
CHITRADURGA NEWS | 11 APRIL 2026
ಚಿತ್ರದುರ್ಗ: ಇಂದಿನ ದಿನಮಾನದಲ್ಲಿ ಮಾತೃ ಭಾಷೆಯ ಜೊತೆಗೆ ಆಂಗ್ಲ ಭಾಷೆ ಕಲಿಕೆಯೂ ಸಹ ಅಗತ್ಯವಾಗಿದೆ ಎಂದು ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 11 | ಹತ್ತಿ ರೇಟ್…
ನಗರದಲ್ಲಿ ಈ ವರ್ಷ ಬೇಸಿಗೆ ರಜೆಯಲ್ಲಿ ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ವತಿಯಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಬಿ.ಡಿ. ರಸ್ತೆಯ ನೂತನ ಬ್ರ್ಯಾಂಚ್‍ನಲ್ಲಿ ಹಮ್ಮಿಕೊಂಡಿದ್ದ 2026ರ ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,
ಮಾತೃ ಭಾಷೆ ಕಲಿತರೆ ನಮ್ಮ ರಾಜ್ಯದಲ್ಲಿ ಮಾತ್ರ ಸೀಮಿತವಾಗುತ್ತದೆ. ಆದರೆ ಅಂಗ್ಲ ಭಾಷೆ ಕಲಿತರೆ ದೇಶದ ಯಾವ ಭಾಗದಲ್ಲಿಯಾದರೂ ಸಹ ನಾವುಗಳು ಜೀವನ ಮಾಡಬಹುದಾಗಿದೆ.
ಆಂಗ್ಲ ಭಾಷೆ ಬ್ರಿಟೀಷರು ಬಿಟ್ಟು ಹೋದ ಭಾಷೆ ಎಂದು ಹಲವಾರು ಜನತೆ ಆಡಿಕೊಳ್ಳುತ್ತಾರೆ ಆದರೆ ಅಂದಿನ ದಿನಮಾನದಲ್ಲಿ ಅದು ಅವರ ಮಾತೃ ಭಾಷೆಯಾಗಿತ್ತು. ಹಾಗಾಗಿ ಅವರು ಅದನ್ನು ಬಳಸುತ್ತಿದ್ದರು.
ಇದನ್ನೂ ಓದಿ: ಮೇ.1 ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ಧಿಷ್ಠಾವಧಿ ಹೋರಾಟ
ಇದರ ಹಿಂದೆ ಬಿದ್ದ ನಮ್ಮವರು ಸಹ ಈ ಭಾಷೆಯನ್ನೇ ಹೆಚ್ಚಾಗಿ ಬಳಕೆ ಮಾಡುವುದನ್ನು ಕಲಿತರು. ಇದರಿಂದ ಈ ಭಾಷೆ ವಿಶ್ವದ ಭಾಷೆಯಾಗಿ ಬೆಳೆದಿದೆ. ನಮ್ಮ ಮಾತೃ ಭಾಷೆಯ ಜೊತೆಗೆ ಆಂಗ್ಲ ಭಾಷೆ ಕಲಿಯುವುದರ ಮೂಲಕ ಉತ್ತಮವಾದ ಬದುಕನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ನಮ್ಮ ಸಂಸ್ಥೆಯ ವತಿಯಿಂದ ಹಲವಾರು ವರ್ಷದಿಂದ ಮಕ್ಕಳಿಗೆ ಬೇಸಿಗೆ ಸಮಯದಲ್ಲಿ ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಇದರ ಪ್ರಯೋಜವನ್ನು ಹಲವಾರು ಮಕ್ಕಳು ಪಡೆಯುತ್ತಿದ್ದಾರೆ.
ಆಂಗ್ಲ ಭಾಷೆ ಸರಿಯಾದ ರೀತಿಯಲ್ಲಿ ಮಾತನಾಡಲು ಕಲಿಯವುದರ ಮೂಲಕ ಅವರ ಮುಂದಿನ ಭವಿಷ್ಯ ಉತ್ತಮವಾಗಿ ಇರಲು ಸಾಧ್ಯವಿದೆ. ಈ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿತ ಹಲವಾರು ಮಕ್ಕಳು ಇಂದು ಉತ್ತಮವಾದ ಸ್ಥಾನದಲ್ಲಿ ಇದ್ದಾರೆ ಎಂದರು.
ಇದನ್ನೂ ಓದಿ: PU ಫಲಿತಾಂಶ | SRS ಕಾಲೇಜಿನ ಸುದರ್ಶನ್ ರಾಜ್ಯಕ್ಕೆ 6ನೇ ಸ್ಥಾನ
ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಸಿ.ಚೈತ್ರ, ಪೋಷಕರಾದ ಜ್ಯೋತಿ ಶಂಕರಮೂರ್ತಿ, ಪಲ್ಲವಿ ರಾಜ್, ತಿಮ್ಮಯ್ಯ ಪಿ.ಜಿ, ಹೆಚ್.ಅಶೋಕ್, ಕಛೇರಿ ಸಿಬ್ಬಂದಿ ಸಿ.ವಿನೋದ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
