By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಭಾರತೀಯ ವಿಜ್ಞಾನ ಸಂಸ್ಥೆ
    ಎಸ್‌ಸಿ, ಎಸ್‌ಟಿ ಯುವಜನರಿಗೆ ಒಣಭೂಮಿ ಆಹಾರ ಉದ್ಯಮಗಳ ಕುರಿತು 3 ದಿನಗಳ ತರಬೇತಿ
    50 minutes ago
    ಶ್ರೀ ಕೃಷ್ಣ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ
    ಸೆಪ್ಟೆಂಬರ್ 04ರಂದು ಶ್ರೀ ಕೃಷ್ಣ ಜಯಂತಿ | ಅರ್ಥಪೂರ್ಣ, ಶ್ರದ್ಧಾಭಕ್ತಿಯಿಂದ ಜಯಂತಿ ಆಚರಣೆ
    51 minutes ago
    ಹುಣಸೇಕಟ್ಟೆ ಗ್ರಾಮದ ಸೇವಂತಿಗೆ ಜಮೀನುಗಳಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ
    ಹುಣಸೇಕಟ್ಟೆಯಲ್ಲಿ ಸೇವಂತಿಗೆ ಬೆಳೆಗೆ ಫ್ಯೂಜೇರಿಯಂ ವಿಲ್ಟ್ ರೋಗ | ರೈತರಿಗೆ ತೋಟಗಾರಿಕೆ ಇಲಾಖೆ ತಾಂತ್ರಿಕ ಸಲಹೆ
    13 hours ago
    DC Office Chitradurga
    ನೇಪಾಳ ಪ್ರಕೃತಿ ವಿಕೋಪ | ಸಂಪರ್ಕಕ್ಕೆ ಸಿಗದ ಪ್ರವಾಸಿಗರ ಮಾಹಿತಿ ನೀಡಲು ಜಿಲ್ಲಾಡಳಿತ ಮನವಿ
    13 hours ago
    ಆಗಸ್ಟ್ 30 ರಂದು ಚಿತ್ರದುರ್ಗ ನಗರ, ಚಿಕ್ಕಜಾಜೂರು ರೈಲ್ವೆ ಮೇಲುಸೇತುವೆಗಳ ಭೂಮಿಪೂಜೆ | ಸಚಿವ ವಿ.ಸೋಮಣ್ಣ ಭಾಗಿ
    14 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    7 days ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    2 weeks ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    1 month ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    2 months ago
  • ತಾಲೂಕು
    ತಾಲೂಕುShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    4 days ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    3 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    4 weeks ago
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    1 month ago
    Bus crashes into divider
    ಡಿವೈಡರ್‌ಗೆ ಅಪ್ಪಳಿಸಿದ ಬಸ್‌ | 28 ಪ್ರಯಾಣಿಕರಿಗೆ ಗಾಯ | ಇಬ್ಬರು ಮೃತ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    3 months ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    3 months ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    3 months ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    3 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಆಗಸ್ಟ್ 28 | ವೃತ್ತಿಪರ ವ್ಯವಹಾರದಲ್ಲಿ ಲಾಭ, ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ
    1 hour ago
    today bhavishya
    ದಿನ ಭವಿಷ್ಯ | ಆಗಸ್ಟ್ 27 | ಹಠಾತ್ ಆರ್ಥಿಕ ಲಾಭದ ಸೂಚನೆ, ಅರೋಗ್ಯದಲ್ಲಿ ಎಚ್ಚರ
    1 day ago
    today bhavishya
    ದಿನ ಭವಿಷ್ಯ | ಆಗಸ್ಟ್ 26 | ಶುಭ ಸುದ್ದಿ, ಕೈಗೊಂಡ ಕಾರ್ಯಗಳು ಯಶಸ್ವಿ
    2 days ago
    today bhavishya
    ದಿನ ಭವಿಷ್ಯ | ಆಗಸ್ಟ್ 25 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗ, ಅರೋಗ್ಯದಲ್ಲಿ ಜಾಗೃತಿ ವಹಿಸಿ
    3 days ago
    today bhavishya
    ದಿನ ಭವಿಷ್ಯ | ಆಗಸ್ಟ್ 24 | ಅನಿರೀಕ್ಷಿತ ಸಮಸ್ಯೆಗಳು, ಉದ್ಯೋಗದಲ್ಲಿ ಬಡ್ತಿ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಆಗಸ್ಟ್ 27 | ಹತ್ತಿ ರೇಟ್ ಎಷ್ಟಿದೆ?
    17 hours ago
    ಮಾರುಕಟ್ಟೆ ಧಾರಣೆ | ಆಗಸ್ಟ್ 24 | ಮೆಕ್ಕೆಜೋಳ, ಶೇಂಗಾ ರೇಟ್…..
    4 days ago
    ಮಾರುಕಟ್ಟೆ ಧಾರಣೆ | ಆಗಸ್ಟ್ 20 | ಹತ್ತಿ ರೇಟ್ ಎಷ್ಟಿದೆ?
    1 week ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಆಗಸ್ಟ್ 19 | ಮೆಕ್ಕೆಜೋಳ, ಶೇಂಗಾ ರೇಟ್…..
    1 week ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    1 week ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    2 weeks ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    3 weeks ago
    ಗುರು–ಲಿಂಗ–ಜಂಗಮ ವಿಷಯದ ಕುರಿತು ಉಪನ್ಯಾಸ
    ಅಷ್ಟಾವರಣಗಳು ಆಧ್ಯಾತ್ಮಿಕ ಬದುಕಿನ ರಕ್ಷಣಾ ಕವಚ | ಡಾ.ಜಿ.ವಿ.ಮಂಜುನಾಥ
    3 weeks ago
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ
    3 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ
    1 month ago
    ಮಾದಕ ವಸ್ತುಗಳ ಬಳಕೆ ತಡೆಗಟ್ಟುವಿಕೆ ವಿಷಯ ಕುರಿತು ಉಪನ್ಯಾಸಕ ಎಸ್.ಬಸವರಾಜು ಮಾತನಾಡಿದರು
    ಮಾದಕ ವಸ್ತುಗಳ ದುಶ್ಚಟಮುಕ್ತ ಜೀವನದಿಂದ ಉತ್ತಮ ಆರೋಗ್ಯ | ಎಸ್.ಬಸವರಾಜು
    1 month ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    2 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    2 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    3 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    5 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    6 months ago
  • ಹೊಸದುರ್ಗ
    ಹೊಸದುರ್ಗShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    4 days ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    3 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    4 weeks ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    2 months ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    2 months ago
  • Life Style
    Life StyleShow More
    garlic with mustard oil
    ಬೆಳ್ಳುಳ್ಳಿಯನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಏನಾಗುತ್ತದೆ? ತಿಳಿಯಿರಿ 
    53 minutes ago
    Dark circles
    ಡಾರ್ಕ್ ಸರ್ಕಲ್‍ಗೆ ಆಲೂಗಡ್ಡೆ ಅಥವಾ ಸೌತೆಕಾಯಿಯಲ್ಲಿ ಯಾವುದು ಉತ್ತಮ? ತಿಳಿಯಿರಿ
    1 day ago
    Rahu Dosha
    ಜಾತಕದಲ್ಲಿ ರಾಹು ದೋಷವಿರುವವರು ಈ ಶುಭ ಬಣ್ಣಗಳನ್ನು ಬಳಸಿದರೆ ದೋಷಗಳು ದೂರವಾಗುತ್ತವೆಯಂತೆ
    1 day ago
    Pomegranate
    ಈ ಐದು ಜನರು ದಾಳಿಂಬೆ ತಿನ್ನುವುದು ಹಾನಿಕಾರಕವಂತೆ
    2 days ago
    Noni fruit
    ಕೂದಲು ಉದುರುವಿಕೆಗೆ ನೋನಿ ಹಣ್ಣು ಪ್ರಯೋಜನಕಾರಿಯೇ? ತಿಳಿಯಿರಿ
    2 days ago
Reading: Chitradurga: ಎಸ್.ನಿಜಲಿಂಗಪ್ಪ ಮನೆ ಮಾರಾಟ ಮಾಡ್ತಾರಂತೆ | ಬೆಲೆ ಹತ್ತು ಕೋಟಿಯಂತೆ..
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

Chitradurga: ಎಸ್.ನಿಜಲಿಂಗಪ್ಪ ಮನೆ ಮಾರಾಟ ಮಾಡ್ತಾರಂತೆ | ಬೆಲೆ ಹತ್ತು ಕೋಟಿಯಂತೆ..

chitradurganews.com
Last updated: 12 November 2024 17:12
chitradurganews.com
2 years ago
Share
S Nijalingappa house
ಎಸ್.ನಿಜಲಿಂಗಪ್ಪ ಮನೆ
SHARE

CHITRADURGA NEWS | 12 NOVEMBER 2024

Contents
ಕಾಂಗ್ರೆಸ್‍ನಿಂದಲೂ ನಡೆದಿತ್ತು ಖರೀಧಿ ಪ್ರಹಸನ:ಮನೆ ಮಾರಾಟಕ್ಕಿದೆ, ಪತ್ರಿಕೆಯಲ್ಲಿ ಜಾಹೀರಾತು ಬಂತು:ಮತ್ಯಾಕೆ ಮನೆ ಖರೀದಿ ಆಗುತ್ತಿಲ್ಲ:ಮನೆ ಖರೀಧಿಗೆ ಇರುವ ತಾಂತ್ರಿಕ ಸಮಸ್ಯೆ ಏನು:ಎಲ್ಲಿದೆ ಗೊತ್ತಾ ನಿಜಲಿಂಗಪ್ಪ ಮನೆ:

ಚಿತ್ರದುರ್ಗ: ಕಳೆದ ಮೂರು ದಿನಗಳಿಂದ ಚಿತ್ರದುರ್ಗ (Chitradurga)ಕ್ಕೆ ಸಂಬಂಧಿಸಿದ ಸುದ್ದಿಯೊಂದು ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದೆ.

ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ, ಕರ್ನಾಟಕ ಏಕೀಕರಣ ಚುಳುವಳಿಯ ರೂವಾರಿ, ದಕ್ಷಿಣ ಭಾರತದಿಂದ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ದಿ.ಎಸ್.ನಿಜಲಿಂಗಪ್ಪ ಅವರ ಮನೆಗೆ ಸಂಬಂಧಿಸಿದ ಸುದ್ದಿ ಇದಾಗಿದೆ.

ಹೌದು, ಕಳೆದೊಂದು ದಶಕದಿಂದ ಎಸ್.ನಿಜಲಿಂಗಪ್ಪ ಅವರ ಮನೆ ಸದ್ದು, ಸುದ್ದಿ ಮಾಡುತ್ತಲೇ ಇದೆ. ಈ ಮನೆಯನ್ನು ಸರ್ಕಾರ ಖರೀಧಿಸಿ ಸ್ಮಾರಕ ಮಾಡಬೇಕು ಎನ್ನುವ ಒತ್ತಾಯ ನಿಜಲಿಂಗಪ್ಪ ಅವರ ಅನುಯಾಯಿಗಳು, ಅಭಿಮಾನಿಗಳು, ದುರ್ಗದ ಜನರಿಂದ ಕೇಳಿ ಬರುತ್ತಲೇ ಇದೆ.

ಇದನ್ನೂ ಓದಿ: ಒಂದೂವರೆ ಟಿಎಂಸಿ ನೀರು ಬಂದರೆ ವಿವಿ ಸಾಗರ ಭರ್ತಿ

ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡಿತಾದರೂ, ಅದ್ಯಾಕೋ ಮಧ್ಯದಲ್ಲಿ ಕೈ ಚೆಲ್ಲಿ ಬಿಟ್ಟಿತ್ತು. ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಸ್ಸೆನ್ ಮನೆಯನ್ನು ಸ್ಮಾರಕ ಮಾಡುವುದಾಗಿ ಘೋಷಿಸಿ 2 ಕೋಟಿ ರೂ.ಗಳನ್ನು ಖರೀಧಿಗಾಗಿ ಮೀಸಲಿಟ್ಟು, 1 ಕೋಟಿ ಬಿಡುಗಡೆ ಮಾಡಿದ್ದರು.

ಆದರೆ, ಸಕಾಲಕ್ಕೆ ಮಾರಾಟವಾಗದೆ, ವರ್ಷಗಳು ಕಳೆದವು. ಮತ್ತೊಂದು ಅವಧಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೂ ಈ ವಿಚಾರ ಪ್ರಸ್ತಾಪವಾಗಿ ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮನೆ ಖರೀಧಿಸಿ ಸ್ಮಾರಕ ಮಾಡುವ ಹೊಣೆಗಾರಿಕೆ ನೀಡಿದ್ದರು.

s.nijalingapa
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ನಿಜಲಿಂಗಪ್ಪ

ಈ ಅವಧಿಯಲ್ಲಿ ಒಂದಿಷ್ಟು ಪ್ರಕ್ರಿಯೆಗಳು ನಡೆದು, 4.26 ಕೋಟಿ ರೂ.ಗಳಲ್ಲಿ ಮನೆ ಖರೀಧಿಸಿ, 74 ಲಕ್ಷದಲ್ಲಿ ಅಭಿವೃದ್ಧಿ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದರು. ಅದರಂತೆ 5 ಕೋಟಿ ರೂ. ಅನುದಾನ ಜಿಲ್ಲಾಧಿಕಾರಿ ಖಾತೆಗೆ ಜಮೆಯೂ ಆಗಿತ್ತು.

ಇದನ್ನೂ ಓದಿ: ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆ ನಿಲ್ಲಿಸಿದ ಅಧಿಕಾರಿಗಳು..!!

ಆದರೆ, ಆಗಿದ್ದೇನು ಎಂದು ನೋಡಿದರೆ ಮತ್ತದೇ ನಿರಾಶೆ. ಮನೆ ಖರೀಧಿ ಆಗಲೇ ಇಲ್ಲ. ಸ್ಮಾರಕ ಆಗಲೇ ಇಲ್ಲ. ಬದಲಾಗಿ ದಿನೇ ದಿನೇ ಶಿಥಿಲವಾಗುತ್ತಿದೆ. ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸೂಕ್ತ ಭದ್ರತೆಯೇ ಇಲ್ಲದೆ ಸಾಕಷ್ಟು ಬಾರಿ ಕಳ್ಳತನ ನಡೆದಿರುವ ದೃಶ್ಯಗಳು ಮನೆಯಲ್ಲಿ ಕಂಡುಬರುತ್ತಿವೆ.

ಕಾಂಗ್ರೆಸ್‍ನಿಂದಲೂ ನಡೆದಿತ್ತು ಖರೀಧಿ ಪ್ರಹಸನ:

ಈ ನಡುವೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಮನೆ ಖರೀಧಿ ಸಂಬಂಧ ಪತ್ರವೊಂದನ್ನು ಮೂರು ತಿಂಗಳ ಹಿಂದಷ್ಟೇ ಬರೆದಿದ್ದರು.

ಎಸ್.ನಿಜಲಿಂಗಪ್ಪ ಹಿರಿಯ ಕಾಂಗ್ರೆಸ್ ನಾಯಕರು. ಎಐಸಿಸಿ ಅಧ್ಯಕ್ಷರಾಗಿದ್ದವರು. ಅವರ ಮನೆಯನ್ನು ಕಾಂಗ್ರೆಸ್ ಪಕ್ಷದಿಂದ ಖರೀಧಿ ಮಾಡಿದರೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಪಕ್ಷದ ಆಸ್ತಿಯಾಗುತ್ತದೆ ಎಂಬರ್ಥದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರದಲ್ಲಿ ತಿಳಿಸಿದ್ದರು.

ಈ ಪತ್ರ ತಲುಪಿದ ಬಳಿಕ ಕೆಪಿಸಿಸಿ ಕಡೆಯಿಂದ ಮನೆಯನ್ನು ನೋಡಿ ಬರಲು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಚಿತ್ರದುರ್ಗಕ್ಕೆ ಬಂದೇ ಬಿಟ್ಟರು. ಈ ವೇಳೆ ಎಸ್.ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಉಪಸ್ಥಿತರಿದ್ದು, ಮನೆಯನ್ನು ತೋರಿಸಿದ್ದರು.

ಇದನ್ನೂ ಓದಿ: ಎಸ್.ನಿಜಲಿಂಗಪ್ಪ ಮನೆ ಖರೀಧಿಗೆ ಮುಂದಾದ ಕಾಂಗ್ರೆಸ್ | ಮನೆ ವೀಕ್ಷಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಇಡೀ ಮನೆಯನ್ನು ವೀಕ್ಷಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯ ಬಲ ಬದಿಯಲ್ಲಿರುವ ಮಾವಿನ ಗಿಡದ ಕೆಳಗೆ ಕುಳಿತು ಪ್ರಮುಖರೊಂದಿಗೆ ಚರ್ಚೆ ನಡೆಸಿ, ಗಣಪತಿ ಹಬ್ಬದ ನಂತರ ಮಾತುಕತೆಗೆ ಬರುವುದಾಗಿ ಎಸ್.ಎನ್.ಕಿರಣ್‍ಶಂಕರ್ ಅವರಿಗೆ ಮಾತು ಕೊಟ್ಟು ಹೋಗಿದ್ದರು.
Lakshmi hebbalkar meet kiran shankar
ಎಸ್.ನಿಜಲಿಂಗಪ್ಪ ಪುತ್ರ ಕಿರಣ್‍ಶಂಕರ್ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತುಕತೆ

ಮನೆ ಮಾರಾಟಕ್ಕಿದೆ, ಪತ್ರಿಕೆಯಲ್ಲಿ ಜಾಹೀರಾತು ಬಂತು:

ಕಾಂಗ್ರೆಸ್ ಪಕ್ಷದಿಂದ ಇನ್ನೇನು ಮನೆ ಖರೀದಿ ಆಗುತ್ತದೆ ಎನ್ನುತ್ತಿರುವಾಗಲೇ, ಎಸ್.ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ವಿಜಯವಾಣಿ ಪತ್ರಿಕೆಯಲ್ಲಿ ಮನೆ ಮಾರಾಟಕ್ಕಿದೆ ಎಂಬ ಜಾಹೀರಾತು ಪ್ರಕಟಿಸಿದ್ದಾರೆ.

ಪತ್ರಿಕೆಯಲ್ಲಿ ಮನೆ ಮಾರಾಟಕ್ಕಿದೆ ಎಂಬ ಜಾಹೀರಾತು ಬರುತ್ತಿದ್ದಂತೆ ಈ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮನೆ, ಸ್ಮಾರಕವಾಗಬೇಕಿದ್ದ ಮನೆ ಮಾರಾಟಕ್ಕಿದೆ ಎಂಬ ಜಾಹೀರಾತು ಬಂತಲ್ಲ ಎಂಬ ವಿಚಾರ ಎಸ್ಸೆನ್ ಅನುಯಾಯಿಗಳಿಗೆ ಸಾಕಷ್ಟು ನೋವುಂಟು ಮಾಡಿದೆ.

ಇದನ್ನೂ ಓದಿ: ಎರಡು ದಿನ‌ ಚಿತ್ರದುರ್ಗಕ್ಕೆ ನೀರು ಬಂದ್

ಈ ಕಾರಣಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ, ಕರ್ನಾಟಕ ಏಕೀಕರಣದ ರೂವಾರಿಗೆ ಸರ್ಕಾರ ನೀಡುವ ಗೌರವ ಇದೇನಾ ಎಂಬರ್ಥದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.
ಎಸ್.ನಿಜಲಿಂಗಪ್ಪ ಅವರ ಮನೆ ಕುರಿತ ವೀಡಿಯೋ ಸ್ಟೋರಿ: 
https://youtu.be/F-ngQz39kpc

ಮತ್ಯಾಕೆ ಮನೆ ಖರೀದಿ ಆಗುತ್ತಿಲ್ಲ:

ಮನೆ ಖರೀಧಿಗೆ ಯಾಕೆ ವಿಳಂಬ ಆಗುತ್ತಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಯಾಕೆ ಖರೀದಿ ಆಗುತ್ತಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಬಂದಿದೆ.

ಹಿಂದೆ ಕವಿತಾ ಮನ್ನಿಕೇರಿ ಅವರು ಜಿಲ್ಲಾಧಿಕಾರಿ ಆಗಿದ್ದಾಗ ಮನೆ ಖರೀಧಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಇದಕ್ಕಾಗಿ ನಿಜಲಿಂಗಪ್ಪ ಅವರ ಮಗ, ಮೊಮ್ಮಗ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು.

ಇದನ್ನೂ ಓದಿ:  ಲಸಿಕೆಗಳು ಮಕ್ಕಳ ಮರಣ ತಪ್ಪಿಸುತ್ತವೆ | ಡಾ.ಡಿ.ಎಂ.ಅಭಿನವ್

ಅಮೇರಿಕಾದಲ್ಲಿ ನೆಲೆಸಿರುವ ಮೊಮ್ಮಗ ವಿನಯ್ ಆಗಮಿಸಿದ್ದರು. ಆದರೆ, ನೊಂದಣಿ ಆಗಲಿಲ್ಲ. ಅಧಿಕಾರಿಗಳು ತಾಂತ್ರಿಕ ನೆಪವೊಡ್ಡಿದರು.

ಮನೆ ಖರೀಧಿಗೆ ಇರುವ ತಾಂತ್ರಿಕ ಸಮಸ್ಯೆ ಏನು:

ಎಸ್.ನಿಜಲಿಂಗಪ್ಪ ಕಟ್ಟಿಸಿದ್ದ ಈ ಮನೆಯನ್ನು ಮೊಮ್ಮಗ ವಿನಯ್ ಹೆಸರಿಗೆ ವಿಲ್ ಬರೆದಿದ್ದಾರೆ. ನಿಜಲಿಂಗಪ್ಪ ಅವರ ಮೂವರು ಪುತ್ರರ ಅನುಭೋಗದ ನಂತರ ಮೊಮ್ಮಗನಿಗೆ ಸೇರತಕ್ಕದ್ದು ಎಂದು ಉಯಿಲಿನಲ್ಲಿ ಉಲ್ಲೇಖಿಸಲಾಗಿದೆ.

ಇದರಲ್ಲಿ ಎಸ್.ಎನ್.ಕಿರಣ್ ಶಂಕರ್ ಮಾತ್ರ ಮದುವೆಯಾಗಿದ್ದು, ಇನ್ನು ಇಬ್ಬರು ಸಹೋಧರರು ಮದುವೆ ಆಗಿಲ್ಲ. ಅದರಲ್ಲಿ ಹಿರಿಯ ಅಣ್ಣ ವಿನಯ್ ಹೆಸರಿಗೆ ಮನೆ ವರ್ಗಾವಣೆ ಮಾಡಲು ಕಾನೂನು ಪ್ರಕ್ರಿಯೆ ಮುಗಿಸಿದ್ದಾರೆ. ನಿಜಲಿಂಗಪ್ಪ ಅವರ 2ನೇ ಮಗ ರಾಜಣ್ಣ ನಿಧನರಾಗಿದ್ದಾರೆ.

ಈಗ ಎಸ್ಸೆನ್ ಮೊಮ್ಮಗ ಅಂದರೆ, ಕಿರಣ್ ಶಂಕರ್ ಅವರ ಪುತ್ರ ವಿನಯ್ ಹೆಸರಿಗೆ ಮನೆ ನೊಂದಣಿ ಆಗಿ, ಇ-ಸ್ವತ್ತೂ ಆಗಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಸ್ ಸಂಚಾರ ವ್ಯವಸ್ಥೆ ಬದಲಾವಣೆ | ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಜಿಲ್ಲಾಡಳಿತ ನಿರ್ಧಾರ

ಆದರೆ, ಜಿಲ್ಲಾಡಳಿತ ಮನೆ ನೊಂದಣಿಗೆ ನಿಜಲಿಂಗಪ್ಪ ಅವರ ಇಡೀ ಕುಟುಂಬ ಬರಬೇಕು. ಅಂದರೆ, ಅವರ ಪುತ್ರಿಯರು ಬರಬೇಕು ಎಂಬ ಷರತ್ತು ವಿಧಿಸಿದ್ದ ಕಾರಣಕ್ಕೆ ಮನೆ ಖರೀಧಿ ಆಗಿಲ್ಲ.

ಜಿಲ್ಲಾಡಳಿತದ ಈ ನಿರ್ಧಾರದಿಂದ ಬೇಸತ್ತ ಎಸ್.ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಮನೆಯನ್ನು ಸರ್ಕಾರಕ್ಕೆ ಮಾರಾಟ ಮಾಡದೇ, ಖಾಸಗಿಯವರಿಗೆ ಮಾರಲು ನಿರ್ಧರಿಸಿದ ಪರಿಣಾಮವೇ ಕಾಂಗ್ರೆಸ್ ಖರೀಧಿಗೆ ಮುಂದಾಗಿದ್ದು, ಈಗ ಪತ್ರಿಕೆಯಲ್ಲಿ ಜಾಹೀರಾತು ಬಂದಿರುವುದು.

ಎಲ್ಲಿದೆ ಗೊತ್ತಾ ನಿಜಲಿಂಗಪ್ಪ ಮನೆ:

ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿ ಜಿಲ್ಲಾಧಿಕಾರಿ ಬಂಗಲೆ ಪಕ್ಕದ ರಸ್ತೆಯಲ್ಲಿ ಪೂರ್ವಾಭಿಮುಖವಾಗಿ ಪಾರಂಪರಿಕ ಕಟ್ಟಡದಂತೆ ನಿಜಲಿಂಗಪ್ಪ ಅವರ ಮನೆ ಇದೆ.

ಚಿತ್ರದುರ್ಗದಲ್ಲಿ ವಕೀಲಿ ವೃತ್ತಿ ಮಾಡುವಾಗ ಎಸ್.ನಿಜಲಿಂಗಪ್ಪ ಅವರು, 117*130 ಅಡಿ ಜಾಗ ಖರೀಧಿಸಿ ಇದರಲ್ಲಿ 2600 ಚದರ ಅಡಿ ವ್ಯಾಪ್ತಿಯಲ್ಲಿ ಈ ಮನೆಯನ್ನು ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಮಂಗಳವಾರದ ಹತ್ತಿ ರೇಟ್ ಇಲ್ಲಿದೆ..

ನಿಜಲಿಂಗಪ್ಪ ಅವರ ಈ ಮನೆಯನ್ನು ದುರ್ಗದ ಜನ ಅಭಿಮಾನದಿಂದ ವೈಟ್ ಹೌಸ್ ಎಂದು ಕರೆಯುತ್ತಾರೆ. ಮಾಜಿ ಮುಖ್ಯಮಂತ್ರಿ ಆದವರು ಬೆಂಗಳೂರಿನಲ್ಲಿ ನೆಲೆಸುತ್ತಾರೆ ಎನ್ನುವ ಮಾತಿಗೆ ವ್ಯತಿರಿಕ್ತವಾಗಿ, ಎಸ್ಸೆನ್ ತಮ್ಮ ಕೊನೆಯ ದಿನಗಳನ್ನು ಇದೇ ಮನೆಯಲ್ಲಿ ಕಳೆದಿದ್ದರು ಎನ್ನುವುದು ವಿಶೇಷ.

ನಾಲ್ಕು ಬಾರಿ ಮುಖ್ಯಮಂತ್ರಿ, ಒಮ್ಮೆ ಸಂಸದರು, ಎಐಸಿಸಿ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪ 1937 ರಲ್ಲಿ ಕಟ್ಟಿಸಿಕೊಂಡು ಏಕೈಕ ಮನೆ ಇದು. ಅವರ ಹೆಸರಿನಲ್ಲಿರುವ ಏಕೈಕ ಸ್ಥಿರಾಸ್ಥಿಯೂ ಇದೇ ಆಗಿದೆ. ಈಗ ಅದೇ ಮಾರಾಟಕ್ಕಿದೆ.

ಈ ವಿಚಾರ ದುರ್ಗದಲ್ಲಿ ಅಜ್ಜನ ಮನೆ ಮಾರಾಟಕ್ಕಿದೆಯಂತೆ, 10 ಕೋಟಿಯಂತೆ ಎಂಬರ್ಥದಲ್ಲಿ ಚರ್ಚೆಯಾಗುತ್ತಿದೆ.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsDream Housefeaturedformer Chief MinisterHosadurgaKannada NewsNijalingappa House For SaleS. Nijalingappaಎಸ್.ನಿಜಲಿಂಗಪ್ಪಕನಸಿನ ಮನೆಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ನಿಜಲಿಂಗಪ್ಪ ಮನೆ ಮಾರಾಟಕ್ಕೆಫೀಚರ್ಡ್ಮಾಜಿ ಮುಖ್ಯಮಂತ್ರಿಹೊಸದುರ್ಗ
Share This Article
Facebook Email Print
Previous Article CHITRADURGA APMC: ಚಿತ್ರದುರ್ಗ ಮಾರುಕಟ್ಟೆ | ಮಂಗಳವಾರದ ಹತ್ತಿ ರೇಟ್ ಇಲ್ಲಿದೆ..
Next Article Javanagondanahally GP ZP: ಕರ್ತವ್ಯ ನಿರ್ಲಕ್ಷ್ಯ ಜವನಗೊಂಡನಹಳ್ಳಿ ಪಿಡಿಓ ಅಮಾನತು
Leave a Comment

Leave a Reply Cancel reply

Your email address will not be published. Required fields are marked *

ಭಾರತೀಯ ವಿಜ್ಞಾನ ಸಂಸ್ಥೆ
ಎಸ್‌ಸಿ, ಎಸ್‌ಟಿ ಯುವಜನರಿಗೆ ಒಣಭೂಮಿ ಆಹಾರ ಉದ್ಯಮಗಳ ಕುರಿತು 3 ದಿನಗಳ ತರಬೇತಿ
ಮುಖ್ಯ ಸುದ್ದಿ
ಶ್ರೀ ಕೃಷ್ಣ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ
ಸೆಪ್ಟೆಂಬರ್ 04ರಂದು ಶ್ರೀ ಕೃಷ್ಣ ಜಯಂತಿ | ಅರ್ಥಪೂರ್ಣ, ಶ್ರದ್ಧಾಭಕ್ತಿಯಿಂದ ಜಯಂತಿ ಆಚರಣೆ
ಮುಖ್ಯ ಸುದ್ದಿ
garlic with mustard oil
ಬೆಳ್ಳುಳ್ಳಿಯನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಏನಾಗುತ್ತದೆ? ತಿಳಿಯಿರಿ 
Life Style
today bhavishya
ದಿನ ಭವಿಷ್ಯ | ಆಗಸ್ಟ್ 28 | ವೃತ್ತಿಪರ ವ್ಯವಹಾರದಲ್ಲಿ ಲಾಭ, ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ
Dina Bhavishya
© Chitradurga News 2025 | Powered By Karnatakabest.com
Loading Comments...
Welcome Back!

Sign in to your account

Username or Email Address
Password

Lost your password?

Not a member? Sign Up