect with us

    9 ತಿಂಗಳಲ್ಲಿ ಚಿತ್ರದುರ್ಗಕ್ಕೆ ಭದ್ರೆ ನೀರು ಸಚಿವ ಡಿ.ಸುಧಾಕರ್ | ಗಣರಾಜ್ಯೋತ್ಸವ ಭಾಷಣದಲ್ಲಿ ಉಲ್ಲೇಖ

    ಮುಖ್ಯ ಸುದ್ದಿ

    9 ತಿಂಗಳಲ್ಲಿ ಚಿತ್ರದುರ್ಗಕ್ಕೆ ಭದ್ರೆ ನೀರು ಸಚಿವ ಡಿ.ಸುಧಾಕರ್ | ಗಣರಾಜ್ಯೋತ್ಸವ ಭಾಷಣದಲ್ಲಿ ಉಲ್ಲೇಖ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 JANUARY 2024

    ಚಿತ್ರದುರ್ಗ: 2024ರ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಚಿತ್ರದುರ್ಗದವರೆಗೆ ಭದ್ರಾ ಮೇಲ್ದಂಡೆ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

    ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡು ಬರದ ನಾಡು ಹಸಿರುನಾಡಾಗುವ ದಿನಗಳು ಕ್ಷಣಗಣನೆಯಲ್ಲಿವೆ ಎಂದರು.

    ಇದನ್ನೂ ಓದಿ: ರಾಷ್ಟ್ರಪ್ರಶಸ್ತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ದಿವ್ಯಪ್ರಭು ಜಿ.ಆರ್.ಜೆ

    ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿ ಪೂರ್ಣಗೊಳಿಸಲು ಇರುವ ಕೆಲವೇ ತಾಂತ್ರಿಕ ತೊಡಕುಗಳನ್ನು ಸ್ಥಳದಲ್ಲೇ ನಿವಾರಣೆ ಮಾಡಲು ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮನವಿ ಮಾಡಲಾಗಿದೆ.

    ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಕೋಟೆಗೆ ಹೊನಲುಬೆಳಕು ವ್ಯವಸ್ಥೆ, ಚಂದ್ರವಳ್ಳ ತೋಟ ನವೀಕರಣ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಪ್ರವಾಸೀ ತಾಣಗಳ ಅಭಿವೃದ್ಧಿಗೆ ಹಾಗೂ ಪ್ರವಾಸಿಗರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರೂ. 29.00 ಕೋಟಿಗಳ ಅಂದಾಜಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆಗೆ ಅಂತಿಮ ರೂಪರೇಷಗಳನ್ನು ನೀಡಲಾಗುತ್ತಿದೆ.

    ಸಚಿವರ ಭಾಷಣದ ಬಿಂದುಗಳು

    • 2024 ಅಕ್ಟೋಬರ್ ವೇಳೆಗೆ ಜಿಲ್ಲೆಗೆ ಭದ್ರಾ ನೀರು
    • ಭದ್ರಾ ಕಾಮಗಾರಿ ವೀಕ್ಷಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‍ಗೆ ಮನವಿ
    • ಕೋಟೆ, ಚಂದ್ರವಳ್ಳಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ 29 ಕೋಟಿ ರೂ.

    ಭಾರತದ ಸಂವಿಧಾನವು ಜಗತ್ತಿನಲ್ಲಿನ ಅತೀ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 470 ವಿಧಿಗಳು, 12 ಪರಿಚ್ಛೇದಗಳು, 105 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ತರಲಾಯಿತು. ಆ ದಿನವನ್ನು ಭಾರತದ ಗಣರಾಜ್ಯ ದಿನವೆಂದು ಘೋಷಿಸಲಾಯಿತು.

    ಭಾರತವು ವಿಶ್ವದಲ್ಲಿಯೇ ಅತೀದೊಡ್ಡ ಲಿಖಿತ ಸಂವಿಧಾನ ಹೊಂದಿದ ದೇಶ ಹಾಗೂ ಪ್ರಜಾಪ್ರಭುತ್ವಕ್ಕೆ ಮೊತ್ತೊಂದು ಹೆಸರೇ ಭಾರತ ಎಂದೆನ್ನಬಹುದು ಎಂದರು.

    ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್

    ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್

    ಜಗತ್ತಿನಲ್ಲೇ ಶ್ರೀಮಂತ ಇತಿಹಾಸ ಹೊಂದಿರುವ ಭರತ ಖಂಡ ಈಗಿನ ನಮ್ಮ ಆಧುನಿಕ ಭಾರತ. ಹಲವು ರಾಜ ಮಹಾರಾಜರುಗಳ ಆಳ್ವಿಕೆ ನಡುವೆಯೂ ಇಡಿಯಾಗಿದ್ದ ದೇಶ ಅನೈಕ್ಯತೆಯ ಕಾರಣಕ್ಕೆ ಹಲವು ಬಾರಿ ಪರಕೀಯ ದಾಳಿಗೆ ತುತ್ತಾಗಿ ಕೊನೆಗೆ ಸುಮಾರು ಎರಡು ಶತಮಾನಗಳ ಹೋರಾಟಕ್ಕೆ ವೀರಯೋಧರ ಮತ್ತು ನೇತಾರರ ತ್ಯಾಗ ಬಲಿದಾನಗಳಿಂದ ದಾಸ್ಯದಲ್ಲಿದ್ದ ದೇಶವನ್ನು ಬಂಧನದಿಂದ ಬಿಡುಗಡೆ ಪಡೆಯಲಾಯಿತು. ಅಂಥ ಎಲ್ಲ ಸ್ವಾತಂತ್ಯ ಸೇನಾನಿಗಳಿಗೆ ಸ್ಮರಣೀಯ ವಂದನೆಗಳು.

    ಇದನ್ನೂ ಓದಿ: ಕೋಟೆನಾಡಿನಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ

    ಅವರು ರಕ್ತ ಚಲ್ಲಿದ ಮಣ್ಣನಲ್ಲಿ ನಾವಿಂದು ಸುಖ, ಸಮೃದ್ಧಿಯ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ನಮ್ಮದೇ ಆದ ಸಂವಿಧಾನವನ್ನು ರಚಿಸಿಕೊಂಡು ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುಂದುವರೆದ ರಾಷ್ಟ್ರಗಳ ಜೊತೆಗೆ ಮುನ್ನಡೆ ಇಡುತ್ತಿದ್ದೇವೆ. ಜಗತ್ತಿನಲ್ಲಿಯೇ ಪ್ರಜಾಪ್ರಭುತ್ವ ಆಡಳಿತಕ್ಕೆ ಮಾದರಿ ಎನ್ನಬಹುದಾದ ಈ ಸಂವಿಧಾನದ ಮಹಾ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ, ಅವರೊಂದಿಗೆ ಕೈ ಜೋಡಿಸಿ ದುಡಿದ ಮಹಾನಿಯರಿಗೆ ಕೃತಜ್ಞತಾ ಪೂರಕ ವಂದನೆಗಳು. ಇಂದು ಭಾರತ ದೇಶ ಸದೃಢ ಭಾರತವಾಗಿ ರೂಪುಗೊಳ್ಳುತ್ತಿದೆ ಎಂದು ಸ್ಮರಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top