
CHITRADURGA NEWS | 28 NOVEMBER 2025
ಚಿತ್ರದುರ್ಗ: ಪೆನ್ನು ಹಿಡಿದು ಗೀಚಿದರೆ ಸಾಹಿತ್ಯ ಎನಿಸಿಕೊಳ್ಳುವುದಿಲ್ಲ. ಜೀವನದಲ್ಲಿ ಆತಂ, ಸಂತೋಷ ಎಲ್ಲವನ್ನು ಒಳಗೊಂಡು ಸಾಹಿತ್ಯ ರೂಪುಗೊಳ್ಳುತ್ತದೆ. ಜಗತ್ತನ್ನು ಆಳುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಬೇಡರೆಡ್ಡಿಹಳ್ಳಿ ಮಾದರಿ ಗ್ರಾಪಂ ಸಂಕಲ್ಪ | ಡಾ.ಎಸ್.ಆಕಾಶ್

ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಐಕ್ಯುಎಸಿ, ಕನ್ನಡ ವಿಭಾಗ, ಅಲ್ಲಮಪ್ರಭು ಸಂಶೋಧನಾ ಕೇಂದ್ರ, ಚಿತ್ರದುರ್ಗ ಹಾಗೂ ಬಿ.ಎಂ. ಶ್ರೀ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ – ಕನ್ನಡ ನಾಡು ನುಡಿ ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಕುವೆಂಪುರವರು ರಾಷ್ಟ್ರ ಕವಿಗಳಾಗಿದ್ದಾರೆ. ಅವರ ಬರವಣಿಗೆ ನೋಡಿದರೆ ದುಂಡಾಗಿಲ್ಲ. ಆದರೆ ಅದರಲ್ಲಿ ಆಂತರಿಕ ಸಾಹಿತ್ಯವಿದೆ. ಕಾವ್ಯಗಳನ್ನು ಓದುವಾಗ ಅಂತರ್ಮುಖಿಗಳಾದರೆ ಅದರಿಂದ ಸುಖ ಸಂತೋಷ ಸಿಗುತ್ತದೆ. ಎಲ್ಲರೂ ಸಾಹಿತ್ಯದ ಅಭಿರುಚಿಯನ್ನು ಹೊಂದಬೇಕು.
ನಮ್ಮ ಬದುಕಿನ ನಡವಳಿಕೆಗಳು ನಮ್ಮ ಸಂತೃಪ್ತಿಗಾಗಿ ಇರುತ್ತವೆ. ವಿದ್ಯಾರ್ಥಿಗಳು ಹಳೆಗನ್ನಡದ ಕವನಗಳನ್ನು ಓದಿದರೆ ಅವು ಬದುಕಿನ ಮೇಲೆ ಪ್ರಭಾವ ಬೀರುತ್ತವೆ. ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳು ಕೊಡುಗೆ ನೀಡಿದ್ದಾರೆ. ಸಂಕಲ್ಪದಲ್ಲೂ ಹಿಂಸೆ ಮಾಡಬಾರದು ಎನ್ನುವ ವಿಚಾರಗಳನ್ನು ತಮ್ಮ ಗ್ರಂಥಗಳ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಪದವೀಧರ ಮತದಾರರ ಸಂಖ್ಯೆ ಹೆಚ್ಚಿಸಲು ವಿಶೇಷ ಕ್ರಮ | ಸುಮನ್ ಕುಮಾರ್ ದಾಸ್
ಶ್ರೀಮಠದ ಎಲ್ಲ ಪತ್ರಿಕೆ ಗ್ರಂಥಗಳನ್ನು ವ್ಯಾಕರಣ ದೋಷವಿಲ್ಲದೆ ರಚಿಸಿರುವ ಡಾ. ಬೈರಮಂಗಲ ರಾಮೇಗೌಡ ಮತ್ತು ಪ್ರೊ. ಚಂದ್ರಶೇಖರ್, ಡಾ. ಶಾಂತರಾಜು, ಡಾ.ಶಿವಕುಮಾರ್ ಇವರ ನುಡಿಗಳನ್ನು ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಚಿತ್ರದುರ್ಗ ಕ.ಸಾ.ಪ. ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಕನ್ನಡ ಬಾವುಟವು ಹೊಂದಿರುವ ಹಳದಿ ಮತ್ತು ಕೆಂಪುಬಣ್ಣವನ್ನು ನೋಡಿದರೆ ರೋಮಾಂಚನವನ್ನು ಉಂಟು ಮಾಡುತ್ತದೆ. ಕನ್ನಡ ಭಾಷೆ ಅತ್ಯಂತ ಶ್ರೇಷ್ಠ ಹಿನ್ನೆಲೆಯನ್ನು ಹೊಂದಿದೆ. ಕನ್ನಡದ ಅಕ್ಷರಗಳ ಬಳಕೆಯಲ್ಲಿ ವ್ಯತ್ಯಾಸವಾದರೆ ಬಾಹ್ಯ ಅರ್ಥವನ್ನು ಕೊಡುತ್ತದೆ.
ಸರಿಯಾಗಿ ಪದ ಪ್ರಯೋಗ ಮಾಡಿದರೆ ಅದು ಉತ್ತಮ ಮಾಹಿತಿ ಒದಗಿಸುತ್ತದೆ. ಬಳಕೆ ಜಾಸ್ತಿಯಾದರೆ ಉಪಯೋಗ ಹೆಚ್ಚಾಗುತ್ತದೆ. ಬಳಕೆ ಕಡಿಮೆಯಾದರೆ ಉಪಯೋಗವು ಕಡಿಮೆಯಾಗುತ್ತದೆ. ಇಂಗ್ಲಿಷ್‌ನ ಅವಲಂಬನೆ ಕಡಿಮೆ ಮಾಡಲು ಫೋನ್‌ನಲ್ಲಿ ಕನ್ನಡದ ಬಳಕೆ ಹೆಚ್ಚು ಮಾಡಿದಾಗ ನಮ್ಮ ಭಾಷೆ ಉನ್ನತ ಸ್ಥಾನ ಗಳಿಸುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ನೈಜ ಪ್ರತಿಭೆ ಹೊರ ತೆಗೆಯಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ | ಎಚ್.ಗಿರಿಜಾ
ಮಾತನಾಡುವಾಗ ಬರೆಯುವಾಗ ಹಾಗೂ ವಿಚಾರ ವಿನಿಮಯದ ಸಂದರ್ಭಗಳಲ್ಲಿ ಕನ್ನಡವನ್ನು ಬಳಸಿ. ವಿದೇಶಿಯರೂ ಸಹ ಕನ್ನಡ ಭಾಷೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಾರೆ. ಕನ್ನಡ ರಾಜ್ಯೋತ್ಸವ ಕೇವಲ ಒಂದು ತಿಂಗಳು ಮಾತ್ರವಿರದೆ ವರ್ಷಪೂರ್ತಿ ಇರಬೇಕು. ಕನ್ನಡ ದಿನೇದಿನೇ ತನ್ನ ವಿಶಾಲತೆಯನ್ನು ಕಳೆದುಕೊಳ್ಳುತ್ತಿದೆ. ಅದನ್ನು ತಾವು ಬೆಳೆಸಬೇಕಾಗಿರುವುದರಿಂದ ತಾವೆಲ್ಲ ದಿನನಿತ್ಯದ ಬದುಕಿನಲ್ಲಿ ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕೆಂದರು.
ಕನ್ನಡ ನುಡಿ ವಿಷಯ ಕುರಿತು ಮಾತನಾಡಿದ ಚಂದ್ರಶೇಖರ್ ನಾದೂರು ಅವರು, ಹರಿದು ಹಂಚಿಹೋಗಿದ್ದ ಕನ್ನಡ ನಾಡು ಅಖಂಡ ಕರ್ನಾಟಕವಾಗಿದ್ದು 1956 ನವಂಬರ್ ಒಂದರಲ್ಲಿ. ಕನ್ನಡ ಹುಟ್ಟಿನಿಂದಲೂ ಪ್ರತಿರೋಧವನ್ನು ಎದುರಿಸುತ್ತಲೇ ಕನ್ನಡ ತನ್ನ ಅಸ್ಮಿತೆ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.
ಪ್ರಸ್ತುತ ಸಂದರ್ಭದಲ್ಲಿ ಇಂಗ್ಲಿಷ್ ಜಾಗತೀಕರಣ ಭಾಷೆಯಾಗಿ ಅನ್ನದ ಭಾಷೆಯಾಗಿ ನಮ್ಮ ಪ್ರಾದೇಶಿಕ ಭಾಷೆಗಳನ್ನು ಕಳೆದುಕೊಳ್ಳುತ್ತಿವೆ. ಮುಂದೊಂದು ದಿನ ಕನ್ನಡ ಭಾಷೆಯ ಹುಡುಕಾಟವನ್ನು ಈ ನಾಡಿನಲ್ಲಿ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಪರಭಾಷಿಕರ ಹಾವಳಿಯಿಂದ ನಮ್ಮ ಕನ್ನಡ ಭಾಷೆಯನ್ನು ಹುಡುಕಾಡಬೇಕು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ನವೆಂಬರ್ 28 | ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಕನ್ನಡಿಗರಿಗೆ ನಮ್ಮ ನಾಡಿನಲ್ಲಿ ಉದ್ಯೋಗ ಕೊಡುವಲ್ಲಿ ಕಠಿಣವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕರ್ನಾಟಕ ಸರ್ಕಾರ ಪ್ರತಿಯೊಂದು ಉದ್ಯೋಗಗಳು ಕನ್ನಡಿಗರಿಗೆ ಮೀಸಲು ಇಡಬೇಕು. ಎಲ್ಲವೂ ಕನ್ನಡ ಮಾಯವಾಗಿರಬೇಕು.
ಕನ್ನಡ ಕೇವಲ ಭಾವನಾತ್ಮಕ ಭಾಷೆಯಾಗಿರದೆ, ಅನ್ನದ ಭಾಷೆ ಆಗಬೇಕು. ಕರ್ನಾಟಕದಲ್ಲಿ ಕನ್ನಡಿಗ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಉದ್ಯೋಗದಲ್ಲಿ ವ್ಯಾಪಾರದಲ್ಲಿ ಮುಂತಾದ ಹಲವು ಕ್ಷೇತ್ರಗಳಲ್ಲಿ ತುಂಬಾ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಎರಡನೆಯ ಗೋಷ್ಠಿಯಲ್ಲಿ ಡಾ.ಶಾಂತರಾಜ ಅವರು ಕನ್ನಡ ಭಾಷೆ ಕುರಿತು ಮಾತನಾಡಿದರು. ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಡಾ.ರಮೇಶ್ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಎಲ್.ಈಶ್ವರಪ್ಪ, ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎ.ಜೆ. ಶಿವಕುಮಾರ್, ಡಾ.ಸಿ.ಟಿ. ಜಯಣ್ಣ, ಎಂ.ಎಸ್. ಪರಮೇಶ್ವರ್ ವೇದಿಕೆಯಲ್ಲಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
