
CHITRADURGA NEWS | 23 DECEMBER 2025
ಚಿತ್ರದುರ್ಗ: ಗಣಿತ ಕಠಿಣ ವಿಷಯವೆಂದು ಎಲ್ಲರೂ ತಪ್ಪು ತಿಳುವಳಿಕೆ ಇಟ್ಟುಕೊಂಡಿದ್ದಾರೆ. ಆದರೆ, ಅರ್ಥ ಮಾಡಿಕೊಂಡಲ್ಲಿ ಗಣಿತ ಅತಿ ಸುಲಭ. ಹೆಚ್ಚು ಅಂಕ ಗಳಿಸಬಹುದಾದ ನಂಬಿಕಾರ್ಹ ವಿಷಯ ಎಂದು ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಡಾ.ಲೋಕೇಶ್ ತಿಳಿಸಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ | ಅನುದಾನ ಬಿಡುಗಡೆಗೆ ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಪ್ರಸ್ತಾವನೆ | DCM ಡಿಕೆಶಿ

ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಖ್ಯಾತ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮನುಜನ್ ಜನ್ಮದಿನಾಚರಣೆ ಅಂಗವಾಗಿ ಅಂತಾರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜ್ಞಾನ ಹಾಗೂ ಇನ್ನಿತರ ತಾಂತ್ರಿಕ ವಿಷಯಗಳು ಗಣಿತದ ಮೇಲೆ ಅವಲಂಬಿತವಾಗಿವೆ. ರಾಮನುಜನ್ ಗಣಿತದ ಮೇಲೆ ಆಸಕ್ತಿ ಬೆಳಸಿಕೊಂಡಿದ್ದರಿಂದ ಉನ್ನತ ಸಾಧನೆ ಮಾಡಿದರು. ಗಣಿತ ಕುತೂಹಲಕಾರಿ ವಿಷಯ. ಒಮ್ಮೆ ಗಣಿತದ ಮೇಲೆ ಆಸಕ್ತಿ ಬಂದಲ್ಲಿ ಮಿಕ್ಕ ಎಲ್ಲಾ ವಿಷಯಗಳು ಸರಳವಾಗುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ಐಕ್ಯುಎಸಿ ಸಂಚಾಲಕ ಡಾ.ರಾಜೇಶ್ ಎ.ಎಂ ಮಾತನಾಡಿ, ರಾಮನುಜನ್ ಅವರು ಕಷ್ಟದ ಹಾದಿಯಲ್ಲಿ ಬೆಳೆದು ಅಪ್ರತಿಮ ಸಾಧನೆ ಮಾಡಿದರು. ಬಾಲ್ಯದಲ್ಲಿ ಶಾಂತ ಸ್ವಭಾವದವರಾಗಿದ್ದ ಅವರು, ತಾಯಿಯ ನೆರಳಲ್ಲಿ ಬೆಳೆದು ಅಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಹೊಂದಿದ್ದರು. ನಂತರ ಪ್ರಾಥಮಿಕ ಶಿಕ್ಷಣದಲ್ಲಿ ಗಣಿತದ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಗಣಿತಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡತೊಡಗಿದರು ಎಂದರು.
ಇದನ್ನೂ ಓದಿ: ಅಡಿಕೆ ಧಾರಣೆ | ಮತ್ತೆ ಚೇತರಿಕೆ ಕಂಡ ರಾಶಿ ಅಡಿಕೆ ಬೆಲೆ
ರಾಮಾನುಜನ್ ಅವರು ಗಣಿತ ಕಡೆಗೆ ಗಮನ ನೀಡಿ ಬೇರೆ ವಿಷಯಗಳಲ್ಲಿ ಅನುತ್ತೀರ್ಣರಾಗಿ ತಮ್ಮ ಎಫ್.ಎ. ಪರೀಕ್ಷೆಯನ್ನು ಪೂರ್ಣಗೊಳಿಸಲು ಆಗಲಿಲ್ಲ. ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಬದುಕಿಗಾಗಿ ಮನೆ ಪಾಠ ಇತ್ಯಾದಿ ಮಾಡಿಕೊಂಡು ಜೀವನ ನಡೆಸಿದರು. ನಂತರ ಸಂಶೋಧನೆ ಕಡೆಗೆ ಗಮನ ಹರಿಸಿದ್ದು ಹೆಚ್ಚಿನ ಸಾಧನೆಗೆ ಕಾರಣವಾಯಿತು. ವಿದ್ಯಾರ್ಥಿಗಳು ಪಠ್ಯಕ್ರಮದಲ್ಲಿ ತಮಗೆ ಆಸಕ್ತಿಯಿರುವ ವಿಷಯದ ಕಡೆಗೆ ಹೆಚ್ಚಿನ ಆಧ್ಯತೆ ನೀಡಿದಲ್ಲಿ ಸಾಧಿಸಬಹುದು ಎಂದು ತಿಳಿಸಿದರು.
ಉಪನ್ಯಾಸಕರಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಶ್ರೀಶೈಲ ಜೆ.ಎಂ, ಡಾ.ಚೇತನ್ ಎಸ್, ಪ್ರೊ.ತನುಶ್ರೀ ಬಿ.ಆರ್, ಪ್ರೊ.ಪೂಜಾ ಕೆ.ಎನ್, ಪ್ರೊ.ರಮ್ಯ ಕೆ.ವಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಅನುದಾನ ನೀಡಿಲ್ಲ | ಎಚ್.ಡಿ.ಕೆ, ಪ್ರಹ್ಲಾದ್ ಜೋಷಿ ಕೇಳಲ್ಲ | ದಿನೇಶ್ ಗುಂಡೂರಾವ್
ರಾಮನುಜನ್ ಕುರಿತು ವಿದ್ಯಾರ್ಥಿಗಳಾದ ರೂಹಿಯಾ, ಸೈಯಿದಾ ಅಪ್ಸಾ, ನಂದಿತಾ, ಕವನ ಎಸ್ ಎಸ್, ಅದೀಬ್ ಮಾತನಾಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
