ಮುಖ್ಯ ಸುದ್ದಿ
ಗಿಡ ನೆಟ್ಟರೆ ತಾಪಮಾನ ಇಳೆಯುತ್ತೆ, ಮಳೆ ಹೆಚ್ಚಾಗುತ್ತೆ | ಎಂ.ಸಿ.ರಘುಚಂದನ್

CHITRADURGA NEWS | 09 JUNE 2024
ಚಿತ್ರದುರ್ಗ: ನಾವು ಪರಿಸರವನ್ನು ಬೆಳಸಿದರೆ ಅದು ನಮ್ಮನ್ನು ಉಳಿಸುತ್ತದೆ. ಮರಗಳನ್ನು ಕಡಿಯುವುದಕ್ಕಿಂತ ಸಸಿಗಳನ್ನು ನೆಡುವ ಕೆಲಸ ಮಾಡಬೇಕಿದೆ ಎಂದು ಬಿಜೆಪಿ ಯುವ ಮಖಂಡ ಹಾಗೂ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಸಿಇಓ ಎಂ.ಸಿ.ರಘುಚಂದನ್ ಹೇಳಿದರು.
ಇದನ್ನೂ ಓದಿ: ಹತ್ತಿ ಬೆಳೆಗಾರರ ಜಾಗೃತಿ ಸಮಾವೇಶ | ಬೆಳೆಯ ಬಗ್ಗೆ ವೈಜ್ಞಾನಿಕ ಮಾಹಿತಿ

ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಯಂಗಮ್ಮನಕಟ್ಟೆ ಬಡಾವಣೆಯಲ್ಲಿ ನೀಲಾದ್ರಿ ನೇಸರ ಕ್ಷೇಮಾಭೀವೃದ್ದಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
ಇಂದು ಗಿಡ, ಮರಗಳನ್ನು ಬೆಳೆಸುವವರು, ಸಸಿಗಳನ್ನು ನೆಡುವವರ ಸಂಖ್ಯೆ ಕಡಿಮೆಯಾಗಿದೆ. ಸಸಿ ನೆಡಲು ಬನ್ನಿ ಎಂದು ಕರೆಯುವವರೂ ವಿರಳ. ಆದರೆ, ದೇವಸ್ಥಾನ, ರಸ್ತೆ ನಿರ್ಮಾಣ ಇತ್ಯಾದಿ ಕೆಲಸಗಳಿಗೆ ಸಹಾಯ ಕೇಳುವವರೇ ಹೆಚ್ಚು ಎಂದರು.

ಇದನ್ನೂ ಓದಿ: ಪಂಡಿತ್ ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಪುಸ್ತಕ ಆಹ್ವಾನ | 10 ಕೃತಿಗೆ ಶ್ರೇಷ್ಠ ಕೃತಿ ರತ್ನ ಸಮ್ಮಾನ
ಇಂದು ನಾವು ಪರಿಸರವನ್ನು ಉಳಿಸಿ ಬೆಳಸಿದರೆ ಅದು ಮುಂದಿನ ದಿನಗಳಲ್ಲಿ ನಮ್ಮನ್ನು ಉಳಿಸುತ್ತದೆ. ಆದ್ದರಿಂದ ಶುದ್ಧ ಗಾಳಿ, ಸುಂದರ ವಾತಾವರಣ ಸೃಷ್ಟಿಸುವ ಗಿಡ ಮರಗಳನ್ನು ನೆಟ್ಟು ಪೋಷಣೆ ಮಾಡಿ ನಾಲ್ಕಾರು ವರ್ಷ ಬೆಳೆಸಿದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇಂದಿನ ಕಲುಷಿತ ವಾತಾವರಣದಿಂದ ಒಂದಿಷ್ಟು ಮುಕ್ತಿ ಸಿಗುತ್ತದೆ ಎಂದು ಸಲಹೆ ನೀಡಿದರು.
ನಾವೆಲ್ಲರೂ ವಾರಕ್ಕೊಮ್ಮೆ ವೈದ್ಯರನ್ನು ಬೇಟಿ ಮಾಡುವ ಸಂದರ್ಭಗಳು ಹತ್ತಿರವಾಗುತ್ತಿವೆ. ಉತ್ತಮ ಪರಿಸರ, ಶುದ್ಧ ಆಹಾರ ಸೇವನೆ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಅರಿವು ಮೂಡಿಸಿ ಸಸಿ ನೆಡುವ ಅಭ್ಯಾಸ ಮಾಡಿಸಬೇಕು ಎಂದರು.
ಇದನ್ನೂ ಓದಿ: ಇಷ್ಟಲಿಂಗ ಜಾತಿ ಕುರುಹು ಅಲ್ಲ | ಶಿವಯೋಗಿ ಸಿ.ಕಳಸದ
ಚಿತ್ರದುರ್ಗದಲ್ಲಿ ರಸ್ತೆ ಆಗಲೀಕರಣದ ವೇಳೆ ಹಳೆಯ ಮರಗಳನ್ನು ಕಡಿಯಲಾಗಿದೆ. ಮತ್ತೆ ಬೆಳೆಸಲು ಅನೇಕ ವರ್ಷಗಳೇ ಬೇಕು. ಮರಗಳ ಸಂಖ್ಯೆ ಕಡಿಮೆಯಾದರೆ ತಾಪಮಾನ ಹೆಚ್ಚಾಗುತ್ತದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ನಗರದಲ್ಲಿ ಸಸಿಗಳನ್ನು ನೆಡಲು 1 ಸಾವಿರ ಸಸಿಗಳನ್ನು ಕೊಡಿಸಿ, ಈ ಬಡಾವಣೆಯ ನಿವಾಸಿಗಳ ಕೋರಿಕೆಯಂತೆ ಕೊಳವೆ ಬಾವಿಯನ್ನೂ ಹಾಕಿಸಿಕೊಡುವುದಾಗಿ ಭರವಸೆ ನೀಡಿದರು.
ಪರಿಸರವಾದಿ ಹೆಚ್.ಕೆ.ಎಸ್.ಸ್ವಾಮಿ ಮಾತನಾಡಿ, ಇಂದು ನಾವು ವಿದೇಶಿ ಸಂಸ್ಕøತಿ, ವಸ್ತುಗಳಿಗೆ ಮಾರುಹೋಗಿ ದೇಸಿಯತೆಯನ್ನೇ ಮರೆಯುತ್ತಿದ್ದೇವೆ ಎಂದರು.
ಖಾದಿ ಅತ್ಯಂತ ಆರೋಗ್ಯಕರ ಹಾಗೂ ತಂಪು. ಆದರೆ, ನಾವು ಅದನ್ನೇ ಮರೆಯುತ್ತಿದ್ದೇವೆ. ಎಲ್ಲೆಲ್ಲೂ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ವಾತಾವರಣಕ್ಕೆ ಮಾರಕವಾಗಿದೆ.
ಇದನ್ನೂ ಓದಿ: ಫೋನ್‌ಪೇ ಆ್ಯಕ್ಟಿವೇಷನ್ ಕಾಲ್ | ಕೆಲವೇ ನಿಮಿಷಕ್ಕೆ ₹ 1.75 ಲಕ್ಷ ವಂಚನೆ
ಪುನರ್ ಬಳಕೆ ಆಗುವಂತಹ ವಸ್ತುಗಳು ಹಾಗೂ ಪರಿಸರಕ್ಕೆ ಹಾನಿಯಾಗದ ವಸ್ತುಗಳನ್ನು ಬಳಕೆ ಮಾಡಲು ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿದರು.
ನೀಲಾದ್ರಿ ನೇಸರ ಕ್ಷೇಮಾಭೀವೃದ್ದಿ ಸಂಘದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಯಂಗಮ್ಮನಕಟ್ಟೆ ಪ್ರದೇಶದ 4 ಬಡಾವಣೆಯವರು ಸೇರಿ ಸಂಘಟನೆ ಮಾಡಿಕೊಂಡಿದ್ದೇವೆ. ನಗರ ಬೆಳೆಯುತ್ತಿದ್ದು, ಇಲ್ಲಿ 4 ಎಕರೆ ವಿಸ್ತೀರ್ಣದ ಉದ್ಯಾನದ ಜಾಗವಿದ್ದು, ಅದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ದಾನಿಗಳು ಸಹಕಾರ ನೀಡಬೇಕು ಎಂದರು.
ಇದನ್ನೂ ಓದಿ: ಕೋಟೆನಾಡಲ್ಲಿ ‘ಯೋಗೋತ್ಸವ’ ವೈಭವ | ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ
ನೀಲಾದ್ರಿ ನೇಸರ ಕ್ಷೇಮಾಭೀವೃದ್ದಿ ಸಂಘದ ಗೌರವಾಧ್ಯಕ್ಷ ಯಶವಂತ್, ಮಹಿಳಾ ಘಟಕದ ಅಧ್ಯಕ್ಷೆ ನಳಿನಿ, ರಾಮಪ್ಪ, ವಾಣಿ ಮತ್ತಿತರರು ಭಾಗವಹಿಸಿದ್ದರು.
