CHITRADURGA NEWS | 31 JANUARY 2026
ಹಿರಿಯೂರು: ಫೆಬ್ರವರಿ 7 ರಂದು ನಡೆಯಲಿರುವ ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಂಜಿಆರ್ ಎಂದೇ ಖ್ಯಾತರಾಗಿರುವ ಎಂ.ಜಿ.ರಂಗಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯೂರಿನ ನೆಹರೂ ಮೈದಾನದಲ್ಲಿ ಫೆ.7 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 30 ಜನವರಿ | ಯಾವ ಅಡಿಕೆಗೆ ಎಷ್ಟು ರೇಟ್
ಎಂ.ಜಿ.ರಂಗಸ್ವಾಮಿ ಉಪನ್ಯಾಸಕರಾಗಿ, ಹವ್ಯಾಸಿ ಪತ್ರಕರ್ತರಾಗಿ ಲೇಖಕರಾಗಿ ಜಿಲ್ಲೆಯಲ್ಲಿ ಸಾಕಷ್ಟು ಸಾಹಿತ್ಯದ ಕೆಲಸ ಮಾಡುತ್ತಿದ್ದಾರೆ.
ಹಿರಿಯೂರು ತಾಲೂಕು ಮಲ್ಲಪ್ಪನಹಳ್ಳಿ ಗ್ರಾಮದ ರಂಗಸ್ವಾಮಿ ಅವರು ಧರ್ಮಪುರದ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 35 ವರ್ಷಗಳ ಕಾಲ ಉಪನ್ಯಾಸಕರು, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, 2022 ರಲ್ಲಿ ನಿವೃತ್ತರಾಗಿ ಹಿರಿಯೂರಿನಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಂಧ್ಯಾರೆಡ್ಡಿ ಆಯ್ಕೆ | ಕಸಾಪ ಘೋಷಣೆ
ಹವ್ಯಾಸಿ ಪತ್ರಕರ್ತರು, ಕ್ರೀಡೆ, ಪ್ರವಾಸ, ಛಾಯಾಗ್ರಹಣ, ಓದು ಇವರ ಆಸಕ್ತಿಗಳು. ಪತ್ರಿಕೆಗಳಿಗೆ ಬಿಡಿ ಲೇಖನಗಳನ್ನು ಬರೆದಿದ್ದಾರೆ. ʼಹಿರಿಯೂರು ಸೀಮೆ ಜಾನಪದʼ ಇವರ ಬಿಡಿ ಲೇಖನಗಳ ಸಂಗ್ರಹವಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಬುಕನಾನ್, ಮಾರಿ ಕಣಿವೆಯ ವಾಣಿವಿಲಾಸ ಸಾಗರದ ನಿರ್ಮಾಣದ ಕಥೆ, ತುಮಕೂರು ಜಿಲ್ಲೆಯಲ್ಲಿ ಬುಕನಾನ್, ಇವರ ಅನುವಾದಿತ ಕೃತಿಗಳಾಗಿವೆ.
ಇದನ್ನೂ ಓದಿ:ದಿನ ಭವಿಷ್ಯ | ಜನವರಿ 31 | ವೃತ್ತಿಪರ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ, ಆರ್ಥಿಕ ಪರಿಸ್ಥಿತಿ ಉತ್ತಮ
ನೆಲದ ಸಂಕಥನ, ದುರುಗ ಸೀಮೆ ಸಾಧಕರು ಕೃತಿಗಳು ಹೊರಗೆ ಬಂದಿವೆ. ಡಾಬ್ಸ್ ಆಡಳಿತದ ನೋಟಗಳು ಇವರ ಮತ್ತೊಂದು ಅನುವಾದಿತ ಕೃತಿಯಾಗಿದ್ದು, ಇದರೊಟ್ಟಿಗೆ ಬೆಂಗಳೂರು ಸೀಮೆಯಲ್ಲಿ ಬುಕನಾನ್ ಬಿಡುಗಡೆಗೆ ಸಿದ್ಧಗೊಂಡಿವೆ.
ಇವರ ಕೃತಿಗಳ ಆಯ್ದ ಭಾಗಗಳನ್ನು ದಾವಣಗೆರೆ ವಿವಿ ಬಿ.ಕಾಂ, ಬಿಬಿಎ ಪಠ್ಯಕ್ಕೆ ಅಳವಡಿಸಿರುವುದು ಹೆಮ್ಮೆಯ ವಿಚಾರವಾಗಿದೆ.
ಇದನ್ನೂ ಓದಿ: ಕೃಷಿಕ ಸಮಾಜದ ಸಭೆ | ಬಜೆಟ್ ನಲ್ಲಿ ನೀರಾವರಿ, ಕೃಷಿಗೆ ಆದ್ಯತೆ ನೀಡಲು ಪ್ರಸ್ತಾಪ
ಸಮ್ಮೇಳನಾಧ್ಯಕ್ಷರ ಆಯ್ಕೆ ವೇಳೆ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಜಿ.ಪ್ರೇಮ್‌ಕುಮಾರ್, ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಸಕ್ಕರ ರಂಗಸ್ವಾಮಿ, ಮಹಮ್ಮದ್ ಫಕೃದ್ದೀನ್, ಗೌರವ ಕಾರ್ಯದರ್ಶಿಗಳಾದ ಎಚ್.ಕೃಷ್ಣಮೂರ್ತಿ, ಜಿ.ನಿಜಲಿಂಗಪ್ಪ, ಕಸಬಾ ಹೋಬಳಿ ಅಧ್ಯಕ್ಷ ಪೊಲೀಸ್ ಭೇಟೆ ಪ್ರಸನ್ನ, ಧರ್ಮಪುರ ಹೋಬಳಿ ಅಧ್ಯಕ್ಷ ಅಶೋಕ್, ಬಸವರಾಜ್, ರೈತ ಮುಖಂಡ ಹೊರಕೇರಪ್ಪ, ಪ್ರಹ್ಲಾದ್, ಚಂದ್ರಶೇಖರಯ್ಯ, ವೇದ, ಪುಷ್ಪ, ಷಫೀವುಲ್ಲಾ, ಗಡಾರಿ ಕೃಷ್ಣ, ಮಾರುತೇಶ್, ಈರಣ್ಣ ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

ಸಕಾಲದಲ್ಲಿ ಸಮೃದ್ಧ ಮಾಹಿತಿ ಅನಾವರಣ 😊 ಪರಿಶ್ರಮಿಸುವ ನಿಮಗಿದೋ ಧನ್ಯವಾದಗಳು 🙏
Thank you sir..