ಕ್ರೈಂ ಸುದ್ದಿ
ಚಿತ್ರದುರ್ಗ CYBER ಪೊಲೀಸರ ಕಾರ್ಯಾಚರಣೆ | ಅಂತಾರಾಜ್ಯ ಗಾಂಜಾ ಪೆಡ್ಲರ್ ಬಂಧನ


CHITRADURGA NEWS | 23 NOVEMBER 2024
ಚಿತ್ರದುರ್ಗ: ಚಿತ್ರದುರ್ಗ ಸೈಬರ್ (CYBER) (ಸಿಇಎನ್) ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಂತಾರಾಜ್ಯ ಗಾಂಜಾ ಪೆಡ್ಲರ್ ಬಂಧನವಾಗಿದೆ.
ಬಿಹಾರ ಮೂಲದ 24 ವರ್ಷದ ಹರಿ ಓಂಕುಮಾರ್ ಬಂಧಿತ ಗಾಂಜಾ ಪೆಡ್ಲರ್.

ಇದನ್ನೂ ಓದಿ: ಪೊಲೀಸರ ವಾರ್ಷಿಕ ಕ್ರೀಡಾಕೂಟ | ನ್ಯಾ.ರೋಣ ವಾಸುದೇವ ಚಾಲನೆ
ಚಿತ್ರದುರ್ಗ ಹೊರವಲಯದ ಹಳೆಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಜೈಹಿಂದ್ ಹೋಟೆಲ್ ಬಳಿ ಗಾಂಜಾ ಇಟ್ಟುಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶ ವಿಶಾಖಾಪಟ್ಟಣದಿಂದ ಗಾಂಜಾ ಖರೀಧಿಸಿ ಬೆಂಗಳೂರು ಮೂಲಕ ಚಿತ್ರದುರ್ಗಕ್ಕೆ ಆಗಮಿಸಿ ಇಲ್ಲಿ ಗಾಂಜಾ ಮಾರಲು ಕಾಯುತ್ತಿದ್ದ.
ಇದನ್ನೂ ಓದಿ: ಬಿಜೆಪಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಆಂದೋಲನ | ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಬಂಧಿತನಿಂದ 2,25 ಲಕ್ಷ ರೂ. ಮೊತ್ತದ 4 ಕೆ.ಜಿ. 590 ಗ್ರಾಂ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಚಿತ್ರದುರ್ಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು | ಸ್ಥಳದಲ್ಲೇ ಇಬ್ಬರು ಮೃತ
ಸೈಬರ್ ಠಾಣೆ ಪೊಲೀಸ್ ನಿರೀಕ್ಷಕ ಎನ್.ವೆಂಕಟೇಶ್, ಎಎಸ್‍ಐ ಅಂಜಿನಪ್ಪ, ಹೆಡ್ ಕಾನ್ಸ್‍ಟೇಬಲ್‍ಗಳಾದ ಸಿದ್ದಲಿಂಗಯ್ಯ ಹಿರೇಮಠ, ಗಂಗಾಧರಪ್ಪ, ಪಿಸಿಗಳಾದ ಗಗನ್ ದೀಪ್ ಪವಾರ, ಭೀಮನಗೌಡ ಪಾಟೀಲ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
