
CHITRADURGA NEWS | 07 MARCH 2025
ಚಿತ್ರದುರ್ಗ: ಜಿಲ್ಲಾ ಪೊಲೀಸ್ ಮತ್ತು ಎಸ್‍ಬಿಐ ಬ್ಯಾಂಕ್ ಅವರ ಸಹಯೋಗದಲ್ಲಿ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” Fitness for all” & “Drugs Free Karnataka” ಎಂಬ ಘೋಷವಾಕ್ಯಗಳೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೇ ಮಾರ್ಚ್ 09ರಂದು ಬೆಳಿಗ್ಗೆ 7ಕ್ಕೆ ಚಿತ್ರದುರ್ಗ ನಗರದ ಡಿಎಆರ್ ಪರೇಡ್ ಮೈದಾನದಿಂದ ಸಾರ್ವಜನಿಕರಿಗೆ 5 & 10 ಕಿಲೋಮೀಟರ್‍ಗಳ ಮ್ಯಾರಥಾನ್ ಓಟ ಆಯೋಜಿಸಲಾಗಿದೆ.
Also Read: ಬಜೆಟ್‍ನಲ್ಲಿ ರೈತರಿಗೆ ಬಂಪರ್ | ಜಾನುವಾರು ಮೃತಪಟ್ಟರೆ 15 ಸಾವಿರ ಪರಿಹಾರ

ಈ ಮ್ಯಾರಥಾನ್ ಚಿತ್ರದುರ್ಗ ನಗರದ ಡಿ.ಎ.ಆರ್ ಪರೇಡ್ ಮೈದಾನದಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ 5 ಕಿ.ಮೀ ಮತ್ತು 10ಕಿ.ಮೀ ಗಳ ಅಂತರ ಕ್ರಮಿಸಿದ ನಂತರ ಡಿ.ಎ.ಆರ್ ಪರೇಡ್ ಮೈದಾನದಲ್ಲಿಯೇ ಮುಕ್ತಾಯವಾಗಲಿದ್ದು, ಈ ಮ್ಯಾರಥಾನ್‍ನಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು.
ಮ್ಯಾರಥಾನ್‍ನಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಸಹ ಪೊಲೀಸ್ ಇಲಾಖೆಯಿಂದ ಟೀ-ಶರ್ಟ್ ನೀಡಲಾಗುವುದು ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ.
ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮ್ಯಾರಥಾನ್‍ನಲ್ಲಿ ಪಾಲ್ಗೊಳ್ಳುವುದರ ಮೂಲಕ “Fitness for all” & “Drugs Free Karnataka” ಎಂಬ ಘೋಷಣೆಗಳೊಂದಿಗೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕಾಗಿ ಕೋರಿದೆ.
Also Read: ಕೃಷಿ ಹೊಂಡಕ್ಕೆ ಬಿದ್ದು ಡಾ.ಜಯರಾಂ ಸಾವು
ಮ್ಯಾರಥಾನ್‍ನಲ್ಲಿ ಪಾಲ್ಗೊಳ್ಳುವವರು ಕ್ಯೂಆರ್ ಕೋಡ್‍ನ್ನು ಸ್ಕ್ಯಾನ್ ಮಾಡುವ ಮೂಲಕ ಆನ್‍ಲೈನ್ ರಿಜಿಸ್ಟರ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
