
CHITRADURGA NEWS | 05 NOVEMBER 2025
ಚಿತ್ರದುರ್ಗ: ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆ ನಿರಂತವಾಗಬೇಕು. ಭಾಷೆಯ ಬಳಕೆಯೇ ಭಾಷೆಯ ಬೆಳವಣಿಗೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ಸಂವಹನದಲ್ಲಿ ಬೇರೆ ಭಾಷೆಯ ಪದ ಬಳಕೆ ಕಡಿಮೆ ಮಾಡಬೇಕು ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.
ಇದನ್ನೂ ಓದಿ: SSLC | 625 ಅಂಕ ಪಡೆದ ವಿದ್ಯಾರ್ಥಿಗಳಿಗೆ 1 ಲಕ್ಷ ಬಹುಮಾನ | ಶಾಸಕ ಎಂ.ಚಂದ್ರಪ್ಪ
ನಗರದ ಡಾನ್ ಬೋಸ್ಕೊ ಪದವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣ ಮತ್ತು ನಾಮಕರಣದ ಹೆಜ್ಜೆ ಗುರುತುಗಳನ್ನು ಅರಿತುಕೊಳ್ಳಬೇಕು. ಆಗ ಮಾತ್ರ ಕನ್ನಡ ಪ್ರಜ್ಞೆ ಮೂಡಿ ಭಾಷೆಯ ಮೇಲೆ ಅಭಿಮಾನ ಮೂಡುತ್ತದೆ ಎಂದರು.
ಕರ್ನಾಟಕ ಏಕೀಕರಣವಾಗಿ 70 ವರ್ಷ, ನಾಮಕರಣವಾಗಿ 52 ವರ್ಷಗಳಾಗಿವೆ. ಸುಮಾರು 20 ಪ್ರಾಂತಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಲು ನಡೆಸಿದ ಹೋರಾಟದ ಫಲವೇ ಏಕೀಕರಣ. ಈ ದಾರಿಯನ್ನು ವಿದ್ಯಾರ್ಥಿಗಳು ತಿಳಿಯಬೇಕು ಎಂದು ಹೇಳಿದರು.
‘ಕನ್ನಡ ಸಾಹಿತ್ಯಕ್ಕೆ ಜೈನ, ವೀರಶೈವ, ವೈದಿಕ ಇಸ್ಲಾಂ, ಕ್ರೈಸ್ತಧರ್ಮೀಯರು, ಜನಪದೀಯರು ಅಪಾರ ಕೊಡುಗೆ ನೀಡಿದ್ದಾರೆ. ವಚನಕಾರರು, ಕೀರ್ತನಕಾರರು, ತತ್ವಪದಕಾರರು, ಕನ್ನಡ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ’ ಎಂದರು.
ಇದನ್ನೂ ಓದಿ: ಮಾಲಿನ್ಯ ಮುಕ್ತ ಕರ್ನಾಟಕಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಪಣತೊಟ್ಟಿದೆ | ಸಚಿವ ಡಿ. ಸುಧಾಕರ್
‘ಆಧುನಿಕ ಕನ್ನಡ ಸಾಹಿತ್ಯ ವೈವಿಧ್ಯಮಯವಾಗಿ ಬೆಳೆದಿದೆ. ಕನ್ನಡ ಪರಂಪರೆಯನ್ನು ತಿಳಿದುಕೊಂಡು ಬಹುತ್ವದ ನೆಲೆಯಲ್ಲಿ ರಚನೆಯಾಗಿರುವ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಅಭಿಮಾನ ಮೂಡಬೇಕಾದರೆ ಅಧ್ಯಯನ ಮಾಡಬೇಕು’ ಎಂದು ತಿಳಿಸಿದರು.
‘ಕನ್ನಡ ಭಾವ ಶ್ರೀಮಂತಿಕೆಯ ಭಾಷೆಯಾಗಿದೆ. ನಾಡಗೀತೆಯ ಅರ್ಥವನ್ನು ಗ್ರಹಿಸುವ ಕಾರ್ಯವಾಗಬೇಕು. ನಾಡಗೀತೆಯನ್ನು ಬರೀ ಹಾಡುವುದು, ಕೇಳುವುದಲ್ಲ. ಅದರ ಒಳ ಅರ್ಥವನ್ನು ನಾವು ಗ್ರಹಿಸಬೇಕಿದೆ. ರಾಷ್ಟ್ರಕವಿ ಕುವೆಂಪು ಸರ್ವ ಜನಾಂಗದ ಶಾಂತಿಯ ತೋಟದ ಆಶಯ ವ್ಯಕ್ತಪಡಿಸಿದ್ದಾರೆ’ ಎಂದು ಸಂಸ್ಥೆ ಆಡಳಿತಾಧಿಕಾರಿ ಫೆಲಿಕ್ಸ್ ಸೆರಾವೊ ಹೇಳಿದರು.
‘ಸಾಹಿತ್ಯದ ಸಿಂಹಾವಲೋಕನ ಮಾಡಿದಾಗ ಮೈ ರೋಮಾಂಚನವಾಗುತ್ತದೆ. ನಮ್ಮ ಆಲೋಚನೆಗೆ ಉತ್ಸಾಹ ನೀಡುತ್ತದೆ. ವಿದ್ಯಾರ್ಥಿಗಳು ಕನ್ನಡಕ್ಕೆ ಒತ್ತು ನೀಡಬೇಕು’ ಎಂದು ತಿಳಿಸಿದರು.
ಕನ್ನಡ ನಾಡು ಕಟ್ಟುವುದರೆಂದರೆ ನಮ್ಮನ್ನು ಕಟ್ಟಿಕೊಳ್ಳುತ್ತಲೇ ಕನ್ನಡದ ಎಲ್ಲಾ ಮನಸ್ಸು ಹೃದಯಗಳನ್ನು ಬೆಸೆಯುವಂತಹದ್ದಾಗಿದೆ. ತಾಯಿಯ ಮೇಲಿನ ಪ್ರೀತಿ ವಾತ್ಸಲ್ಯ ಹೇಗಿದೆಯೋ ಹಾಗೇ ತಾಯ್ನಾಡಿನ ಭಾಷೆಯ ಬಗ್ಗೆ ಪ್ರೀತಿ, ವಾತ್ಸಲ್ಯ ನಮ್ಮಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ನಮ್ಮ ನಾಡು ಪ್ರಕಾಶಮಾನವಾಗಿ ಬೆಳಗಲಿದೆ’ ಎಂದು ಹೇಳಿದರು.
ಇದನ್ನೂ ಓದಿ: 66 ಶಿವಶರಣ-ಶರಣೆಯರ ವಚನ ಕಂಠಪಾಠ ಸ್ಪರ್ಧೆ
ಉಪಪ್ರಾಂಶುಪಾಲ ಫಾದರ್ ಕ್ರಿಸ್ಟಿ ಜೋಸೆಫ್, ಚಿತ್ರ ಸಮಾಜ ಸೇವಾ ಕೇಂದ್ರದ ನಿರ್ದೇಶಕ ಡಿಕಾನ್.ಅಂಥೂನಿ ರಾಜು. ಉಪನ್ಯಾಸಕ ಎನ್.ಧನಕೋಟಿ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
