CHITRADURGA NEWS | 28 AUGUST 2024
ಚಿತ್ರದುರ್ಗ: ಪಡಿತರ ಚೀಟಿದಾರರ ಇ-ಕೆವೈಸಿ(E-KYC) ಸಂಗ್ರಹಣೆ ಮಾಡಿಸಲು ಆಗಸ್ಟ್ 31 ಅಂತಿಮ ಗಡುವು ನಿಗದಿಪಡಿಸಿದ್ದು, ಇ-ಕೆವೈಸಿ ಸಂಗ್ರಹಣೆಯಾಗಿಲ್ಲದ ಪಡಿತರ ಚೀಟಿ(Ration Card)ದಾರರು ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: Internal reservation; ಒಳಮೀಸಲಾತಿ ಸುಪ್ರೀಂ ತೀರ್ಪಿಗೆ ಬದ್ಧ | ಸಿಎಂ ಸಿದ್ದರಾಮಯ್ಯ
ಪಡಿತರ ಚೀಟಿದಾರರ ಇ.ಕೆ.ವೈ.ಸಿ ಸಂಗ್ರಹಣೆಯನ್ನು 2017ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಸಂಗ್ರಹಣೆ ಮಾಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಇ-ಕೆ.ವೈ.ಸಿ ಸಂಗ್ರಹಣೆಯ ಪ್ರಗತಿಯನ್ನು ಪರಾಮರ್ಶೆ ಮಾಡಲಾಗಿ, ಇದುವರೆಗೂ ಜಿಲ್ಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿ ಸದಸ್ಯರ ಶೇ.96.34 ಮತ್ತು ಆದ್ಯತಾ ಪಡಿತರ ಚೀಟಿ ಸದಸ್ಯರ ಶೇ.97.18 ಸೇರಿದಂತೆ ಒಟ್ಟು ಶೇ.97.07ರಷ್ಟು ಇ-ಕೆ.ವೈ.ಸಿ ಸಂಗ್ರಹಣೆ ಮಾಡಲಾಗಿದೆ.
ಪಡಿತರ ಚೀಟಿಯಲ್ಲಿನ ಸದಸ್ಯರ ಇ-ಕೆ.ವೈ.ಸಿ ಸಂಗ್ರಹಣೆಯಾಗದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಅಂತಹ ಪಡಿತರ ಚೀಟಿಗಳು, ಸದಸ್ಯರುಗಳ ಹೆಸರುಗಳು ಪಡಿತರ ಚೀಟಿಗಳಿಂದ ಬಿಟ್ಟು ಹೋಗುವ ಮತ್ತು ಆಹಾರಧಾನ್ಯ ಹಂಚಿಕೆ ಸ್ಥಗಿತಗೊಳ್ಳುವ ಸಂಭವವಿರುತ್ತದೆ.
ಕ್ಲಿಕ್ ಮಾಡಿ ಓದಿ: Court news: ದೇವಸ್ಥಾನದ ಹುಂಡಿ, ಮನೆಗಳ್ಳತನ ಮಾಡಿದ್ದ ಕಳ್ಳರಿಗೆ 3 ವರ್ಷ ಜೈಲು
ಆದ್ದರಿಂದ ಇ-ಕೆ.ವೈ.ಸಿ ಸಂಗ್ರಹಣೆಯಾಗಿಲ್ಲದ್ದ ಪಡಿತರ ಚೀಟಿದಾರರು, ಸದಸ್ಯರು ಇದೇ ಆಗಸ್ಟ್ 31ರೊಳಗೆ ತಾವು ರಾಜ್ಯದ, ಜಿಲ್ಲೆಯ, ತಾಲ್ಲೂಕಿನ, ಹಳ್ಳಿಯ, ತಾವು ಇರುವ ಸ್ಥಳದಲ್ಲಿಯೇ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಜೀವಮಾಪನ ನೀಡಿ ಇ-ಕೆ.ವೈ.ಸಿ ಸಂಗ್ರಹಿಸಿಕೊಳ್ಳಲು ಪಡಿತರ ಚೀಟಿದಾರರಿಗೆ ಅಂತಿಮ ಗಡುವು ನೀಡಿದ್ದು, ತಪ್ಪದೇ ಇ.ಕೆ.ವೈ.ಸಿ ಮಾಡಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
