ಮುಖ್ಯ ಸುದ್ದಿ
HSRP Number Plate: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ | ಮೂರು ದಿನ ದಂಡವಿಲ್ಲ
CHITRADURGA NEWS | 16 SEPTEMBER 2024
ಚಿತ್ರದುರ್ಗ: ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ನೀಡಿದ್ದ ಡೆಡ್‌ಲೈನ್ ಸೆ.15ಕ್ಕೆ ಮುಗಿದಿದೆ. ಸೆ.16 (ಸೋಮವಾರ)ರಿಂದ ದಂಡ ವಿಧಿಸುವ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಆದರೆ ಈ ವಿಚಾರ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಸೆ.18 ರಂದು ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ದಂಡ ವಿಧಿಸದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಎಚ್‌ಎಸ್‌ಆರ್‌ಪಿ ಅಳವಡಿಸಲು ಸಮಯ ವಿಸ್ತರಿಸಲು ಕೋರಿ ಬಿಎನ್‌ಡಿ ಎನರ್ಜಿ ಪ್ರೈವೆಟ್ ಲಿಮಿಟೆಡ್ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅವಧಿ ವಿಸ್ತರಿಸಲು ಸೂಚಿಸಿದ್ದ ಹೈಕೋರ್ಟ್ ವಿಚಾರಣೆ ಮುಂದೂಡಿತ್ತು. ಅದರಂತೆ ಸೆ.15ರವರೆಗೆ ಅವಧಿ ವಿಸ್ತರಿಸಲಾಗಿತ್ತು.
ಕ್ಲಿಕ್ ಮಾಡಿ ಓದಿ: ರೈತರಿಂದ ಲಕ್ಷಾಂತರ ಮೌಲ್ಯದ ಅಡಿಕೆ ಖರೀದಿ | ತಲೆಮರೆಸಿಕೊಂಡ ವ್ಯಾಪಾರಿ
ಮೂರು ತಿಂಗಳ ಗಡುವು ಈಗ ಮುಗಿದಿದೆ. ಸೆ.18ಕ್ಕೆ ಹೈಕೋರ್ಟ್ ನೀಡುವ ಆದೇಶ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಬಲವಂತದ ಕ್ರಮ ಇರುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಸ್ಪಷ್ಟಪಡಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಶಾಸಕ ವೀರೇಂದ್ರ ಪಪ್ಪಿ ಮನೆ ಮುಂದೆ ತಮಟೆ ಚಳವಳಿ | ಭದ್ರಾ ಮೇಲ್ದಂಡೆ ಹೋರಾಟ
2019ರ ಏಪ್ರಿಲ್ 1ರ ನಂತರದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಇದೆ. ಅದಕ್ಕಿಂತ ಹಿಂದಿನ ವಾಹನಗಳಿಗೆ ಅಳವಡಿಸಬೇಕು. ಇಲ್ಲಿವರೆಗೆ 52 ಲಕ್ಷ ವಾಹನಗಳಿಗೆ ಅಳವಡಿಸಲಾಗಿದೆ. 1.48 ಕೋಟಿ ವಾಹನಗಳಿಗೆ ಅಳವಡಿಕೆಯಾಗಿಲ್ಲ. ಒಮ್ಮೆ ತಪಾಸಣೆ ಆರಂಭಿಸಿದರೆ ಅಳವಡಿಸುವವರ ಪ್ರಮಾಣ ಹೆಚ್ಚಳವಾಗಲಿದೆ ಎನ್ನುತ್ತಾರೆ ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ.