ಲೋಕಸಮರ 2024
ಚೌಕಾಸಿ ಇಲ್ಲದೆ ತರಕಾರಿ ಖರೀಧಿಸಿದ ಗೋವಿಂದ ಕಾರಜೋಳ

CHITRADURGA NEWS | 05 MARCH 2024
ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಬೆಳ್ಳಂ ಬೆಳಗ್ಗೆ ಬೀದಿಗಿಳಿದ್ದರು.
ಶುಕ್ರವಾರ ಬೆಳಗ್ಗೆ 7 ಗಂಟೆಗೆ ನಗರದ ಒನಕೆ ಓಬವ್ವ ಸ್ಟೇಡಿಯಂಗೆ ಆಗಮಿಸಿದ ಕಾರಜೋಳ, ಇಲ್ಲಿ ವಾಯು ವಿಹಾರಿಗಳನ್ನು ಮಾತನಾಡಿಸಿ ಕಷ್ಟ ಸುಖ ಆಲಿಸಿ, ಮತಯಾಚನೆ ಮಾಡಿದರು.
ಆನಂತರ ಸ್ಟೇಡಿಯಂ ಎದುರು ತರಕಾರಿ, ಹೂವು ಮಾರುತ್ತಿದ್ದವರನ್ನು ಮಾತನಾಡಿಸಿದರು.

ಇದನ್ನೂ ಓದಿ: ಮುಖ್ಯಮಂತ್ರಿಗೆ ಶ್ರೀಗಳಿಂದ ಆಶೀರ್ವಾದ | ಭೋವಿ ಗುರುಪೀಠಕ್ಕೆ ಭೇಟಿ
ಈ ವೇಳೆ ತರಕಾರಿ ವ್ಯಾಪಾರಿ ಬಳಿ ಟಮೋಟಾ, ಹಸಿ ಮೆಣಸಿನ ಕಾಯಿ, ಜವಳಿ ಕಾಯಿ, ಅವರೇಕಾಯಿ, ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ಚೌಕಾಸಿ ಮಾಡದೆ ಖರೀಧಿಸಿದರು.

ತರಕಾರಿ ಖರೀಧಿಸಿದ ಗೋವಿಂದ ಕಾರಜೋಳ
ತರಕಾರಿ ಖರೀಧಿಸಿದ ನಂತರ ಗೋವಿಂದ ಕಾರಜೋಳ ತಮ್ಮ ಮೊಬೈಲ್‍ನಿಂದ 150 ರೂ.ಗಳನ್ನು ಪೋನ್ ಪೇ ಮೂಲಕ ಹಣ ಹಾಕಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಸಿದ್ದರಾಮಯ್ಯ, ವಿಜಯೇಂದ್ರ ಆಗಮಿಸಿದ ಹೆಲಿಕಾಪ್ಟರ್ ತಪಾಸಣೆ
ಇಲ್ಲಿಂದ ನೇರವಾಗಿ ಜೋಗಿಮಟ್ಟಿ ಮಾರ್ಗದ ಡಬಲ್ ರೋಡ್‍ನಲ್ಲಿರುವ ಕೆಎ 16 ಕೆಫೆಗೆ ಭೇಟಿ ನೀಡಿ ಚಹಾ ಕುಡಿದು ಕೆಲಹೊತ್ತು ಹರಟೆ ಹೊಡೆದು ಅಲ್ಲಿಂದ ತೆರಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಲೋಕಸಭಾ ಕ್ಷೇತ್ರದ ಸಹಪ್ರಭಾರಿ ಎಸ್.ಲಿಂಗಮೂರ್ತಿ, ಗೋವಿಂದ ಕಾರಜೋಳ ಪುತ್ರ ಉಮೇಶ್ ಕಾರಜೋಳ, ನಾಗರಾಜ್ ಬೇದ್ರೆ, ವೆಂಕಟೇಶ್ ಯಾದವ್, ವಿ.ಎಲ್,ಪ್ರಶಾಂತ್ ಮತ್ತಿತರರಿದ್ದರು.
