
CHITRADURGA NEWS | 19 AUGUST 2025
ಚಿತ್ರದುರ್ಗ: ಪ್ರೀತಿ ಕುರುಡು, ಅದಕ್ಕೆ ಕಣ್ಣಿಲ್ಲ ಎನ್ನುವುದು ಶತಮಾನಗಳಿಂದ ನಾವು ಕೇಳುತ್ತಿರುವ ಮಾತು. ಆದರೆ, ಪ್ರೀತಿಗೆ ಒಳ್ಳೆಯ ಮನಸ್ಸೂ ಇದೆ. ಅನ್ನೋದು ನಮ್ಮೆದುರು ನಡೆಯುವ ಒಂದೊಂದು ಪ್ರೇಮಕಥೆಗಳಲ್ಲೂ ಕಾಣಿಸುತ್ತದೆ.
ಇದಕ್ಕೆ ಒಂದು ಹೊಸ ನಿದರ್ಶನವಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ʼಪ್ರೇಮಕಥೆʼ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಶುರುವಾದ ಸ್ನೇಹ ಮದುವೆ ಮೂಲಕ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ: ಅಂತರ ಬೆಳೆ ಪದ್ಧತಿಯು ಅಡಿಕೆ, ತೆಂಗು ಮತ್ತು ಬಾಳೆ ತೋಟಗಳಲ್ಲಿ ಸುಸ್ಥಿರ ಇಳುವರಿ
ಚಿತ್ರದುರ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿದ್ದ ಯುವತಿ ಹಾಗೂ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿದ್ದ ವೃತ್ತಿಯಲ್ಲಿ ಚಾಲಕನಾಗಿರುವ ಯುವಕನ ನಡುವಿನ ಪ್ರೇಮಕಥೆ ಇದು.
ಫ್ರೆಂಡ್ಸ್ ಆಪ್ ಕ್ಲೋಸ್ ಆದ ನಂತರ ಇಬ್ಬರೂ ಇನ್ಸ್ಟಾಗ್ರಾಂ ಖಾತೆ ತೆರದುಕೊಂಡಿದ್ದು, ಅಲ್ಲಿ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಯುವಕನೇ ಯುವತಿಗೆ ಪ್ರೇಮ ನಿವೇಧನೆ ಮಾಡಿಕೊಂಡಿದ್ದಾನೆ. ಆದರೆ, ಇದಕ್ಕೆ ಯುವತಿ ನಿರಾಕರಿಸಿದ್ದಾರೆ. ಕಾರಣ ನಾನು ಅಂಗವಿಕಲೆ. ನೀನು ನನ್ನ ಮುಖವನ್ನಷ್ಟೇ ನೋಡಿದ್ದೀಯಾ, ಆದರೆ, ನನಗೆ ಕಾಲುಗಳೇ ಇಲ್ಲ. ಹಾಗಾಗಿ ಪ್ರೀತಿ ಬೇಡ ಎಂದು ನಿರಾಕರಿಸಿದ್ದಾರೆ.
ಇದನ್ನೂ ಓದಿ: POP ಗಣೇಶ ನಿಷೇಧ
ಯುವತಿಯ ಪೂರ್ಣ ಚಿತ್ರವನ್ನು ಯೂಟ್ಯೂಬ್ ಮೂಲಕ ನೋಡುವಂತೆ ಆಕೆ, ಯುವಕನಿಗೆ ತಿಳಿಸಿದ್ದಾರೆ. ಆಕೆ ವಿಕಲಚೇತನಳು ಎನ್ನುವುದನ್ನು ತಿಳಿದ ನಂತರವೂ ಆತ, ಪ್ರೀತಿ ಮಾಡುವುದಾಗಿ ತಿಳಿಸಿದ್ದಾನೆ.
ಈ ಹಂತದಲ್ಲಿ ಯುವತಿ, ನಮ್ಮ ಮನೆಗೆ ಬಂದು ಮಾತನಾಡು ಎಂದು ಹೇಳಿದ್ದಾರೆ. ಇಬ್ಬರೂ ಅಂತರ್ಜಾತಿಯವರಾಗಿದ್ದು, ಜೊತೆಗೆ ಯುವತಿಗೆ ಕಾಲುಗಳ ಸ್ವಾಧೀನತೆ ಇಲ್ಲ. ಈ ಎಲ್ಲಾ ಕಾರಣಕ್ಕೆ ಎರಡೂ ಮನೆಗಳಲ್ಲಿ ಮದುವೆಗೆ ನಿರಾಕರಿಸಿದ್ದಾರೆ.
ಇದನ್ನೂ ಓದಿ: ಕಲೆಗಳನ್ನು ಕಡಿಮೆ ಮಾಡಲು ಸೌತೆಕಾಯಿ ರಸವನ್ನು ಹೀಗೆ ಹಚ್ಚಿ
ಸುಮಾರು ಒಂದು ವರ್ಷದ ಕಾಲ ಮಾತು, ಕತೆ ನಡೆದು ಕೊನೆಗೆ ಪ್ರೀತಿ ಗೆದ್ದಿದೆ. ಎರಡೂ ಕುಟುಂಬಗಳು ಪ್ರೇಮಿಗಳನ್ನು ಒಂದು ಮಾಡಲು ತೀರ್ಮಾನಿಸಿ ಮೂರು ದಿನಗಳ ಹಿಂದಷ್ಟೇ ಮದುವೆ ಮಾಡಿದ್ದಾರೆ.
ಮೈನಾ ಸಿನಿಮಾದಲ್ಲಿ ಇದೇ ರೀತಿಯ ಪ್ರೇಮಕಥೆ ಇದ್ದು, ಅದನ್ನೇ ಹೋಲುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಈ ಕಥೆಗೆ ನಾಯಕಿ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕಿನ ಟಿ.ಎಮ್ಮಿಗನೂರು ಗ್ರಾಮದ ಶಿಲ್ಪಾ. ಕಥೆಯ ನಾಯಕ ಗೌರಿಬಿದನೂರು ತಾಲೂಕು ಕದಿರೇನಹಳ್ಳಿಯ ಶಶಿಕುಮಾರ್.
ಇದನ್ನೂ ಓದಿ: ನಿಂಬೆ ಪಾನಕ ಮತ್ತು ಕಿತ್ತಳೆ ರಸ: ತೂಕ ಇಳಿಸಿಕೊಳ್ಳಲು ಯಾವ ಪಾನೀಯ ಉತ್ತಮ?
ಫ್ರೆಂಡ್ಸ್ ಆಪ್ ಮೂಲಕ ಪರಿಚಿತರಾದ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು ಟಿ.ಎಮ್ಮಿಗನೂರು ಗ್ರಾಮದ ಶಿಲ್ಪಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆ ಬಳಿಕ ಶಶಕುಮಾರ್ ತನ್ನ ಪತ್ನಿಯನ್ನು ಕೊನೆಯ ಉಸಿರಿನ ತನಕ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
