ಮುಖ್ಯ ಸುದ್ದಿ
ಮೈಕ್ರೋ ಫೈನಾನ್ಸ್ ಗಳಿಗೆ ಐಜಿಪಿ ರವಿಕಾಂತೇಗೌಡ ಎಚ್ಚರಿಕೆ | ಸಾಲ ವಸೂಲಿಗೆ ಬಲವಂತ ಮಾಡಿದ್ರೆ ಕ್ರಮ

CHITRADURGA NEWS | 30 JANUARY 2025
ಚಿತ್ರದುರ್ಗ: ಫೈನಾನ್ಸ್ ಸಂಸ್ಥೆಗಳು ಸಾಲ ಪಡೆದವರ ಮೇಲೆ ಬಲವಂತ ಮಾಡಿ, ಬೆದರಿಸಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಾವಣಗೆರೆ ಪೂರ್ವ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲೆಯ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.

ಇದನ್ನೂ ಓದಿ: ರಸ್ತೆಗಾಗಿ ಹಿಂದಕ್ಕೆ ಸರಿಯುತ್ತಿದೆ ಮೂರಂತಸ್ತಿನ ಕಟ್ಟಡ | ಹೈಡ್ರಾಲಿಕ್ ಜಾಕ್ ಮೂಲಕ ಕಟ್ಟಡ ಶಿಫ್ಟ್
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಜೊತೆ ಸೇರಿ ರೌಡಿಗಳು ವಸೂಲಿ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಿ, ಗಡಿಪಾರು ಮಾಡಲಾಗುವುದು ಎಂದು ತಿಳಿಸಿದರು.
ಹಣದ ಆಸೆಗೆ ಯುವಕರು, ಫೈನಾನ್ಸ್ ಸಂಸ್ಥೆಗಳೊಂದಿಗೆ ವಸೂಲಿಗೆ ಹೋದರೆ ಕಾನೂನು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.
ಇದನ್ನೂ ಓದಿ: ಹಾಲಿನ ದರ ಹೆಚ್ಚಿಸಲು ತುರ್ತು ಸಭೆ | ಶಿಮುಲ್ ನಿರ್ದೇಶಕ ಬಿ.ಆರ್.ರವಿಕುಮಾರ್
ಫೈನಾನ್ಸ್ ಸಂಸ್ಥೆಯವರು ತೊಂದರೆ ನೀಡಿದರೆ, ಸಾರ್ವಜನಿಕರು ಪೊಲೀಸ್ ಸಹಾಯವಾಣಿ 112 ಅಥವಾ ಪೊಲೀಸ್ ಠಾಣೆ, ಅಧಿಕಾರಿಗಳನ್ನು ನೇರವಾಗಿ ಸಂಪರ್ಕ ಮಾಡಿ ದೂರು ನೀಡಬಹುದು. ಕಿರುಕುಳ, ವಸೂಲಿಗೆ ಜನ ನೇಮಿಸಿಕೊಳ್ಳುವಂತಿಲ್ಲ, ಇಂತಹ ಘಟನೆಗಳು ಗಮನಕ್ಕೆ ಬಂದು ಕ್ರಮ ಜರುಗಿಸದಿದ್ದರೆ ಪೊಲೀಸರ ವಿರುದ್ಧವೂ ಶಿಸ್ತುಕ್ರಮದ ಎಚ್ಚರಿಕೆ ನೀಡಿದರು.

ದಾವಣಗೆರೆ ಪೂರ್ವ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ
ಜನಸ್ನೇಹಿ ಪೊಲೀಸ್ ಆಧ್ಯತೆ:
ಜನಸ್ನೇಹಿ ಪೊಲೀಸ್ ವ್ಯವಸ್ಥೆಯೇ ನಮ್ಮ ಮೊದಲ ಆಧ್ಯತೆಯಾಗಿದೆ. ಪೊಲೀಸ್ ಇಲಾಖೆಯ ಘೋಷಣೆಯೇ ಎಂದೆಂದಿಗೂ ನಿಮ್ಮೊಂದಿಗೆ ಎಂದಿದೆ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಅಕ್ರಮ ಚಟುವಟಿಕೆಗಳ ಕಡಿವಾಣ ಸೇರಿದಂತೆ ಅಪರಾಧ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಇನ್ನೂ ಉತ್ತಮಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಕಳೆದ 2-3 ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ ಘಟನೆಗಳನ್ನು ಗಮನಿಸಿ, ಹಿರಿಯ ಅಧಿಕಾರಿಗಳ ಸೂಚನೆ ಅನ್ವಯ ಜನರ ನೋವಿಗೆ ಸ್ಪಂದಿಸಲು ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದರು.
ಡ್ರಗ್ಸ್ ಮಾಫಿಯಾಕ್ಕೆ ಖಡಕ್ ಎಚ್ಚರಿಕೆ:
ಡ್ರಗ್ಸ್ ಸೇವನೆ, ಮಾರಾಟ, ಗಾಂಜಾ ಬೆಳೆಯುವುದು ಯಾವುದನ್ನೂ ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಸಂಪೂರ್ಣ ನಿರ್ಮೂಲನೆಯೇ ಗುರಿ. ಡ್ರಗ್ಸ್ ಸೇವನೆ ಮಾಡಿದವರ ಮೇಲೆಯೂ ಕಾನೂನು ಕ್ರಮ ಜರುಗಿಸಿ, ಅವರ ನೆರವಿನಿಂದಲೇ ಮೂಲ ಪತ್ತೆ ಮಾಡುತ್ತಿದ್ದೇವೆ. ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ಕುಂಭಮೇಳದಲ್ಲಿ ಕೋಟೆನಾಡಿನ ಮಠಧೀಶರು | ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ಪಿಗಳಾದ ದಿನಕರ್, ರಾಜಣ್ಣ, ಶಿವಕುಮಾರ್, ಉಮೇಶ್ ನಾಯ್ಕ್, ಗಣೇಶ್, ಸಿಪಿಐ ಮುದ್ದುರಾಜ್ ಇತರರಿದ್ದರು.
