
CHITRADURGA NEWS | 06 December 2025
ಚಿತ್ರದುರ್ಗ: ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಲು ನಾವು ಸಂವಿಧಾನದ ತಿರುಳು ಅರಿಯಬೇಕು ಎಂದು ಚಿಂತಕ ವೇದಾಂತ್ ಏಳಂಗಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಮಾದಿಗ ಮೀಸಲಾತಿ ಹೋರಾಟ ಸಮಿತಿ, ಸ್ಲಂ ಜನಾಂದೋಲನ ಸಂಘಟನೆ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಬಾಬಾ ಸಾಹೇಬರು ನಿಧನದ ಬಳಿಕವೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರು ಕೊಟ್ಟ ಸಂವಿಧಾನ ನಮ್ಮ ಬದುಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಆದರೆ, ಅದನ್ನು ನಾವು ಎಷ್ಟರಮಟ್ಟಿಗೆ ಉಪಯೋಗ ಮಾಡಿಕೊಂಡಿದ್ದೇವೆ ಎಂಬ ಅವಲೋಕನ ಅಗತ್ಯ ಎಂದರು.
ನಾವೆಲ್ಲರೂ ಸಂವಿಧಾನದಡಿಯೇ ಬದುಕುತ್ತಿದ್ದೇವೆ. ದೂರದೃಷ್ಟಿ ಚಿಂತನೆಯ ಕೂಸು ಸಂವಿಧಾನ. ಅದನ್ನು ಅರಿತರೆ ಬದುಕು ಅರ್ಥಪೂರ್ಣ ಆಗಲಿದೆ. ಆದ್ದರಿಂದ ಸಂವಿಧಾನ ಓದು ಇಂದಿನ ಅಗತ್ಯ. ನೊಂದ ಜನರಿಗೆ ಹಕ್ಕುಗಳನ್ನು ಕೊಡಿಸಲು ಅಂಬೇಡ್ಕರ್ ಹೋರಾಟದ ಜೊತೆಗೆ ಸಂವಿಧಾನ ಕೊಡುಗೆ ನೀಡಿದ್ದಾರೆ. ಸಂವಿಧಾನ ಅರಿತುಕೊಳ್ಳಲು ಬಹುದೊಡ್ಡ ಜ್ಞಾನ ಬೇಕೆಂಬ ಬೀಜವನ್ನು ಬಿತ್ತಲಾಗಿದೆ. ಆದರೆ, ಸಂವಿಧಾನ ಅತ್ಯಂತ ಸರಳವಾಗಿದೆ. ನಿತ್ಯ ಜೀವನ, ವ್ಯವಹರಿಸುವ ಚಟುವಟಿಕೆ, ಬದುಕು ಇವೆಲ್ಲವೂ ಸಂವಿಧಾನವೇ ಆಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಈಜುಲು ಹೋಗಿದ ಯುವಕ ಸಾವು | ಚಳ್ಳಕೆರೆ ತಾಲೂಕಿನಲ್ಲಿ ಘಟನೆ
ದೂರದೃಷ್ಟಿಯಿಂದ ರಚಿತವಾಗಿರುವ ಸಂವಿಧಾನ ನಾಶಗೊಳಿಸಲು ಅನೇಕ ದುಷ್ಟಶಕ್ತಿಗಳು ಪ್ರಯತ್ನಿಸುತ್ತಿವೆ. ಆದರೆ, ಅಂತಹ ಕೆಲಸ ಸಾಧ್ಯವೇ ಇಲ್ಲ. ಕಾರಣ ಸಂವಿಧಾನ ಜನರ ಒಡನಾಡಿಯಾಗಿ ಬೆರೆತುಕೊಂಡಿದೆ. ನಮ್ಮ ವಿರೊಧಿಗಳು ಯಾರೆಂಬುದನ್ನು ಅಂಬೇಡ್ಕರ್ ಕೃತಿಗಳು ತಿಳಿಸಿಕೊಡುತ್ತವೆ ಎಂದರು.
ಜಾತಿ-ಧರ್ಮ-ಪ್ರಾದೇಶಿಕ ಹೆಸರಲ್ಲಿ ಅಂಬೇಡ್ಕರ್ ಜನರನ್ನು ಇಬ್ಭಾಗ ಮಾಡಲಿಲ್ಲ. ಬದಲಾಗಿ ಎಲ್ಲ ವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು, ಅವರಿಗೆ ಹಕ್ಕುಗಳನ್ನು ಕೊಡಿಸಲು ಶ್ರಮಿಸಿದರು. ಜಾತ್ಯತೀತ ಮನೋಭಾವ, ಸಮ ಸಮಾಜದ ಕನಸುಗಳೊಂದಿಗೆ ಸಂವಿಧಾನ ರಚಿಸಿದರು. ನೋಟು ಮುದ್ರಣ ಸರ್ಕಾರದ ಕೈಯಲ್ಲಿರಬಾರದು. ಅದಕ್ಕಾಗಿ ಸ್ವತಂತ್ರ ಸಂಸ್ಥೆ ಇರಬೇಕೆಂದು ಹಾಗೂ ನೋಟು ಮುದ್ರಣಕ್ಕೆ ಇಂತಿಷ್ಟು ಚಿನ್ನ ಆಧಾರವಿಡಬೇಕೆಂದು ಪ್ರಬಂಧ ಮಂಡಿಸಿದ ಫಲ ಆರ್‌ಬಿಐ ಇಂದು ಖಾಸಗೀಕರಣ ಮತ್ತು ಸರ್ಕಾರದ ಮುಷ್ಠಿಯಿಂದ ಹೊರಗಡೆ ಇದೆ ಎಂದು ತಿಳಿಸಿದರು.
ಜಿಲ್ಲಾ ಕುರುಬ ಸಂಘದ ಗೌರವಾಧ್ಯಕ್ಷ ಹೆಚ್.ಮಂಜಪ್ಪ ಮಾತನಾಡಿ, ಭಾರತದ ಪ್ರತಿ ಮನೆಯಲ್ಲೂ ಅಂಬೇಡ್ಕರ್ ಭಾವಚಿತ್ರ ಕಾಣುವ ಕಾಲ ಬರಬೇಕಿದೆ. ಮುಖ್ಯವಾಗಿ ನಮ್ಮೆಲ್ಲರ ಮನದಲ್ಲಿ ಅವರು ನೆಲೆಕಾಣಬೇಕು. ಅವರ ಆಶಯಗಳನ್ನು ಈಡೇರಿಸಲು ನಾವೆಲ್ಲರೂ ಮತ ಮಾರಾಟ ನಿಲ್ಲಿಸಬೇಕು ಎಂದರು.
ದಸಂಸ ಮುಖಂಡ ಡಿ.ದುರುಗೇಶ್ ಮಾತನಾಡಿ, ಬಾಬಾ ಸಾಹೇಬರು ನಮ್ಮ ಮೇಲೆ ಹೆಚ್ಚು ಜವಾಬ್ದಾರಿ ಬಿಟ್ಟು ಹೋಗಿದ್ದಾರೆ. ಸಂವಿಧಾನ ಅನುಷ್ಠಾನಕ್ಕೆ ಆಡಳಿತ ಪಕ್ಷಗಳು ಪ್ರಯತ್ನಿಸಿಲ್ಲ. ಆದ್ದರಿಂದ ನಾವು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: SJM ಕಾಲೇಜಿಗೆ BA ಯಲ್ಲಿ 3ನೇ ರ‍್ಯಾಂಕ್ | BCOM ನಲ್ಲಿ 100% ಫಲಿತಾಂಶ
ಸಾಮಾಜಿಕ ಸಂಘರ್ಷ ಸಮಿತಿ ಸಂಚಾಲಕ ಟಿ.ರಾಮಣ್ಣ ಮಾತನಾಡಿ, ಅಂಬೇಡ್ಕರ್ ನಿಧನದ ಬಳಿಕ 20 ವರ್ಷ ಅವರನ್ನು ಸ್ಮರಿಸುವ ಕೆಲಸವೇ ಆಗಲಿಲ್ಲ. ದಸಂಸ ನಾಡಿನ ಜನರಲ್ಲಿ ಜಾಗೃತಿ ಮೂಡಿಸಿದೆ. ಆದರೆ, ಈಗ ಅಂಬೇಡ್ಕರ್ ಅವರನ್ನು ದೇವರ ರೀತಿ ಪೂಜೆ ಮಾಡಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ನಡೆ. ಇದೇ ಪರಿಸ್ಥಿತಿ ಮುಂದುವರಿದರೆ ಅವರ ಆಶಯಗಳ ಜೊತೆಗೆ ಅವರು ನಮ್ಮಿಂದ ಕಣ್ಮರೆ ಆಗುವ ಆತಂಕ ಇದೆ ಎಂದು ಎಚ್ಚರಿಸಿದರು.
ಮುಖಂಡ ಹನುಮಂತಪ್ಪ ದುರ್ಗ, ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಎಂ.ಮಲ್ಲಣ್ಣ, ಹಿರಿಯ ಮುಖಂಡ ಬಿ.ರಾಜಪ್ಪ ಜೆಜೆ ಹಟ್ಟಿ, ರುದ್ರಮುನಿ ಮಾತನಾಡಿದರು. ನೀರಾವರಿ ಹೋರಾಟ ಸಮಿತಿ ಸಂಚಾಲಕ ಈ.ಮಹೇಶಬಾಬು, ಸ್ಲಂ ಜನ ಸಂಘಟನೆ ಸಂಚಾಲಕ ಟಿ.ಮಂಜುನಾಥ್, ಮುಖಂಡರಾದ ಭಾಗ್ಯಮ್ಮ, ಎಂ.ಮಹೇಶ್, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ ಇತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
