
CHITRADURGA NEWS | 22 DECEMBER 2025
ಚಿತ್ರದುರ್ಗ: ಕೇಂದ್ರ ಸರ್ಕಾರ ಘೋಷಿಸಿದ ಯೋಜನೆಗೂ ಸ್ಪಂದಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೂ ಕೇಂದ್ರ ಹಣ ನೀಡಿಲ್ಲ. ಹೆಚ್.ಡಿ ಕುಮಾರಸ್ವಾಮಿಗೆ ಸುಮ್ಮನೆ ಸಚಿವರಾಗಿ ಮಾಡಿ ಕೂರಿಸಿದ್ದಾರೆ ಅಷ್ಟೇ. ಪ್ರಹ್ಲಾದ್ ಜೋಶಿ ಎಲ್ಲರೂ ರಬ್ಬರ್ ಸ್ಟಾಂಪ್‍ಗಳು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇದನ್ನೂ ಓದಿ: ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಚಿಂತನೆ | ದಿನೇಶ್ ಗುಂಡೂರಾವ್
ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಹೆಚ್.ಡಿ ಕುಮಾರ ಸ್ವಾಮಿಯವರಿಗೆ ಅಮಿತ್ ಶಾ, ಮೋದಿ ಮುಂದೆ ಮಾತಾಡುವ ಧೈರ್ಯ ಇಲ್ಲ. ಅವರು ಇಲ್ಲ ಅಂದ ಬಳಿಕ ಮುಗಿತು, ಯಾಕೆಂದರೆ ಅವರೇ ಸರ್ವಾಧಿಕಾರಿ. ಮೋದಿ ಜೊತೆ ಇವರು ಜಗಳ, ಫೈಟ್ ಮಾಡೋಕೆ ಆಗಲ್ಲ. ಬಿಜೆಪಿ ಸಂಸದರು, ಕೇಂದ್ರ ಸಚಿವರು ಪ್ರಯೋಜನೆ ಇಲ್ಲದಂತವರು. ಕೇಂದ್ರಕ್ಕೆ ಕರ್ನಾಟಕದ ಬಗ್ಗೆ ತಾತ್ಸಾರ ಮನೋಭಾವ ಇದೆ ಎಂದರು.
ಸ್ಥಳೀಯ ಗೊಂದಲ ಸ್ಥಳೀಯವಾಗಿ ಇತ್ಯರ್ಥಕ್ಕೆ ಖರ್ಗೆಯವರ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅನವಶ್ಯಕ ಗೊಂದಲ ಪಕ್ಷ ಕಾರ್ಯಕರ್ತರಿಗೆ ಒಳ್ಳೆಯದಲ್ಲ. ಯಾರೇ ನಮ್ಮ ನಾಯಕರು ಆಗಿರಬಹುದು. ಖರ್ಗೆ ಸಾಹೇಬರು ಹೇಳಿದಂತೆ ನಡೆದುಕೊಳ್ಳಬೇಕು. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಒಂದು ವಿಷಯದ ಬಗ್ಗೆ ಮಾತ್ರ ಅನಗತ್ಯ ಚರ್ಚೆ ಆಗುತ್ತಿದೆ. ನಾವು ಯಾರೂ ಸಹ ಹೇಳಿಕೆ ಕೊಡುವ ಅಗತ್ಯ ಇಲ್ಲ. ಮುಂದೆ ಹೈಕಮಾಂಡ್ ತೀರ್ಮಾನ ಇದ್ದೇ ಇರುತ್ತದೆ.
ಮಹಾರಾಷ್ಟ್ರದಿಂದ ಬೆಳಗಾವಿ ಡಿಸಿಗೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ರಾಜಕಾರಣಕ್ಕಾಗಿ ಈ ರೀತಿ ಮಾಡುತ್ತಾರೆ. ಬೆಳಗಾವಿ ಜಿಲ್ಲೆ ಎಂದಿಗೂ ನಮ್ಮದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 22 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಮಂಗಳೂರಲ್ಲಿ ವೈದ್ಯಾಧಿಕಾರಿಗಳು ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೂ ರಾಜೀನಾಮೆ ಕೊಟ್ಟಿಲ್ಲ. ಒಬ್ಬರು ರಾಜೀನಾಮೆ ಬಗ್ಗೆ ಪತ್ರಿಕೆಯಲ್ಲಿ ನೋಡಿದೆ. ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಹೇಳಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
