ಕ್ರೈಂ ಸುದ್ದಿ
Murder: ಕೊಲೆಯಾದ ಮಂಜುನಾಥ್ ಜೈಲಿಗೂ ಹೋಗಿ ಬಂದಿದ್ದ | ಬೇರೊಂದಿದೆ ಪ್ರೇಮ್ ಕಹಾನಿ

CHITRADURGA NEWS | 28 NOVEMBER 2024
ಚಿತ್ರದುರ್ಗ: ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವತಿಯ ಪೋಷಕರಿಂದಲೇ ಭೀಕರವಾಗಿ (Murder) ಕೊಲೆಯಾದ ಕೋಣನೂರು ಗ್ರಾಮದ ಮಂಜುನಾಥ್ ಈ ಹಿಂದೆ ಜೈಲಿಗೂ ಹೋಗಿ ಬಂದ ಹಿನ್ನೆಲೆ ಇದೆ.
ಮಂಜುನಾಥ್ ಈ ಹಿಂದೆ 2019 ರಲ್ಲಿ ಶಿಲ್ಪಾ ಎಂಬ ಯುವತಿ ಜೊತೆ ಮದುವೆಯಾಗಿ, ಊರು ಬಿಟ್ಟು ಹೋಗಿ ದಾವಣಗೆರೆಯಲ್ಲಿ ನೆಲೆಸಿದ್ದರು.

ಇದನ್ನೂ ಓದಿ:
ಆದರೆ, ಇದ್ದಕ್ಕಿದ್ದಂತೆ ಮಂಜುನಾಥ್ ನಾಪತ್ತೆಯಾದಾಗ, ಪ್ರೀತಿಸಿದ ಯುವತಿ ಶಿಲ್ಪಾ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರನ್ನೂ ನೀಡಿದ್ದಾರೆ.
ಆನಂತರ ಯುವತಿ ಶಿಲ್ಪಾ ದಾವಣಗೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಳ್ಳುತ್ತಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಿತ್ತು ಹೆಣ | ಭೀಕರವಾಗಿ ಕೊಲೆಯಾದ ಯುವಕ
ಈ ಪ್ರಕರಣದಲ್ಲಿ ಮಂಜುನಾಥ್ ಆರೋಪಿಯಾಗಿ ಜೈಲು ಶಿಕ್ಷೆಯಾಗುತ್ತದೆ. ಒಂದಿಷ್ಟು ದಿನ ಜೈಲಿಗೆ ಹೋಗಿ ಆನಂತರ ಹೈಕೋರ್ಟ್‍ನಲ್ಲಿ ಜಾಮೀನು ಪಡೆದು ಹೊರಗೆ ಬರುತ್ತಾನೆ.
ಈ ಕಾರಣಕ್ಕೆ ರಕ್ಷಿತಾ ಪೋಷಕರು ಮಂಜುನಾಥನ ಜೊತೆಗೆ ಮಗಳು ಇರುವುದನ್ನು ಸಹಿಸಲಾರದೆ ಕೊಲೆ ಮಾಡುವ ಹಂತಕ್ಕೆ ದ್ವೇಷ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
ಮಂಜುನಾಥ್ ರಕ್ಷಿತಾ ಮಾತುಕತೆ ಆಡಿಯೋ ವೈರಲ್:
ಇನ್ನೂ ಕೊಲೆ ಪ್ರಕರಣದ ನಂತರ ಮಂಜುನಾಥ್ ಹಾಗೂ ರಕ್ಷಿತಾ ನಡುವೆ ಈ ಹಿಂದೆ ನಡೆದಿರುವ ಮಾತುಕತೆಯ ಕೆಲ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ರಕ್ಷಿತಾ ಮಂಜುನಾಥನ ಹಿಂದೆ ಬಿದ್ದು, ನೀನಿಲ್ಲದೆ ನಾನಿರುವುದಿಲ್ಲ. ನನ್ನನ್ನು ಕರೆದುಕೊಂಡು ಹೋಗು, ಮದುವೆ ಆಗು ಎಂಬುದಾಗಿ ರಕ್ಷಿತಾ ಮಂಜುನಾಥನಿಗೆ ಕೇಳಿಕೊಂಡಿರುವ ಆಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಈ ವೇಳೆ ಮಂಜುನಾಥ, ನನ್ನ ಹಿನ್ನೆಲೆ ಗೊತ್ತೇ ಇದೆ, ಊರಲ್ಲಿ ಜನ ಛೀ, ಥೂ ಎನ್ನುತ್ತಾರೆ, ಇದೆಲ್ಲಾ ಸರಿಯಾಗುವುದಿಲ್ಲ. ಮನೆಯಲ್ಲಿ ತೋರಿಸಿದವರನ್ನು ಮದುವೆಯಾಗಿ ಚೆನ್ನಾಗಿರು ಎಂದು ಬುದ್ದಿ ಹೇಳುತ್ತಾನೆ. ಆದರೆ, ಯುವತಿ ಯಾವುದನ್ನೂ ಕೇಳಿಸಿಕೊಳ್ಳದೆ ಪಟ್ಟು ಹಿಡಿಯುವುದು ಆಡಿಯೋದಲ್ಲಿದೆ.
ಎಫ್‍ಐಆರ್‍ನಲ್ಲಿ 19 ಜನರ ಹೆಸರು ಉಲ್ಲೇಖ:
ಇನ್ನೂ ಮಂಜುನಾಥ್ ಕೊಲೆ ಪ್ರಕರಣ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣದಲ್ಲಿ 19 ಜನರ ಹೆಸರುಗಳು ಉಲ್ಲೇಖವಾಗಿವೆ.
ಯುವತಿ ರಕ್ಷಿತಾ ತಂದೆ ಜಗದೀಶ್ ಸೇರಿದಂತೆ ಸಂಬಂಧಿಕರ ಹೆಸರುಗಳು ಎಫ್‍ಐಆರ್‍ನಲ್ಲಿ ಉಲ್ಲೇಖವಾಗಿವೆ.
ಇದನ್ನೂ ಓದಿ: ದಿನ ಭವಿಷ್ಯ | 28 ನವೆಂಬರ್ 2024 | ಈ ದಿನ ಹೇಗಿದೆ ನಿಮ್ಮ ರಾಶಿ ಫಲ…
ಮಂಜುನಾಥ್ ಮನೆಗೆ ನುಗ್ಗಿರುವ ಆರೋಪಿಗಳು ಭೀಕರವಾಗಿ ಹಲ್ಲೆ ನಡೆಸಿ ಕಲ್ಲು ಎತ್ತಿ ಹಾಕಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
