
CHITRADURGA NEWS |06 SEPTEMBER 2024
ಚಿತ್ರದುರ್ಗ: ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಶುಕ್ರವಾರ ಗೌರಿ ಹಬ್ಬವನ್ನು ತೋಟಗಳಲ್ಲಿ ಅತ್ಯಂತ ವಿಶೇಷವಾಗಿ ಆಚರಿಸಲಾಯಿತು.
ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ ಅವರ ಅಡಿಕೆ ತೋಟದಲ್ಲಿ ಹಸಿರು ಚಪ್ಪರ ಹಾಕಿ ಗೌರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಗೌರಮ್ಮನಿಗೆ ಸೀರೆ ಉಡಿಸಿ, ಗೆಜ್ಜೆ ವಸ್ತ್ರ, ಬಂಗಾರದ ಒಡವೆ ಹಾಕಿ ಹೂವಿನ ಅಲಂಕಾರ ಮಾಡಲಾಗಿತ್ತು.

ಪೂಜೆ ಬಳಿಕ ಅಡಿಕೆಯ ಒಂದು ಗೊನೆ ಹೊಂಬಾಳೆ, ಬಾಳೆ ಕಂದನ್ನು ನೆಟ್ಟು ಕಂದಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಅದನ್ನು ಕಡಿಯಲಾಯಿತು. ತದನಂತರ ತೋಟದ ತುಂಬಾ ಸರಾಗ ಹಾಕಲಾಯಿತು.

ಕ್ಲಿಕ್ ಮಾಡಿ ಓದಿ: ವಾಣಿವಿಲಾಸ ಜಲಾಶಯದತ್ತ ಎತ್ತಿನಹೊಳೆ
ಗಾಯತ್ರಿ ಸಿದ್ದೇಶ್ವರ್, ಜಿ.ಎಸ್.ಅಶ್ವಿನಿ, ಜಿ.ಆರ್.ಶೀಲ ಪ್ರಸನ್ನ ಕುಮಾರ್, ಜಿ.ಎಲ್. ವೀಣಾ ಲಿಂಗರಾಜು, ಜಿ.ಎ.ಸವಿತಾ ಅನಿತ್ ಕುಮಾರ್, ಜಿ.ಎಂ.ಪ್ರಸನ್ನ ಕುಮಾರ್, ಜಿ.ಎಂ.ಲಿಂಗರಾಜು, ಜಿ.ಎಸ್.ಅನಿತ್ ಕುಮಾರ್, ಮಾಜಿ ಶಾಸಕರಾದ ರಾಮಚಂದ್ರಪ್ಪ, ರಾಜೇಶ್, ಬಿಜೆಪಿ ಮುಖಂಡ ರಘು ಚಂದನ್ ಹಾಗೂ ದಾವಣಗೆರೆ ಜಿಲ್ಲೆಯ ಬಿಜೆಪಿ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
