By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಜಿಲ್ಲೆಯಲ್ಲಿ ಪಾಕ್ ಪ್ರಜೆಗಳು ಇದ್ದರೆ ಜಿಲ್ಲಾಡಳಿತ ಹೊರ ಹಾಕಬೇಕು | ಗೋವಿಂದ ಕಾರಜೋಳ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಜಿಲ್ಲೆಯಲ್ಲಿ ಪಾಕ್ ಪ್ರಜೆಗಳು ಇದ್ದರೆ ಜಿಲ್ಲಾಡಳಿತ ಹೊರ ಹಾಕಬೇಕು | ಗೋವಿಂದ ಕಾರಜೋಳ

ಮುಖ್ಯ ಸುದ್ದಿ

ಜಿಲ್ಲೆಯಲ್ಲಿ ಪಾಕ್ ಪ್ರಜೆಗಳು ಇದ್ದರೆ ಜಿಲ್ಲಾಡಳಿತ ಹೊರ ಹಾಕಬೇಕು | ಗೋವಿಂದ ಕಾರಜೋಳ

News Desk Chitradurga News
Last updated: 6 May 2025 06:38
News Desk Chitradurga News
2 months ago
Share
ಪತ್ರಿಕಾಗೋಷ್ಠಿಯಲ್ಲಿಸಂಸದ ಗೋವಿಂದ ಕಾರಜೋಳ ಮಾತನಾಡಿದರು.
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 06 MAY 2025

ಚಿತ್ರದುರ್ಗ: ಜಿಲ್ಲೆಯಲ್ಲಿ ಯಾರೇ ಪಾಕಿಸ್ತಾನದ ಪ್ರಜೆಗಳು ಇದ್ದರು ಅವರನ್ನ ಹೊರ ಹಾಕುವ ಕೆಲಸ ಜಿಲ್ಲಾಡಳಿತ ಮಾಡಬೇಕು. ಈ ಕುರಿತು ಕೇಂದ್ರ ಸರ್ಕಾರ ಸಹ ಸೂಚನೆ ಕೊಟ್ಟಿದ್ದು, ರಾಜ್ಯ ಸರ್ಕಾರ ದಿಟ್ಟ ನಿರ್ದಾರ ತೆಗೆದುಕೊಂಡು ಹೊರ ಹಾಕಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

Also Read: ಸಮಾಜದ ಹಿರಿಯರು, ಮುಖಂಡರು, ಭಕ್ತರಲ್ಲಿ ಶ್ರೀ ಶಾಂತವೀರ ಸ್ವಾಮೀಜಿ ಮನವಿ

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್‍ನ ಉಗ್ರರ ದಾಳಿ ಖಂಡಿಸಿ ತಕ್ಕ ಉತ್ತರಕ್ಕೆ ಪ್ರಧಾನಿಗಳು ಐದು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆ ನಾವೆಲ್ಲ ಸರ್ಕಾರದ ಜೊತೆ ಇದ್ದು, ಭಯೋತ್ಪಾದನಾ ಚಟುವಟಿಕೆ ತಡೆಗೆ ಬಹುತೇಕ ದೇಶಗಳು ನಮ್ಮ ದೇಶದ ಜೊತೆ ಇದ್ದಾವೆ. ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡುವ ನಿಟ್ಟಿನಲ್ಲಿ ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಕಡಿದು ಹಾಕಿದ್ದೇವೆ ಎಂದರು.

ಭಯೋತ್ಪಾದಕರ ಮಟ್ಟ ಹಾಕಲಿಕ್ಕೆ ದೇಶದ 140 ಕೋಟಿ ಜನ ಕೇಂದ್ರ ಸರ್ಕಾರದ ಜೊತೆಯಲ್ಲಿ ಇದ್ದಾರೆ. ಭಯೋತ್ಪಾದನಾ ಚಟುವಟಿಕೆಯನ್ನು ತಡೆಗಟ್ಟಲಿಕ್ಕೆ ಪ್ರಮುಖ ದೊಡ್ಡ ದೊಡ್ಡ ರಾಷ್ಟ್ರಗಳು ಭಾರತದ ಜೊತೆ ನಿಲ್ಲುವ ಭರವಸೆಯನ್ನು ನೀಡಿವೆ. ಪಾಕಿಸ್ತಾನಿಗಳು ನಮ್ಮ ದೇಶದಲ್ಲಿ ಇನ್ನೂ ಉಳಿದಿದ್ದಾರೆ. ಅವರನ್ನು ಹೊರ ಹಾಕಲಿಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಬೆಂಗಳೂರು, ಗುಲ್ಬರ್ಗದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಇನ್ನೂ ಇದ್ದಾರೆ ಎಂಬ ಮಾಹಿತಿಯಿದೆ. ಅವರನ್ನು ಗುರುತಿಸಿ ಹೊರ ಹಾಕಬೇಕು, ರಾಜ್ಯ ಸರ್ಕಾರ ಯಾವುದೇ ಹಿಂದೇಟು ಹಾಕಬಾರದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಾ ಬಂದಿದೆ. ಜಿಲ್ಲೆಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಸಿದ್ದರಾಮಯ್ಯ ಭಾವನಾತ್ಮಕ ಸಂಕಷ್ಟಗಳನ್ನು ಸೃಷ್ಟಿ ಮಾಡಿ ಓಟ್ ಬ್ಯಾಂಕ್ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ.

Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ 3100 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್‍ನವರ ಸಾಲ ವಸೂಲಾತಿಗೆ ಹೆದರಿ ಜನರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ನಿಮ್ಮ ಗ್ಯಾರೆಂಟಿ ಯೋಜನೆಗಳ ಬಗ್ಗೆ ನೀವೇ ಅವಲೋಕನ ಮಾಡಿಕೊಳ್ಳಿ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಹಣ ಏಕೆ ನೀಡಿಲ್ಲ…?

ಒಳ ಮೀಸಲಾತಿ ಜಾರಿ ವಿಚಾರವಾಗಿ 01.08.2024 ರಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಆದರೆ ಮುಖ್ಯಮಂತ್ರಿಗಳು ಜಾರಿ ಮಾಡದೇ ಆಯೋಗ ರಚನೆ ಅಂತ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿ ಗಣತಿ ಮಾಡಲು ನಿರ್ಧರಿಸಿದೆ.

Also read: ಜಿಲ್ಲೆಯಲ್ಲಿರುವ ಪಾಕ್‌ ಪ್ರಜೆಗಳನ್ನು ಹೊರಗೆ ಹಾಕಿ | ಬಿಜೆಪಿಯಿಂದ ಎಡಿಸಿಗೆ ಮನವಿ

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಒತ್ತಡಕ್ಕೆ ಮಣಿದು ಜಾತಿಗಣತಿ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಮಾತು.

ಜಾತಿ ಗಣತಿ ಮಾಡುವ ಉದ್ದೇಶ ಈಗಾಗಲೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿರುವುದರಿಂದ ಮಹಿಳೆಯರಿಗೂ ಸಹ ಮೀಸಲಾತಿ ಮತ್ತು ಒಳ ಮೀಸಲಾತಿ ಕೊಡಬೇಕಾಗಿರುವುದರಿಂದ ಜಾತಿ ಗಣತಿ ಅವಶ್ಯಕತೆಯಿದೆ ಎಂದರು.

ಕಾಂತರಾಜ್ ವರದಿಗೆ ಕಾಂತರಾಜ್ ಹಾಗೂ ಕಮಿಟಿ ಸದಸ್ಯರೇ ಸಹಿ ಮಾಡಿಲ್ಲ. 2023 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೇ ಚಿತ್ರದುರ್ಗ ನಗರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದ ಸಿದ್ದರಾಮಯ್ಯರವರು ಈಗ ವರದಿಯನ್ನು ಕೆಳಗೆ ಹಾಕಿಕೊಂಡು ಕುಳಿತಿದ್ದಾರೆ.

ಕಾಂಗ್ರೆಸ್ ನವರು ಎರಡು ನಾಲಿಗೆ ನಾಯಕರು ಅಂಬೇಡ್ಕರ್ ರವರನ್ನು ಸೋಲಿಸಿದ್ದು ಕಾಂಗ್ರೆಸ್ ನವರು. ಕಾಂಗ್ರೆಸ್ ನವರಿಗೆ ಅಸ್ಪೃಶ್ಯರ ಬಗ್ಗೆ, ಹಿಂದುಳಿದವರ ಬಗ್ಗೆ ಕಳಕಳಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ದಲಿತರನ್ನು ಉದ್ಧಾರ ಮಾಡಲಿಕ್ಕೆ ಆಗಲ್ಲ ಎಂದು ದೂರಿದರು.

Also Read: ಸನ್ ಸ್ಕ್ರೀನ್ ಹಚ್ಚುವುದರಿಂದ ವ್ಯಕ್ತಿಗೆ ಸಾಕಷ್ಟು ವಿಟಮಿನ್ ಡಿ ಸಿಗಬಹುದೇ?

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್ ಮಾತನಾಡಿ, ಮೇ.8ರಂದು ನಡೆಯುವ ಜನಾಕೋಶ ಯಾತ್ರೆಯ ಸಂದರ್ಭದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಮಂಡನೆ ಮಾಡಲಿದ್ದೇವೆ. ಅಂಬೇಡ್ಕರ್ ರವರ ಭಾವಚಿತ್ರ ಮೆರವಣಿಗೆ ಸಹ ಮಾಡಲಿದ್ದೇವೆ ಎಂದರು.

ಸಿದ್ದರಾಮಯ್ಯರವರು ನಡೆಸಿದ ಜಾತಿ ಗಣತಿ ಬೋಗಸ್ ಜಾತಿ ಗಣತಿ. ಅದರ ಮೂಲ ವರದಿ ಕಳೆದು ಹೋಗಿದೆ ಅಂತ ಹೇಳುತ್ತಾರೆ. ಕೇಂದ್ರ ಸರ್ಕಾರದ ನೈಜ ಜಾತಿಗಣತಿ ಹೊರಗೆ ಬಂದರೆ ಸಿದ್ದರಾಮಯ್ಯರವರ ಬಣ್ಣ ಯಾವಾಗ ಬಯಲಾಗುತ್ತೋ ಅನ್ನುವ ಕಾರಣದಿಂದ ನಮ್ಮ ಒತ್ತಡದಿಂದ ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ಹೊರಟಿದೆ ಅಂತ ಹೇಳುತ್ತಿದ್ದಾರೆ.

ಬಿಜೆಪಿ ಪಕ್ಷವು ಜಾತಿ ಗಣತಿ ಮಾಡುವಂತೆ ಹೋರಾಟ ಮಾಡುತ್ತಾ ಬಂದಿದೆ. ಆದರೆ ಸಿದ್ದರಾಮಯ್ಯನವರ ವರದಿಯ ಬಗ್ಗೆ ವಿರೋಧವಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಕೊಲೆಯಾಗಿದೆ. ಮತ್ತೆ ಇಬ್ಬರಿಗೆ ಕೊಲೆಯ ಬೆದರಿಕೆ ಬಂದಿದೆ. ಮುಖ್ಯಮಂತ್ರಿಗಳಿಗೆ ಕೊಲೆ ಆದವರ ಬಗ್ಗೆ ಇರಬೇಕಾದ ಅನುಕಂಪಕ್ಕಿಂತ ಕೊಲೆ ಮಾಡಿದವರ ಬಗ್ಗೆ ಅನುಕಂಪ ಜಾಸ್ತಿಯಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ನಿರಂತರವಾಗಿ ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿದೆ. ರಾಜ್ಯದ ಪೊಲೀಸರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ. ಈ ಸರ್ಕಾರ ಬಂದಾಗಿನಿಂದ 16 ಸಾವಿರ ರೌಡಿ ಶೀಟರ್ ಗಳ ರೌಡಿ ಶೀಟ್ ಗಳನ್ನು ವಾಪಾಸ್ ಪಡೆದಿದ್ದಾರೆ. ನಾನು ರಾಜ್ಯದ ಜಿಲ್ಲಾವಾರು ರೌಡಿಶೀಟರ್ ಗಳ ಮಾಹಿತಿಯನ್ನು ಕೊಡಿ ಎಂದು ಈಗಾಗಲೇ ಸಭಾಧ್ಯಕ್ಷರ ಮೂಲಕ ಮನವಿ ಎಂದು ತಿಳಿಸಿದರು.

Also Read: ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆಯೇ? 

ಜನಾಕೋಶ ಯಾತ್ರೆಯು ಮೇ.8 ರಂದು ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ನಗರಕ್ಕೆ ಆಗಮಿಸಲಿದೆ. ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಎಂ.ಜಿ ಸರ್ಕಲ್, ಎಸ್.ಬಿ.ಐ ಸರ್ಕಲ್, ಪ್ರವಾಸಿ ಮಂದಿರದ ಮುಖಾಂತರ ಒಬವ್ವ ಸರ್ಕಲ್ ಗೆ ಬಂದು ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಜನಾಕೋಶ ಯಾತ್ರೆಯಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಸಭೆಯ ವಿರೋಧ ಪಕ್ಷ ನಾಯಕ ಆರ್.ಅಶೋಕ, ಮಾಜಿ ಸಚಿವ ಶ್ರೀರಾಮುಲು, ವಿಧಾನ ಪರಿಷತ್ತಿನ ವಿರೋಧಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಜಿಎಚ್.ತಿಪ್ಪಾರೆಡ್ಡಿ, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ರಾಮದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BJPChitradurgaChitradurga newsChitradurga UpdatescongressDistrict AdministrationJanakosha YatraKannada Latest NewsKannada NewsPakistanterrorist attackಉಗ್ರರ ದಾಳಿಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಕಾಂಗ್ರೆಸ್ಚಿತ್ರದುರ್ಗಚಿತ್ರದುರ್ಗ ನ್ಯೂಸ್ಜನಾಕೋಶ ಯಾತ್ರೆಜಿಲ್ಲಾಡಳಿತಪಾಕಿಸ್ತಾನಬಿಜೆಪಿ
Share This Article
Facebook Email Print
Previous Article shri shanthaveera swamiji ಸಮಾಜದ ಹಿರಿಯರು, ಮುಖಂಡರು, ಭಕ್ತರಲ್ಲಿ ಶ್ರೀ ಶಾಂತವೀರ ಸ್ವಾಮೀಜಿ ಮನವಿ
Next Article ಸರಳ ಮದುವೆ ಆದರ್ಶದ ಮದುವೆ | ಡಾ.ಬಸವಕುಮಾರ ಸ್ವಾಮೀಜಿ
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | ಜೂನ್ 22 | ವ್ಯವಹಾರದಲ್ಲಿ ಅನಿರೀಕ್ಷಿತ ಅಡೆತಡೆಗಳು, ಆರೋಗ್ಯ ಸಮಸ್ಯೆ, ಹೊಸ ವಾಹನ ಖರೀದಿ
Dina Bhavishya
ಯೋಗಶಾಸ್ತ್ರದ ನಿರಂತರ ಅನುಷ್ಠಾನದಿಂದ ಜೀವನೋತ್ಸಾಹ | ಇಮ್ಮಡಿ ಸಿದ್ದರಾಮೇಶ್ವರ ಶ್ರೀ
ಮುಖ್ಯ ಸುದ್ದಿ
ಮಾಹಿತಿ ಹಕ್ಕು ಕಾಯ್ದೆ | ಶುಲ್ಕ ಪರಿಷ್ಕರಣೆಗೆ ಪ್ರಸ್ತಾವನೆ | ಆಯುಕ್ತ ರುದ್ರಣ್ಣ ಹರ್ತಿಕೋಟೆ
ಮುಖ್ಯ ಸುದ್ದಿ
ಅರ್ಜಿ ಅಹ್ವಾನ
ಜೂನ್ 30ರವರೆಗೆ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up