ಮುಖ್ಯ ಸುದ್ದಿ
ಎತ್ತಿನಹೊಳೆ Project ಬಟನ್ ಹೊಡೆಯಿರಿ | ಜನರಿಗೆ ಸುಳ್ಳು ಹೇಳಬೇಡಿ | ಸಂಸದ ಗೋವಿಂದ ಕಾರಜೋಳ ಗರಂ

CHITRADURGA NEWS | 06 SEPTEMBER 2024
ಚಿತ್ರದುರ್ಗ: ಈಗ ಕಾಂಗ್ರೆಸ್ ಪಕ್ಷದವರು ಬಟನ್ ಒತ್ತುತ್ತಿರುವ ಎತ್ತಿನಹೊಳೆ ಯೋಜನೆ (Project) ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಪರಿಸರ, ಅರಣ್ಯ ಇಲಾಖೆ ಅನುಮೋದನೆ ಪಡೆದುಕೊಂಡಿದ್ದು ಬಿಜೆಪಿ. ಆದರೆ, ಡಿ.ಕೆ.ಶಿವಕುಮಾರ್ ಜನರಿಗೆ ಸುಳ್ಳು ಹೇಳಿ ತರಾತುರಿಯಲ್ಲಿ ಉದ್ಘಾಟಿಸಲು ಹೋಗಿದ್ದಾರೆ ಎಂದು ಗರಂ ಆಗಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರದಲ್ಲಿ ಅನುಮೋದನೆ ನೀಡಿದ ಯೋಜನೆಗೆ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದರು. ಅಂದು ಕಾಂಗ್ರೆಸ್ ಸರ್ಕಾರ ಕೇವಲ 45 ಕೋಟಿ ಅನುದಾನ ನೀಡಿತ್ತು ಎಂದಿದ್ದಾರೆ.
ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಇದರಲ್ಲಿ ಹಂಚಿಕೆ ಮಾಡಲು ನೀರೇ ಇಲ್ಲ ಎಂದು ಹೇಳಿದ್ದರು.
ಈಗ ವಿರೋಧ ಮಾಡಿದವರೇ ಲೋಕಾರ್ಪಣೆ ಮಾಡಲು ಹೋಗಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದರು.
ಕಾಮಗಾರಿ ಪೂರ್ಣಗೊಳಿಸದೆ ಯೋಜನೆ ಲೋಕಾರ್ಪಣೆ ಸರಿಯಲ್ಲ. ಈಗ ಬಟನ್ ಹೊಡೆದು ಜನರ ಗಮನ ಸೆಳೆಯಲು ಹೋಗಿದ್ದಾರೆ ಎಂದು ಟೀಕಿಸಿದರು.
ಎತ್ತಿನಹೊಳೆ ಯೋಜನೆಗೆ ಪರಿಸರ ಇಲಾಖೆಯಿಂದ ನುಮೋದನೆ ಪಡೆಯಲು ಕಾಂಗ್ರೆಸ್ 20 ವರ್ಷ ಪರದಾಡಿತ್ತು. ಮತ್ತೆ ಕಾಂಗ್ರೆಸ್ ಈ ಯೋಜನೆಗೆ ಕೊಟ್ಟಿದ್ದು ಕೇವಕ 5400 ಕೋಟಿ. ಬಿಜೆಪಿ ಸರ್ಕಾರ 9800 ಕೋಟಿ ಕೊಟ್ಟಿದೆ. ಈ ವರ್ಷ ಜುಲೈವರೆಗೆ ಎತ್ತಿನಹೊಳೆ ಯೋಜನೆಗೆ 880 ಕೋಟಿ ಮಾತ್ರ ಮಾತ್ರ ಕೊಟ್ಟಿದ್ದಾರೆ ಎಂದರು.
ತರಾತುರಿಯಲ್ಲಿ ಯೋಜನೆ ಕೋಕಾರ್ಪಣೆ ಮಾಡುವುದರಿಂದ ಯೋಜಿತ ಜಿಲ್ಲೆಗಳಿಗೆ ನೀರು ಹೋಗುವುದಿಲ್ಲ. ಆದರೆ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಲ ಸಂಪನ್ಮೂಲ ಇಲಾಖೆ ಕೆಲಸ ಮಾಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಅಸಮಧಾನ ವ್ಯಕ್ತಪಡಿಸಿದ್ದಾರೆ.
