ಕ್ರೈಂ ಸುದ್ದಿ
Fraud… : ರೈತರಿಂದ ಲಕ್ಷಾಂತರ ಮೌಲ್ಯದ ಅಡಿಕೆ ಖರೀದಿ | ತಲೆಮರೆಸಿಕೊಂಡ ವ್ಯಾಪಾರಿ


CHITRADURGA NEWS | 16 SEPTEMBER 2024
ಚಿತ್ರದುರ್ಗ: ರೈತರಿಂದ ಲಕ್ಷಾಂತರ ಮೌಲ್ಯದ ಅಡಿಕೆ ಖರೀದಿಸಿದ ಅಡಿಕೆ ವ್ಯಾಪಾರಿ ಹಣದ ಸಮೇತ ತಲೆಮರೆಸಿಕೊಂಡ ಘಟನೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ನಡೆದಿದೆ.
ಚಿಕ್ಕಜಾಜೂರು ಸಮೀಪದ ಹೊಸಹಳ್ಳಿ ಗ್ರಾಮದ ನಿಂಗರಾಜ್ ಹಾಗೂ ಶ್ರೀಕಾಂತ್ ವಂಚನೆಗೊಳಗಾದ ರೈತರು. ಚನ್ನಗಿರಿ ತಾಲ್ಲೂಕಿನ ಗೊಪ್ಪೆನಾಳ್ ಗ್ರಾಮದ ರುದ್ರೇಶ್ ಎಂಬ ಅಡಿಕೆ ವ್ಯಾಪಾರಿಯೊಬ್ಬ ಈ ಇಬ್ಬರು ರೈತರಿಂದ ₹22.54 ಲಕ್ಷ ಮೌಲ್ಯದ ಅಡಿಕೆ ಖರೀದಿಸಿ ವಂಚಿಸಿದ್ದಾನೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 16 | ಆರೋಗ್ಯದ ಬಗ್ಗೆ ಎಚ್ಚರ, ವ್ಯವಹಾರ ಅಡೆತಡೆ ನಿವಾರಣೆ

ಏಪ್ರಿಲ್ ತಿಂಗಳಿನಲ್ಲಿ ರುದ್ರೇಶ್ ₹13,24 ಲಕ್ಷ ಹಾಗೂ ₹ 9.30 ಲಕ್ಷ ಮೌಲ್ಯದ ಅಡಿಕೆಯನ್ನು ರೈತರಿಂದ ಖರೀದಿಸಿದ್ದ. ವಾರದೊಳಗೆ ಹಣ ಕೊಡುವುದಾಗಿ ತಿಳಿಸಿದ್ದ ರುದ್ರೇಶ್ ತಿಂಗಳಾದರೂ ಹಣವನ್ನು ಕೊಡದಿದ್ದಾಗ ಅನುಮಾನಗೊಂಡ ರೈತರು ಚನ್ನಗಿರಿಯ ಸಿಪಿಐ ಅವರಿಗೆ ದೂರು ನೀಡಿದ್ದರು. ಈ ವೇಳೆ ರುದ್ರೇಶ್ ಹಾಗೂ ಅವರ ತಾಯಿ ಸಿಪಿಐ ಸಮ್ಮುಖದಲ್ಲಿ ಮೂರು ತಿಂಗಳ ವಾಯಿದೆ ಪಡೆದಿದ್ದರು. ನಂತರ ರುದ್ರೇಶ್ ನಾಪತ್ತೆಯಾಗಿದ್ದಾಗಿ ತಿಳಿದುಬಂದಿದೆ.
ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
