
CHITRADURGA NEWS | 17 FEBRUARY 2026
ಚಿತ್ರದುರ್ಗ: ಕೋಟೆನಾಡಿನ ಕನ್ನಡದ ಹಬ್ಬಕ್ಕೆ ಅದ್ದೂರಿ ಚಾಲನೆ ದೊರೆಯಿತು. ಸಮ್ಮೇಳನಾಧ್ಯಕ್ಷರಾದ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರಿಗೆ ತವರಿನ ಗೌರವ ದೊರೆಯಿತು.
ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ ಆರಂಭ
ಅಪರ ಜಿಲ್ಲಾಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಸಮ್ಮೇಳನಾಧ್ಯಕ್ಷೆ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರಿಗೆ ಗೌರವ ಸಮರ್ಪಣೆ ಮಾಡಿ, ಬಳಿಕ ಮೆರವಣಿಗೆಗೆ ಚಾಲನೆ ನೀಡಿದರು.
ಜಿಲ್ಲೆಯಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಮೊದಲ ಬಾರಿಗೆ ಸಮ್ಮೇಳನಾಧ್ಯಕ್ಷರಾಗಿ ಮಹಿಳೆಯೊಬ್ಬರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸಾಹಿತಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರನ್ನು ಅಲಂಕೃತ ಸಾರೋಟಿನಲ್ಲಿ ಸುಂದರ ಆಕಳಿನ ಪ್ರತಿಮೆ, ತಾಯಿ ಭುವನೇಶ್ವರಿ ಹಾಗೂ ಭಾರತ ಮಾತೆಯ ಭಾವಚಿತ್ರಗಳನ್ನು ಇಟ್ಟು ಅಲಂಕರಿಸಿ ಮೆರವಣಿಗೆ ನಡೆಸಲಾಯಿತು.
ವೀರಗಾಸೆ, ಕೊಂಬು ಕಹಳೆ, ಡೊಳ್ಳು ಕುಣಿತ, ಸಮಾಳ, ಟ್ರ್ಯಾಷ್, ಮಹಿಳಾ ತಮಟೆ, ಶಾರದ ಬ್ರಾಸ್ ಬ್ಯಾಂಡ್ ಸೇರಿ ಇನ್ನಿತರೆ ಜಾನಪದ ಕಲಾ ತಂಡಗಳು ಮೇಳೈಸಿದವು. ವಾಹನಗಳ ಮೇಲೆ ಕೆಂಪು, ಹಳದಿ ಬಣ್ಣಗಳ ಕನ್ನಡ ಬಾವುಟ ರಾರಾಜಿಸಿದವು. ನಗರದ ಮುಖ್ಯ ರಸ್ತೆಗಳ ವೃತ್ತಗಳು ಸೇರಿದಂತೆ ನಾನಾ ಕಡೆಗಳಲ್ಲಿ ಕನ್ನಡ ಬಾವುಟಗಳು, ಬಂಟಿಂಗ್ಸ್‌ಗಳಿಂದ ಸಿಂಗರಿಸಲಾಗಿತ್ತು.
ಇದನ್ನೂ ಓದಿ: ಬೇಸಿಗೆ ಆರಂಭ | ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಿ
ಭುವನೇಶ್ವರಿ, ಭಕ್ತ ಕನಕದಾಸ, ಬಸವಣ್ಣ ಸೇರಿದಂತೆ ನಾನಾ ಪುಣ್ಯಪುರುಷರ ವೇಷಭೂಣದಲ್ಲಿ ಮಕ್ಕಳು ಕಂಗೊಳಿಸಿದರು.
ಈ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಕಾರ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಡಾ.ವಿ.ಎಲ್.ಪ್ರಶಾಂತ್, ಕರವೇ ಜಿಲ್ಲಾಧ್ಯಕ್ಷ ಟಿ.ರಮೇಶ್, ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಕಸಾಪ ಪದಾಕಾರಿಗಳಾದ ಶ್ರೀನಿವಾಸ ಮಳಲಿ, ಸಿ.ರಂಗನಾಯ್ಕ್, ವಿ.ಧನಂಜಯ, ಪ್ರತಾಪ್‌ಜೋಗಿ, ರಜನಿ ಲೇಪಾಕ್ಷ ಸೇರಿದಂತೆ ನಾನಾ ಇಲಾಖೆ ಅಕಾರಿಗಳು, ಇತರೆ ಜನಪ್ರತಿನಿಗಳು, ನಾನಾ ಕನ್ನಡಪರ ಸಂಘಟನೆಗಳ ಪದಾಕಾರಿಗಳು, ಕಸಾಪ ಪದಾಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಹುತೇಕರು ಹೆಗಲ ಮೇಲೆ ಕೆಂಪು ಹಳದಿ ವಸ್ತ್ರಧರಿಸಿ ಗಮನ ಸೆಳೆದರು.
ಇದನ್ನೂ ಓದಿ: SC, ST ಹಿಂದುಳಿದ ವರ್ಗದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನ್ಯಾಯ
ಮಹಾತ್ಮಗಾಂಧಿ ವೃತ್ತ, ಬಿ.ಡಿ.ರಸ್ತೆ, ಮಹಾವೀರ ಸರ್ಕಲ್, ಅಂಬೇಡ್ಕರ್ ವೃತ್ತ, ಮದಕರಿನಾಯಕ ಸರ್ಕಲ್, ಜೋಗಿಮಟ್ಟಿ ರಸ್ತೆ ಮಾರ್ಗವಾಗಿ ಸ್ಟೇಡಿಯಂ ರಸ್ತೆಯ ಜಿಜಿ ಸಮುದಾಯ ಭವನ ತಲುಪಿತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
