CHITRADURGA NEWS | 05 MAY 2025
ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಸಮಾಜದ ಹಿರಿಯರು, ಮುಖಂಡರು, ಭಕ್ತರು, ಸಂಘ ಸಂಸ್ಥೆಗಳಲ್ಲಿ ಬಹಿರಂಗ ಮನವಿ ಮಾಡಿಕೊಂಡಿದ್ದು, ಅದರ ಯಥಾ ವಿವರ ಕೆಳಗಿನಂತಿದೆ.
ಕಳೆದ 28 ವರ್ಷಗಳಿಂದ ನಿರಂತರ ಹೋರಾಟ ಮಾಡಿ ಕಾರ್ಯಕ್ರಮ ಮಾಡಿ ರಾಜ್ಯ ಹೊರ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಮನೆಮನೆಗೆ ಕುಂಚಿಟಿಗ ಸಮಾಜದ ಜಾಗೃತಿ ಮೂಡಿಸಿದ ಹೆಮ್ಮೆ ಮತ್ತು ಸಂತೃಪ್ತಿ ನಮಗಿದೆ.
ಇದನ್ನೂ ಓದಿ: ಜಿಲ್ಲೆಯಲ್ಲಿರುವ ಪಾಕ್ ಪ್ರಜೆಗಳನ್ನು ಹೊರಗೆ ಹಾಕಿ | ಬಿಜೆಪಿಯಿಂದ ಎಡಿಸಿಗೆ ಮನವಿ
ನಾವು ಪ್ರಾರಂಭಿಸಿದ ಕುಂಚಿಟಿಗ ಸಂಘಟನೆ ಇಂದು ಮಠಗಳಿಗೆ ಸಂಘ ಸಂಸ್ಥೆಗಳಲ್ಲಿ ಕುಂಚಿಟಿಗ ಎಂಬ ಪದ ರಾರಾಜಿಸುತ್ತಿದೆ.
ಸಮಾಜದ ಮೀಸಲಾತಿ ಮತ್ತು ಅವರ ಧ್ವನಿಯಾಗಿ ಮುಖವಾಣಿಯಾಗಿ ಕೆಲಸ ಮಾಡಿದ್ದೇವೆ. ಮಠ, ಪೀಠಗಳು ಸಂಘ ಸಂಸ್ಥೆಗಳು ಶಾಶ್ವತವೇ ಹೊರೆತು ಅಲ್ಲಿ ಬರುವ ವ್ಯಕ್ತಿಗಳು ಕೇವಲ ಅವಕಾಶ ಸಂದರ್ಭಗಳು ಮಾತ್ರ.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಹಾಗಾಗಿ ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಅವಿಚಿನ್ನವಾಗಿ ಮುನ್ನಡೆಯಬೇಕೆಂಬ ಆಶಯ ನಮ್ಮದು.
ಹಾಗಾಗಿ ಶ್ರೀಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಲು ನಾವು ಬಯಸಿದ್ದು ಆಸಕ್ತ ಭಕ್ತರು ತಮ್ಮ ಮಕ್ಕಳನ್ನು ಅಥವಾ ತಮಗೆ ಗೊತ್ತಿರುವ ಯುವಕರನ್ನು ಶ್ರೀಮಠಕ್ಕೆ ಕರೆದುಕೊಂಡು ಬಂದಲ್ಲಿ ದೀಕ್ಷಾ ಶಿಕ್ಷಣ ನೀಡಿ ಶ್ರೀ ಪೀಠಕ್ಕೆ ಉತ್ತರಾಧಿಕಾರಿಯಾಗಿ ನೇಮಿಸಲಾಗುವುದು.
ಇದನ್ನೂ ಓದಿ: SSLC | ಹಿರಿಯೂರಿನ ಪಿಗ್ಮಿ ಕಲೆಕ್ಟರ್ ಪುತ್ರ, ಸರ್ಕಾರಿ ಶಾಲೆ ಶಿಕ್ಷಕರ ಪುತ್ರಿ ರಾಜ್ಯಕ್ಕೆ ಟಾಪರ್ಸ್
ತಕ್ಷಣ ಈ ನಿಟ್ಟಿನಲ್ಲಿ ಸಮಾಜದ ಸಂಘಟನೆಗಳು ಮತ್ತು ಭಕ್ತರು ತುರ್ತಾಗಿ ಈ ಕಾರ್ಯವನ್ನು ಮಾಡಿ .
ಒಂದು ವೇಳೆ ನೀವು ಮಾಡದಿದ್ದರೆ ನಾವು ಕೈಗೊಳ್ಳುವ ಎಲ್ಲಾ ತೀರ್ಮಾನಕ್ಕೆ ನಿಮ್ಮ ಸಮ್ಮತಿ ಇದೆ ಎಂದು ಭಾವಿಸುತ್ತೇವೆ.
ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು ಪೀಠಾಧ್ಯಕ್ಷರು
ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಶ್ರೀಕ್ಷೇತ್ರ ಕುಂಚಗಿರಿ ಹೊಸದುರ್ಗ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
