ಮುಖ್ಯ ಸುದ್ದಿ
Award; ವಿಶ್ವಮಾನವ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

CHITRADURGA NEWS | 06 SEPTEMBER 2024
ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಸೀಬಾರ-ಗುತ್ತಿನಾಡಿನ ವಿಶ್ವಮಾನವ ಹಿರಿಯ ಪ್ರಾಥಮಿಕ ಶಾಲೆಯು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ(Award)ಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕ್ಲಿಕ್ ಮಾಡಿ ಓದಿ: DCC ಬ್ಯಾಂಕ್ ಚುನಾವಣೆ | ಶಾಸಕ ಟಿ.ರಘುಮೂರ್ತಿ ನಾಮಪತ್ರ ತಿರಸ್ಕøತ

ಚಿತ್ರದುರ್ಗ ತಾಲ್ಲೂಕು ಗುತ್ತಿನಾಡಿನ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಚಿತ್ರದುರ್ಗ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ನಡೆಸಲಾಯಿತು.
ವೈಯಕ್ತಿಕ ಆಟಗಳಲ್ಲಿ ಬಾಲಕರ ವಿಭಾಗದಲ್ಲಿ ಪವನ್ 100ಮೀ ಓಟ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ, ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ, ಆರ್ಯನ್ 100ಮೀ ಓಟ ದ್ವಿತೀಯ ಸ್ಥಾನ, ಸಂಜಯ್ 200ಮೀ ಓಟ ಪ್ರಥಮ, ನವೀದ್ ದ್ವಿತೀಯ ಸ್ಥಾನ, ಪ್ರತೀಕ್ 400ಮೀ ಓಟ ಪ್ರಥಮ ಸ್ಥಾನ, 600ಮೀ ಓಟದಲ್ಲಿ ಶ್ರೇಯಸ್ ಪ್ರಥಮ, ನಿತಿನ್ ರಾವ್ ದ್ವಿತೀಯ ಸ್ಥಾನ, ಎತ್ತರ ಜಿಗಿತದಲ್ಲಿ ಶ್ರೇಯಸ್ ಪ್ರಥಮ, ವಿಷ್ಣುಯಾದವ್ ದ್ವಿತೀಯ ಸ್ಥಾನ, ಗುಂಡು ಎಸೆತ ಹೇಮಂತ್ ಗೌಡ ದ್ವಿತೀಯ ಸ್ಥಾನ, ಚಕ್ರಎಸೆತ ಸಂಜಯ್,ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಚಕ್ರ ಎಸೆತ ಲಾವಣ್ಯ.ವಿ ಪ್ರಥಮ ಸ್ಥಾನ, ಹರ್ಡಲ್ಸ್ ಹಾಗೂ ಎತ್ತರ ಜಿಗಿತದಲ್ಲಿ ಐಶ್ವರ್ಯ ಪ್ರಥಮ ಸ್ಥಾನ, 100ಮೀ ಓಟ ಲಾವಣ್ಯ ತೃತೀಯ ಸ್ಥಾನ, ಚಕ್ರ ಎಸೆತ, ಗುಂಡು ಎಸೆತ, ಎತ್ತರಜಿಗಿತದಲ್ಲಿ ಚೇತನ ತೃತೀಯ ಸ್ಥಾನ, ಸಾನ್ವಿ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ, 600ಮೀ ಓಟ ಬಿಂದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕ್ಲಿಕ್ ಮಾಡಿ ಓದಿ: ಎತ್ತಿನಹೊಳೆ Project ಬಟನ್ ಹೊಡೆಯಿರಿ | ಜನರಿಗೆ ಸುಳ್ಳು ಹೇಳಬೇಡಿ | ಸಂಸದ ಗೋವಿಂದ ಕಾರಜೋಳ ಗರಂ
ಗುಂಪು ಆಟಗಳಲ್ಲಿ ಬಾಲಕರ ವಿಭಾಗದಲ್ಲಿ 4×100 ಮೀ ರಿಲೇ ಓಟ, ವಾಲಿಬಾಲ್, ಖೋ-ಖೋ ಪ್ರಥಮ ಸ್ಥಾನ, ಥ್ರೋಬಾಲ್ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್, ಕಬ್ಬಡ್ಡಿ ಪ್ರಥಮ ಸ್ಥಾನ, 4×100 ಮೀ ರಿಲೇ ಓಟ, ಖೋ-ಖೋ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಶಾಲೆಯಿಂದ ಅಭಿನಂದನೆ ತಿಳಿಸಿದ್ದಾರೆ.
