
CHITRADURGA NEWS | 11 July 2025
ಹೊಸದುರ್ಗ: ಗುರು ಎಂದರೆ ಬೆಳಕು ಕರುಣೆ ದಯೆ ದಾರಿದೀಪ ಗುರುವನ್ನು ಪರಿಪೂರ್ಣವಾಗಿ ನಂಬಿದವನಿಗೆ ಗುರುತ್ವದ ಅನುಭೂತಿ ಲಭಿಸಲು ಪ್ರಾರಂಭವಾಗಿರುತ್ತದೆ ಎಂದು ಕುಂಚಟಿಗ ಮಹಾಸಂಸ್ಥಾನ ಮಠದ ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಹಾಗೂ ಗುರು ಪೂರ್ಣಿಮಾ ಮಹೋತ್ಸವದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ,
ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗ ವಿನಯತೆ. ವಿನಮ್ರತೆ. ಆಧ್ಯಾತ್ಮದ ಅನುಭೂತಿ ಪ್ರಾಪ್ತವಾಗುತ್ತದೆ. ಗುರುವನ್ನು ಲೌಕಿಕವಾಗಿ ನೋಡದೆ ಅಲೌಕಿಕವಾಗಿ ನೋಡಿದಾಗ ಗುರುವಿನ ನಿಜ ಸ್ವರೂಪ ಪ್ರಾಪ್ತವಾಗುತ್ತದ.
ಬದುಕಿನ ಪರಿಪೂರ್ಣತೆಗೆ ಗುರುವಿನ ಮಾರ್ಗದರ್ಶನ ಅತ್ಯಮೂಲ್ಯ, ಮಾಂಸ ಪಿಂಡವನ್ನು ಮಂತ್ರಪಿಂಡವಾಗಿಸುವ ಶಕ್ತಿ ಇರುವುದು ಗುರುವಿಗೆ ಮಾತ್ರ.ನರಕದಿಂದ ಸ್ವರ್ಗಕ್ಕೆ ದಾರಿ ತೋರಿಸುವ ದಯಾಮಹಿ ಗುರು ಹಾಗಾಗಿ ಗುರುವನ್ನು ದೇವರನ್ನು ಅತ್ಯಂತ ಸದಾ ಭಕ್ತಿಯಿಂದ ಆರಾಧಿಸಿ ಕೇವಲ ಗುರುಪೂರ್ಣಿಮೆ ಎಂದು ಗುರುವನ್ನು ನೆನೆದು ವರ್ಷವಿಡಿ ಗುರುವಿನಿಂದ ದೂರ ಇರುವುದು ತರವಲ್ಲ. ಗುರುವೆಂದರೆ ಪ್ರತಿನಿತ್ಯ ಪ್ರತಿಕ್ಷಣ ನೆನೆದು ಅವರು ತೋರಿದ ಪಥದಲ್ಲಿ ಬದುಕನ್ನು ಆನಂದಮಯವಾಗಿ ನಡೆಸಲು ಪ್ರಯತ್ನಿಸಿ.
ಗುರುವನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ, ಕಾವಿದರಿಸಿದ ಮೇಲೆ ಕುಲ ಜಾತಿಗಳನ್ನು ಮೀರಿ ಬೆಳಕಿನಂತೆ ಗುರುವಿರಬೇಕು. ಜಾತಿಯಲ್ಲಿ ಜನನ ಪಡೆದಿರುವ ಕಾರಣಕ್ಕೆ ಜಾತಿಗೆ ಸೀಮಿತಗೊಳಿಸಬೇಡಿ. ಜಾತ್ಯತೀತವಾಗಿ ಎಲ್ಲರನ್ನೂ ಸಮಾನವಾಗಿ ಕಾಣುವ ಗುರುವನ್ನು ಹಾಗೆ ಸಾಗಲು ಬಿಡಿ, ಜಾತಿಯ ಸಂಕೋಲೆಗೆ ಕಟ್ಟು ಹಾಕಬೇಡಿ ಎಂದು ಭಕ್ತರಿಗೆ ಕಿವಿಮಾತು ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಹೊಸದುರ್ಗ ಬಿಜೆಪಿ ಮಂಡಲ ನೂತನ ಅಧ್ಯಕ್ಷರಾದ ಅಣ್ಣಪ್ಪ ಮಾತನಾಡಿ, ಗುರುವಿನ ಆಶೀರ್ವಾದದಿಂದ ಅಧ್ಯಕ್ಷನಾಗಿದ್ದೇನೆ ಅವರ ಮಾರ್ಗದರ್ಶನದಲ್ಲಿ ಜೀವನ ಸಾಗಿಸಲು ಅವರ ಕಾರ್ಯಕರ್ತತ್ವ ಬದ್ಧತೆ, ಏನನ್ನಾದರೂ ಸಾಧಿಸಬೇಕೆಂಬ ಶ್ರೀಗಳ ಛಲವನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಂಡು ಸಾಗುತ್ತೇನೆ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಎಸ್. ದ್ಯಾಮಣ್ಣ, ಕಾರ್ಯದರ್ಶಿ ತಣಿಗೆಕಲ್ಲು ಲೋಕಣ್ಣ ಮಾತನಾಡಿದರು.ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ಕೋಡಿಹಳ್ಳಿ ದರಣಪ್ಪ, ತಮ್ಮಣ್ಣ, ಕಲ್ಕೆರೆ ಶೇಖರಪ್ಪ, ಕನಕ ವಿದ್ಯಾಸಂಸ್ಥೆಯ ಕೃಷ್ಣಮೂರ್ತಿ, ಸಪ್ತಗಿರಿ ಗುರು, ದಾವಣಗೆರೆಯ ಹನುಮಪ್ಪ, ಹಿರಿಯೂರಿನ ರೇವಣಸಿದ್ದಪ್ಪ, ತಣಿಗೆಕಲ್ಲು ತಿಪ್ಪೇಸ್ವಾಮಿ, ಗೂಳಿಹಟ್ಟಿ ಹಾಲಸಿದ್ದಪ್ಪ, ಸಿದ್ದಪ್ಪ ರಾಮಪ್ಪ, ದೊಡ್ಡಘಟ್ಟದ ಮಾಂತೇಶ್, ಸಂಗಮ್ ಮಹೇಶ್ ಸೇರಿದಂತೆ ಕುಂಚಶ್ರೀ ಮಹಿಳಾ ಸಂಘದ ಪದಾಧಿಕಾರಿಗಳು, ಸಂಗಮೇಶ್ವರ ಯುವ ವೇದಿಕೆಯ ಪದಾಧಿಕಾರಿಗಳು, ಸಂಗಮೇಶ್ವರ ಸಮುದಾಯ ಭವನದ ಪದಾಧಿಕಾರಿಗಳು, ಶಾಂತವೀರ ಶ್ರೀ ಸೌಹಾರ್ದ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು, ಶ್ರೀಮಠದ ಅಪಾರ ಭಕ್ತರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
