
CHITRADURGA NEWS | 11 APRIL 2026
ಚಿತ್ರದುರ್ಗ: ನಗರದ ಎಫ್-9 ಹಾಗೂ ಎಫ್-10 ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಏ.12 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯವಾಗಲಿದೆ.
ಇದನ್ನೂ ಓದಿ: PU ಫಲಿತಾಂಶ | SRS ಕಾಲೇಜಿನ ಸುದರ್ಶನ್ ರಾಜ್ಯಕ್ಕೆ 6ನೇ ಸ್ಥಾನ
ಎಫ್-09 ಮಾರ್ಗದ ಮಾರ್ಗದ ಸರಸ್ವತಿಪುರಂ, ಐ.ಯು.ಡಿ.ಪಿ. ಬಡಾವಣೆ, ಜಿಲ್ಲಾ ಆಸ್ಪತ್ರೆ, ಜೋಗಿ ಮಟ್ಟಿ ರಸ್ತೆ, ಜಿಲ್ಲಾ ಪಂಚಯತ್ ಕಛೇರಿ, ಕರುವಿನ ಕಟ್ಟೆ ವೃತ್ತ, ಫಲ್ಟರ್ ಹೌಸ್, ಕಾಮನಬಾವಿ, ಕೋಟೆ ಮತ್ತು ಸುತ್ತಮುತ್ತಲ ಪ್ರದೇಶ ಹಾಗೂ ಎಫ್-10 ಮಾರ್ಗದ ಜಿಲ್ಲಾ ಪಂಚಾಯತ್ 11ಕೆ.ವಿ. ಮಾರ್ಗದ ಐ.ಯು.ಡಿ.ಪಿ. ಲೇಔಟ್, ಕಂದಾಯಗಿರಿ ನಗರ, ಕೆ.ಹೆಚ್.ಬಿ., ಟೀಚರ್ಸ್ ಕಾಲೋನಿ, ಸ್ಟೇಡಿಯಂ ರಸ್ತೆ, ಜೋಗಿಮಟ್ಟಿ ರಸ್ತೆ, ಗಾಂಧಿ ನಗರ, ಬಿದ್ದ ನಗರ, ಪ್ರಶಾಂತ್ ನಗರ, ವಿ.ವಿ ಬಡವಾಣೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಾಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
