
CHITRADURGA NEWS | 19 AUGUST 2025
ಚಿತ್ರದುರ್ಗ: 66/11 ಕೆ.ವಿ ಚಿತ್ರದುರ್ಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭೂಗತ ಕೇಬಲ್‍ಗಳ ಮರುಜೋಡಣೆ ಕಾಮಗಾರಿ ಇರುವುದರಿಂದ 66/11 ಕೆವಿ ಚಿತ್ರದುರ್ಗ ವಿ.ವಿ ಕೇಂದ್ರಕ್ಕೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಈ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ಇದೇ ಆಗಸ್ಟ್ 20 ಮತ್ತು 21ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ಚಿತ್ರದುರ್ಗ ನಗರ, ಕೆಳಕೋಟೆ, ಬ್ಯಾಂಕ್ ಕಾಲೋನಿ, ಗೋನೂರು, ಬೆಳಘಟ್ಟ, ಗುಟ್ಟದರಂಗವ್ವನಹಳ್ಳಿ, ವಿದ್ಯಾನಗರ, ಸೀಬಾರ, ಸಿ.ಜಿ.ಹಳ್ಳಿ, ಜೆ.ಸಿ.ಆರ್ ಬಡಾವಣಿ, ಚಂದ್ರವಳ್ಳಿ, ಪಿ.ಕೆ.ಹಳ್ಳಿ, ಮಿಲ್ಲ್ ಏರಿಯಾ, ಕೆ.ಡ್ಲೂ.ಎಸ್.ಎಸ್.ಬಿ, ಯೂನಿವರ್ಸಿಟಿ, ತ.ರಾ.ಸು ರಂಗಮಂದಿರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಇನ್ಸ್ಟಾದಲ್ಲಿ ಶುರುವಾಯ್ತು ಪ್ರೀತಿ |ಯುವತಿಯ ಮನೆಗೆ ಬಂದ ಯುವಕ | ಮೈನಾ ಸಿನಿಮಾ ಹೋಲುವ ದುರ್ಗದ ಪ್ರೇಮಕಥೆ
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
